Site icon Vistara News

CWG- 2022 | ಆಸೀಸ್‌ ಬಳಗವನ್ನು ಮಣಿಸಲು ಭಾರತೀಯ ವನಿತೆಯರು ತಯಾರು

cwg-2022

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ನ (CWG-2022) ಸ್ಪರ್ಧೆಗಳು ಶುಕ್ರವಾರ ಆರಂಭಗೊಂಡಿದ್ದು, ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳೆಯರ ತಂಡಗಳ ನಡುವೆ ಶುಕ್ರವಾರ ಮಧ್ಯಾಹ್ನ ಟಿ೨೦ ಪಂದ್ಯ ನಡೆಯಲಿದೆ. ಹರ್ಮನ್‌ಪ್ರೀತ್‌ ಕೌರ್ ನೇತೃತ್ವದ ಭಾರತ ಬಳಗವು ಮೆಗ್‌ ಲ್ಯಾನಿಂಗ್‌ ನಾಯಕತ್ವದ ಬಲಿಷ್ಠ ಆಸೀಸ್‌ ಪಡೆಗೆ ಸಡ್ಡು ಹೊಡೆಯಲು ಸಕಲ ಸಿದ್ಧತೆ ನಡೆಸಿಕೊಂಡಿದೆ.

ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ ಸ್ಟೇಡಿಯಮ್‌ನಲ್ಲಿ ಮಧ್ಯಾಹ್ನ ೨.೩೦ಕ್ಕೆ ಪಂದ್ಯ ನಡೆಯಲಿದ್ದು, ಗೆಲುವಿಗಾಗಿ ಇತ್ತಂಡಗಳು ನಡುವೆ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ಸಾಧ್ಯತೆಗಳಿವೆ.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಟಿ೨೦ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಿದ್ದು, ಚೊಚ್ಚಲ ಪದಕವನ್ನು ತನ್ನದಾಗಿಸಿಕೊಳ್ಳುವುದು ಭಾರತ ತಂಡದ ವನಿತೆಯರ ಗುರಿಯಾಗಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದರೆ ಗೆಲುವಿನ ಹಾದಿಯಲ್ಲಿ ಉತ್ತಮ ಆರಂಭ ದೊರೆಯಬಹುದು.

ಸೆಮೀಸ್‌ ಕನಸು

ಭಾರತ ಸ್ಪರ್ಧೆಯ ಎ ಗುಂಪಿನಲ್ಲಿದ್ದು, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಬಾರ್ಬಡೋಸ್‌ ತಂಡಗಳು ಈ ಗುಂಪಿನ ಇನ್ನುಳಿದ ತಂಡಗಳು. ಭಾರತ ತಂಡ ಮೂರು ತಂಡಗಳ ವಿರುದ್ಧ ಆಡಬೇಕಿದ್ದು, ಎರಡು ಪಂದ್ಯಗಳನ್ನು ಗೆದ್ದರೆ ಸೆಮಿ ಫೈನಲ್‌ ಅವಕಾಶ ಸೃಷ್ಟಿಸಿಕೊಳ್ಳಬಹುದು. ಬಿ ಗುಂಪಿನಲ್ಲಿ ಶ್ರೀಲಂಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳಿಗೆ. ಎರಡು ಗುಂಪಿನ ನಾಲ್ಕು ತಂಡಗಳು ಸೆಮೀಸ್‌ಗೆ ಏರಲಿವೆ.

ಹರ್ಮನ್‌ಪ್ರೀತ್‌ ಕೌರ್‌ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶಫಾಲಿ ವರ್ಮ, ಸ್ಮೃತಿ ಮಂಧಾನಾ, ಯಸ್ತಿಕಾ ಭಾಟಿಯಾ, ಜೆಮಿಮಾ ರೋಡ್ರಿಗ್ರಸ್‌, ರಿಚಾ ಘೋಷ್‌, ಸ್ನೇಹಾ ರಾಣಾ, ರಾಜೇಶ್ವರಿ ಗಾಯಕ್ವಾಡ್ ಅವರಂಥ ಅನುಭವಿ ಆಟಗಾರ್ತಿಯರಿದ್ದಾರೆ.

ಆಸ್ಟ್ರೇಲಿಯಾ ತಂಡ ಮೆಗ್‌ ಲ್ಯಾನಿಂಗ್‌, ಬೆಥ್‌ ಮೂನಿ, ರಾಚೆಲ್‌ ಹೇನ್ಸ್‌, ಮೆಘನಾ ಶೂಟ್‌, ಗ್ರೇಸ್ ಹ್ಯಾರಿಸ್‌ ಹಾಗೂ ಅಲೆನ್‌ ಕಿಂಗ್ ಅವರಂಥ ಪ್ರಭಾವಿ ಆಟಗಾರ್ತಿಯನ್ನು ಒಳಗೊಂಡಿದೆ.

ಇದನ್ನೂ ಓದಿ | Commonwealth Games 2022 | ಕಣದಲ್ಲಿರುವ ಭಾರತ ಸ್ಪರ್ಧಿಗಳು ಯಾರು?

Exit mobile version