ಲಂಡನ್: ಕಳೆದ ವಾರ ಆಟದ ವೇಳೆ ಹೃದಯ ಸ್ತಂಭನಕ್ಕೆ ಒಳಗಾದ ಅಮೆರಿಕನ್ ಫುಟ್ಬಾಲ್ ಆಟಗಾರ ಡಮರ್ ಹ್ಯಾಮ್ಲಿನ್(Damar Hamlin) ಅವರ ಚಿಕಿತ್ಸೆಗಾಗಿ ಆನ್‌ಲೈನ್ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ 8 ಮಿಲಿಯನ್ ಡಾಲರ್ (ಸುಮಾರು 66 ಕೋಟಿ ರೂಪಾಯಿ) ಗಿಂತಲೂ ಹೆಚ್ಚು ನಿಧಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾಹಿತಿ ನೀಡಿದ ಗೋ ಫಂಡ್ಮೀ(GoFundMe) ಫೌಂಡೇಶನ್ ” ಮೈದಾನದಲ್ಲಿ ಡಮರ್ ಹ್ಯಾಮ್ಲಿನ್ ಅವರು ಹೃದಯಸ್ಥಂಭನಕ್ಕೊಳಗಾದ ಬಳಿಕ ದೇಶಾದ್ಯಂತ ಅಭಿಮಾನಿಗಳು ಅವರ ಚಿಕಿತ್ಸೆಯ ನಿಧಿಸಂಗ್ರಹಕ್ಕೆ ದೇಣಿಗೆ ನೀಡುವ ಮೂಲಕ ಅವರಿಗೆ ಮತ್ತು ಅವರ ಕುಟುಂಬಕ್ಕೆ ಬೆಂಬಲವನ್ನು ತೋರಿಸುತ್ತಿದ್ದಾರೆ. ಈಗಾಗಲೇ ಸುಮಾರು 66 ಕೋಟಿ ರೂ. ಸಂಗ್ರಹವಾಗಿದೆ” ಎಂದು ಗೋ ಫಂಡ್ಮೀ ಹೇಳಿದೆ.
ಹ್ಯಾಮ್ಲಿನ್ ಆಸ್ಪತ್ರೆಗೆ ದಾಖಲಾದ ಬಳಿಕ ಫುಟ್ಬಾಲ್ ಅಭಿಮಾನಿಗಳು ನೆರವಿಗೆ ಧಾವಿಸಿದ್ದು, ದೇಣಿಗೆಗಳು ಮತ್ತು ಪ್ರಾರ್ಥನೆಗಳು ಹರಿದು ಬರಲಾರಂಭಿಸಿದವು. ಚೇಸಿಂಗ್ ಎಂ ಫೌಂಡೇಶನ್ ಮೂಲಕ ಹ್ಯಾಮ್ಲಿನ್ ಅವರು ತಮ್ಮ ಸಮುದಾಯದ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಈ ಕಾಳಜಿ ಇದೀಗ ಅವರ ಸಂಕಷ್ಟದ ಕಾಲಕ್ಕೆ ನೆರವಾಗಿದೆ.
ಇದನ್ನೂ ಓದಿ | Cristiano Ronaldo | ಗೆಳತಿಯೊಂದಿಗೆ ಸೌದಿ ಅರೇಬಿಯಾಕ್ಕೆ ಬಂದಿಳಿದ ರೊನಾಲ್ಡೊಗೆ ಸಂಕಷ್ಟ!