Site icon Vistara News

Danushka Gunathilaka: ಲೈಂಗಿಕ ದೌರ್ಜನ್ಯ ಆರೋಪದಿಂದ ಮುಕ್ತರಾದ ದನುಷ್ಕಾ ಗುಣತಿಲಕ

Sri Lanka cricketer Danushka Gunathilaka

ಸಿಡ್ನಿ: ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕಾಗೆ(Danushka Gunathilaka) ಸಿಡ್ನಿ ನ್ಯಾಯಾಲಯವು ರಿಲೀಪ್​ ನೀಡಿದೆ ಎಂದು ವರದಿಯಾಗಿದೆ. ಎಎಪಿ ವರದಿ ಪ್ರಕಾರ ಸಿಡ್ನಿ ನ್ಯಾಯಾಲಯವು ಗುರುವಾರ ಗುಣತಿಲ ಅವರನ್ನು ಲೈಂಗಿಕ ದೌರ್ಜನ್ಯ ಆರೋಪದಿಂದ ಖುಲಾಸೆಗೊಳಿಸಿದೆ ಎಂದು ವರದಿ ಮಾಡಿದೆ.

ಮಹಿಳೆಯೊಬ್ಬರ ಮೇಲೆ ಲೈಂಗಿ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಲಂಕಾದ ಕ್ರಿಕೆಟ್ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಟೀಂ ಹೋಟೆಲ್‌ನಲ್ಲಿ ಬಂಧಿಸಿದ್ದರು. ನಾಲ್ಕು ಅತ್ಯಾಚಾರದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿತ್ತು. ಆದರೆ ಅವರ ಮೇಲೆ ಒಂದು ಆರೋಪವನ್ನು ಮಾತ್ರ ನ್ಯಾಯಾಲಯವು ವಿಚಾರಣೆಗೆ ತೆಗೆದುಕೊಂಡು ಅವರನ್ನು ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರಂಭದಲ್ಲಿ ಗುಣತಿಲಕ ಅವರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಜಾಮೀನಿಗಾಗಿ ನ್ಯೂ ಸೌತ್ ವೇಲ್ಸ್​ನ ಕೋರ್ಟ್ ಮೆಟ್ಟಿಲೇರಲಿದ್ದ ಗುಣತಿಲಕ 11 ದಿನಗಳ ಬಳಿಕ ಜಾಮೀನು ಪಡೆದಿದ್ದರು. 1 ಕೋಟಿ ರೂ. ಠೇವಣಿ ಇರಿಸಿ ಷರತ್ತುಬದ್ಧ ಜಾಮೀನು ಮೇರೆಗೆ ತವರಿಗೆ ಮರಳಿದ್ದರು.

ಈಗಿನ ಮಾಹಿತಿ ಪ್ರಕಾರ ಡೌನಿಂಗ್ ಸೆಂಟರ್ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಸಾರಾ ಹುಗೆಟ್ ಅವರ ಮುಂದೆ ನಾಲ್ಕು ದಿನಗಳ ಸುದೀರ್ಘ ವಿಚಾರಣೆಯನ್ನು ಎದುರಿಸಿದ ಗುಣತಿಲಕ ಅವರು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಬೀತಾಗಿರುವುದಾಗಿ ವರದಿಯಾಗಿದೆ.

ಏನಿದು ಪ್ರಕರಣ?

ಡೇಟಿಂಗ್‌ ಆ್ಯಪ್‌ವೊಂದರಲ್ಲಿ ಮಹಿಳೆ ಮತ್ತು ಗುಣತಿಲಕ ಮಾತುಕತೆ ನಡೆಸುತ್ತಿದ್ದರು. ಅದರಂತೆ ನವೆಂಬರ್​ 2ರಂದು(2022) ರೋಸ್‌ ಬೇನಲ್ಲಿರುವ ನಿವಾಸವೊಂದರಲ್ಲಿ ಇಬ್ಬರೂ ಭೇಟಿ ಮಾಡಿಯಾಗಿದ್ದರು. ಇದೇ ವೇಳೆ ಗುಣತಿಲಕ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು. ಗುಣತಿಲಕ ಮೊದಲ ಸುತ್ತಿನಲ್ಲಿ ಮಂಡಿರಜ್ಜು ಗಾಯದಿಂದ T20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಆಟವಾಡದಿದ್ದರೂ ಆಸ್ಟ್ರೇಲಿಯಾದಲ್ಲಿ ತಂಡದೊಂದಿಗೆ ಉಳಿದಿದ್ದರು. 2015ರಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ ದನುಷ್ಕಾ, ನಂತರ ಶ್ರೀಲಂಕಾ ಪರ ಎಂಟು ಟೆಸ್ಟ್, 47 ODI ಮತ್ತು 46 T20Iಗಳನ್ನು ಆಡಿದ್ದಾರೆ.

ಅಮಾನತು ಶಿಕ್ಷೆ

ಲೈಂಗಿ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಸಿಲುಕಿದ ದನುಷ್ಕಾ ಗುಣತಿಲk ಅವರನ್ನು ಲಂಕಾ ಕ್ರಿಕೆಟ್ ಮಂಡಳಿ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು. ಇದೀಗ ಆರೋಪ ಮುಕ್ತರಾಗಿರುವ ಅವರು ಮತ್ತೆ ಕ್ರಿಕೆಟ್​ಗೆ ಮರಳುವ ಸಾಧ್ಯತೆ ಇದೆ.

Exit mobile version