ಬರ್ಮಿಂಗ್ಹಮ್ : ಭಾರತದ ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾಗಿರುವ ತ್ರೀಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಂಚಂದ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಅವರು ಆಸ್ಟ್ರೇಲಿಯಾದ ಸುಹಾನ್ ಯೆನ್ ಚೆನ್ ಹಾಗೂ ಗ್ರೊನೆ ಸೊಮರ್‌ವಿಲ್ಲೆ ವಿರುದ್ಧದ ಕಂಚಿನ ಪದಕದ ಪಂದ್ಯದಲ್ಲಿ ಜಯ ಸಾಧಿಸಿದರು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ಯುವ ಜೋಡಿ ೨೧-೧೫, ೨೧-೧೮ ಗೇಮ್‌ಗಳಿಂದ ಜಯ ಸಾಧಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಈ ಇಬ್ಬರು ಭಾರತೀಯ ಆಟಗಾರ್ತಿಯರು ಪಂದ್ಯದುದ್ದಕ್ಕೂ ಪಾರಮ್ಯ ಮೆರೆದು ಪದಕ ತಮ್ಮದಾಗಿಸಿಕೊಂಡರು.
ಇದಕ್ಕಿಂದ ಮೊದಲು ಭಾರತದ ಪುರುಷರ ಸಿಂಗಲ್ಸ್‌ನ ಆಟಗಾರ ಕಿಡಂಬಿ ಶ್ರೀಕಾಂತ್ ಕಂಚಿನ ಪದಕ ಗೆದ್ದಿದ್ದರು.
ಇದನ್ನೂ ಓದಿ | CWG- 2022 | ಬ್ಯಾಡ್ಮಿಂಟನ್‌ನಲ್ಲಿ ಕಿಡಂಬಿ ಶ್ರೀಕಾಂತ್‌ಗೆ ಕಂಚಿನ ಪದಕ