ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಡಮ್ ಗಿಲ್ಕ್ರಿಸ್ಟ್ ಮುಂಬೈ ಇಂಡಿಯನ್ಸ್ (Mumbai Indians ) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಅವರ ಫಿಟ್ನೆಸ್ ಮಟ್ಟವನ್ನು ಬಲವಾಗಿ ಪ್ರಶ್ನಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಭಾನುವಾರದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ವಿರುದ್ಧ ಮುಂಬೈ ಇಂಡಿಯನ್ಸ್ 20 ರನ್ಗಳ ಸೋಲನುಭವಿಸಿತ್ತು. ಅಂತಿಮ ಓವರ್ನಲ್ಲಿ ಹಾರ್ದಿಕ್ 26 ರನರ್ಗಳನ್ನು ಬಿಟ್ಟುಕೊಟ್ಟಿದ್ದರು. ಅದುವೇ ಸೋಲಿನ ರನ್ ಎನಿಸಿಕೊಂಡಿತು. ಹೀಗಾಗಿ ಆಲ್ರೌಂಡರ್ನ ಫಿಟ್ನೆಸ್ ಬಗ್ಗೆ ಕಳವಳ ವ್ಯಕ್ತಪಡಿಸಲು ಗಿಲ್ಕ್ರಿಸ್ಟ್ ಅವರನ್ನು ಪ್ರೇರೇಪಿಸಿತು.
ಎರಡು ವಿಕೆಟ್ ಪಡೆದರೂ ಹಾರ್ದಿಕ್ ಮೂರು ಓವರ್ಗಳಲ್ಲಿ 14.30 ಎಕಾನಮಿಯಲ್ಲಿ 43 ರನ್ಗಳನ್ನು ಬಿಟ್ಟುಕೊಟ್ಟಿದ್ದರಿಂದ ಭಾರಿ ಟೀಕೆಗಳನ್ನು ಎದುರಿಸಬೇಕಾಯಿತು. ಇನ್ನಿಂಗ್ಸ್ನ ಕೊನೆಯ ಓವರ್ನಲ್ಲಿ ಎಂಎಸ್ ಧೋನಿ ಸತತ ಮೂರು ಸಿಕ್ಸರ್ಗಳನ್ನು ಬಾರಿಸಿದರು. ಇದು ಸಿಎಸ್ಕೆ 206/4 ರ ದೊಡ್ಡ ಮೊತ್ತವನ್ನು ತಲುಪಲು ಸಹಾಯ ಮಾಡಿತು. ಹಾರ್ದಿಕ್ ಕೇವಲ ಎರಡು ರನ್ ಗೆ ಔಟಾಗುವ ಮೂಲಕ ಬ್ಯಾಟಿಂಗ್ ವಿಭಾಗದಲ್ಲಿ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.
ಕ್ರಿಕ್ಬಜ್ ಜೊತೆ ಮಾತನಾಡಿದ ಗಿಲ್ಕ್ರಿಸ್ಟ್ ಹಾರ್ದಿಕ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರ ಬೌಲಿಂಗ್ ಚದುರಿಹೋಗಿದೆ ಎಂದು ಅಭಿಪ್ರಾಯಪಟ್ಟರು. ಹಾರ್ದಿಕ್ ಅವರಲ್ಲಿ ಅವರು ಸೂಚಿಸಬಹುದಾದ ಏಕೈಕ ಸಕಾರಾತ್ಮಕ ವಿಷಯವೆಂದರೆ ವೇಗದ ಬೌಲಿಂಗ್ ಆಲ್ರೌಂಡರ್ ಕಠಿಣ ಸಂದರ್ಭಗಳಲ್ಲಿ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
“ಹಾರ್ದಿಕ್ ಪಾಂಡ್ಯ ಮತ್ತು ಅವರ ಬೌಲಿಂಗ್ ಬಗ್ಗೆ ಸಕಾರಾತ್ಮಕ ಅಂಶವೆಂದರೆ ಅವರು ಸವಾಲನ್ನು ಸ್ವೀಕರಿಸಲು ಸಿದ್ಧರಾಗಿರುವುದು. ನಾವು ಆಸ್ಟ್ರೇಲಿಯಾದ ಕ್ರೀಡಾ ಪರಿಭಾಷೆಯಲ್ಲಿ ಬಳಸುವಂತೆ, ಹಾರ್ದಿಕ್ ಸಾಕಷ್ಟು ನಿರರ್ಗಳ ಆಡುತ್ತಿಲ್ಲ. ಕೈಯಲ್ಲಿ ಚೆಂಡನ್ನು ಹಿಡಿದುಕೊಂಡರೂ ಅವರ ಫಿಟ್ನೆಸ್ ಬಗ್ಗೆ ಅನುಮಾನವೇ ಇದೆ. ಅವರು ಎಲ್ಲಿಯೂ 100 ಪ್ರತಿಶತ ಫಿಟ್ ಆಗಿ ಕಾಣುವುದಿಲ್ಲ. ಅವರ ಬೌಲಿಂಗ್ ಬಲವಾಗಿಲ್ಲ” ಎಂದು ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಹೇಳಿದರು.
ಹಾರ್ದಿಕ್ ಅಭಿನಂದನೆ
ಮಾಜಿ ನಾಯಕ ರೋಹಿತ್ ಶರ್ಮಾ ಮುಂಬಯಿ ತಂಡದ ಪರ ಶತಕ ಗಳಿಸಿದರೂ ಪಂದ್ಯವನ್ನು ಕಳೆದುಕೊಂಡರು. ಅನುಭವಿ ಆರಂಭಿಕ ಆಟಗಾರ ತಮ್ಮ ಎರಡನೇ ಐಪಿಎಲ್ ಶತಕವನ್ನು (63 ಎಸೆತಗಳಲ್ಲಿ 105* ರನ್) ಗಳಿಸಿದರು ಆದರೆ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಮುಂಬೈ ಇಂಡಿಯನ್ಸ್ ತಂಡವನ್ನು 186 ರನ್ಗಳಿಗೆ ಚೆನ್ನೈ ನಿಯಂತ್ರಿಸಿತು.
Rohit Sharma : ಪಂದ್ಯದ ಬಳಿಕ ಏಕಾಂಗಿಯಾಗಿ ಡಗ್ಔಟ್ ಕಡೆಗೆ ನಡೆದ ರೋಹಿತ್ ಶರ್ಮಾ!
ಪಂದ್ಯದ ನಂತರ ಮಾತನಾಡಿದ ಹಾರ್ದಿಕ್, ಪಥಿರಾಣಾ ಅವರ ನಾಲ್ಕು ಓವರ್ಗಳ ಸ್ಪೆಲ್ ಗೇಮ್ ಚೇಂಜರ್ ಆಗಿತ್ತು ಎಂದು ಹೇಳಿದರು. ಸ್ಟಂಪ್ ಗಳ ಹಿಂದೆ ಎಂಎಸ್ ಧೋನಿ ಉಪಸ್ಥಿತಿಯು ಪ್ರವಾಸಿ ತಂಡಕ್ಕೆ ಹೆಚ್ಚಿನ ಅನುಕೂಲ ನೀಡಿತು ಎಂದು ಅವರು ಅಭಿಪ್ರಾಯಪಟ್ಟರು.
“ಗುರಿ ಖಂಡಿತವಾಗಿಯೂ ಸುಲಭವಾಗಿತ್ತು. ಆದರೆ ಅವರು ಉತ್ತಮವಾಗಿ ಬೌಲಿಂಗ್ ಮಾಡಿದರು. ಪಥಿರಾಣಾ ಅವರು ತಮ್ಮ ಯೋಜನೆಗಳು ಮತ್ತು ವಿಧಾನದಲ್ಲಿ ಸ್ಮಾರ್ಟ್ ಆಗಿದ್ದರು. ಸ್ಟಂಪ್ಗಳ ಹಿಂದೆ ಧೋನಿ ಇದ್ದರು. ಅದು ಸಹಾಯ ಮಾಡುತ್ತದೆ. ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆವು ಮತ್ತು ಗೆಲುವಿನ ಕಡೆಗೆ ಸಾಗುತ್ತಿದ್ದೆವು. ಪಥಿತಾಣಾ ಆ ಎರಡು ವಿಕೆಟ್ಗಳನ್ನು ಪಡೆಯುವವರೆಗೂ ನಾವು ಉತ್ತಮವಾಗಿ ಆಡುತ್ತಿದ್ದೆವು, “ಎಂದು ಅವರು ಹೇಳಿದರು.
ಸದ್ಯ ಮುಂಬೈ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಏಪ್ರಿಲ್ 18ರ ಗುರುವಾರ ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.