Site icon Vistara News

CWG- 2022 | ಮುಂದುವರಿದ ಭಾರತದ ಮಿಶ್ರ ಬ್ಯಾಡ್ಮಿಂಟನ್‌ ತಂಡದ ಪಾರಮ್ಯ

CWG-2022

ಬರ್ಮಿಂಗ್ಹಮ್ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಭಾರತದ ಬ್ಯಾಡ್ಮಿಂಟನ್‌ ಮಿಶ್ರ ತಂಡದ ಪಾರಮ್ಯ ಮುಂದುವರಿದಿದೆ. ಶನಿವಾರ ಆಸ್ಟ್ರೇಲಿಯಾ ತಂಡವನ್ನೂ ೪-೧ ಅಂತರದಿಂದ ಮಣಿಸಿರುವ ಭಾರತ ಸತತವಾಗಿ ಮೂರು ಪಂದ್ಯಗಳನ್ನು ಗೆದ್ದು ಕ್ವಾರ್ಟರ್ ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದದೆ. ನಾಲ್ಕನೇ ಕ್ವಾರ್ಟರ್‌ ಫೈನಲ್‌ ಪಂಧ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡ ಮುಖಾಮುಖಿಯಾಗಲಿವೆ.

ಪುರುಷರ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ ಯಿಂಗ್‌ ಕ್ಸಿಯಾಂಗ್‌ ಲಿನ್‌ ವಿರುದ್ಧ ೨೧-೧೪, ೨೧-೧೩ ಗೇಮ್‌ಗಳಿಂದ ಕಿಡಂಬಿ ಶ್ರೀಕಾಂತ್‌ ಗೆಲುವು ಸಾಧಿಸಿದರೆ, ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ. ವಿ ಸಿಂಧೂ ವೆಂಡಿ ಚೆನ್ ವಿರುದ್ಧ ೨೧-೧೦, ೨೧-೧೨ ಅಂಕಗಳಿಂದ ವಿಜಯ ಸಾಧಿಸಿದರು.

ಮೂರನೇ ಪಂದ್ಯದಲ್ಲಿ ಭಾರತದ ಸುಮೀತ್‌ ರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಆಸೀಸ್‌ನ ಜಾಕ್‌ ಯು ಹಾಗೂ ಟ್ರಾನ್‌ ಹೊಂಗ್ ಫಾಮ್‌ ವಿರುದ್ಧ ೨೧-೧೬, ೨೧-೧೯ ಅಂಕಗಳಿಂದ ಜಯ ಸಾಧಿಸಿದರು.

ನಾಲ್ಕನೇ ಪಂದ್ಯ ಮಹಿಳೆಯರ ಡಬಲ್ಸ್‌. ಈ ಪಂದ್ಯದಲ್ಲಿ ಭಾರತಕ್ಕೆ ಸೋಲು ಎದುರಾಯಿತು. ತ್ರೀಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಚಂದ್ ಜೋಡಿ ಆಸ್ಟ್ರೇಲಿಯಾದ ಸಾನ್‌ ಯು ವೆಂಡಿ ಹಾಗೂ ಗ್ರೊನಿ ಸೊಮರ್‌ವಿಲ್ಲೆ ವಿರುದ್ಧ ೧೩-೨೧, ೧೯-೨೧ ಗೇಮ್‌ಗಳಿಂದ ಸೋಲು ಕಂಡರು.

ನಾಲ್ಕನೇ ಪಂದ್ಯದಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಯಿಂಗ್‌ ಕ್ಸಿಯಾಂಗ್‌ ಲಿನ್‌ ಹಾಗೂ ಗ್ರೊನೆ ಸೊಮರ್‌ವಿಲೆ ವಿರುದ್ಧ ೨೧-೧೪, ೨೧-೧೧ ಗೇಮ್‌ಗಳಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ವೇಟ್‌ಲಿಫ್ಟರ್‌ ಜೆರಿಮಿಗೆ ಸ್ವರ್ಣ

Exit mobile version