ನವ ದೆಹಲಿ : CWG-2022 ಸ್ಪರ್ಧೆಗಾಗಿ ಬರ್ಮಿಂಗ್‌ಹ್ಯಾಮ್‌ಗೆ ಹೋಗಿರುವ ಭಾರತ ಮಹಿಳೆಯರ ತಂಡದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅವರು ಪ್ರವಾಸ ಕೈಗೊಂಡಿಲ್ಲ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಟಿ೨೦ ಸೇರ್ಪಡೆಗೊಳಿಸಲಾಗಿದ್ದು, ಹರ್ಮನ್‌ಪ್ರಿತ್ ಕೌರ್ ನೇತೃತ್ವದ ಭಾರತ ತಂಡ ಭಾನುವಾರ ಬೆಳಗ್ಗೆ ಬರ್ಮಿಂಗ್‌ಹ್ಯಾಮ್ ಕಡೆಗೆ ಪ್ರವಾಸ ಬೆಳೆಸಿತು. ಪ್ರಯಾಣಕ್ಕೆ ಮೊದಲು ನಡೆಸಿದ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಕು ಇರುವುದು ಪತ್ತೆಯಾಗಿದೆ.
ಬೆಂಗಳೂರಿನ ಎನ್‌ಸಿಎನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆಯೇ ಒಬ್ಬರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದರು. ಇದೀಗ ಮತ್ತೊಬ್ಬರು ಪ್ರವಾಸಕ್ಕೆ ತೆರಳಲು ಸಾಧ್ಯವಾಗದೇ ವಾಪಸಾಗಬೇಕಾಗಿದೆ.
ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇಬ್ಬರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅವರು ಇಂಗ್ಲೆಂಡ್‌ಗೆ ಪ್ರಯಾಣ ಮಾಡಿಲ್ಲ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಬಿಸಿಸಿಐ ಈ ಕುರಿತು ಪ್ರಕಟಣೆ ಹೊರಡಿಸಿದ್ದು,ಕೊರೊನಾ ಸೋಂಕಿಗೆ ಒಳಗಾಗಿರುವ ಆಟಗಾರ್ತಿಯರು ಮಾರ್ಗಸೂಚಿಗಳ ಪ್ರಕಾರ ನೆಗೆಟಿವ್ ವರದಿ ಬಂದ ಬಳಿಕ ಮಾತ್ರ ತಂಡವನ್ನು ಸೇರಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದೆ.
ಪಂದ್ಯಗಳೆಲ್ಲವೂ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಮ್‌ನಲ್ಲಿ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ.
ಇದನ್ನೂ ಓದಿ | Commonwealth Games | ಲವ್ಲಿನಾ ಕೋಚ್‌ಗೆ ಕೊನೆಗೂ ಸಿಕ್ಕಿತು ಕ್ರೀಡಾ ಗ್ರಾಮಕ್ಕೆ ಎಂಟ್ರಿ