ಸಿಡ್ನಿ: ಲೈಂಗಿಕ ದೌರ್ಜನ್ಯ ಆರೋಪದಿಂದ ಆಸ್ಟ್ರೇಲಿಯಾದಲ್ಲಿ ಸೆರೆಯಾಗಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ(Danushka Gunathilaka) ಅವರಿಗೆ ಗುರುವಾರ ಆಸ್ಟ್ರೇಲಿಯಾದ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 29 ವರ್ಷದ ಆಸ್ಟ್ರೇಲಿಯಾದ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಗುಣತಿಲಕೆಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದ್ದು, ಇದಕ್ಕಾಗಿ 1 ಕೋಟಿ ರೂ. ಠೇವಣಿ ಕೂಡ ಇರಿಸಿಕೊಳ್ಳಲಾಗಿದೆ.
11 ರಾತ್ರಿ ಪೊಲೀಸ್ ಕಸ್ಟಡಿಯಲ್ಲಿ ಕಳೆದ ದನುಷ್ಕ ಗುಣತಿಲಕಗೆ ಜಾಮೀನು ನೀಡಲು ಸೆಂಟ್ರಲ್ ಕೋರ್ಟ್ ನಿರಾಕರಿಸಿತ್ತು. ಪರಿಣಾಮ ಗುಣತಿಲಕ ಪರ ವಕೀಲರು ನ್ಯೂ ಸೌತ್ ವೇಲ್ಸ್‌ನ ಸುಪ್ರೀಂ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಇದೀಗ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ನೆರವಿನಿಂದ ಜಾಮೀನು ಪಡೆದ ಗುಣತಿಲಕ ತವರಿಗೆ ತೆರಳಬಹುದಾಗಿದೆ. ಆದರೆ ಯಾವುದೇ ರೀತಿಯ ಸಾಕ್ಷ್ಯಾನಾಶ ಕೃತ್ಯದಲ್ಲಿ ಜತೆಗೆ ಟಿಂಡರ್ ಅಥವಾ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸದಂತೆ ವಿವಿಧ ಷರತ್ತುಗಳನ್ನು ವಿಧಿಸಲಾಗಿದೆ.
ನವೆಂಬರ್ ತಿಂಗಳ ಆರಂಭದಲ್ಲಿ 29 ವರ್ಷದ ಆಸ್ಟ್ರೇಲಿಯಾದ ಯುವತಿ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ದನುಷ್ಕ ಗುಣತಿಲಕ ಬಂಧನಕ್ಕೊಳಗಾಗಿದ್ದರು.
ಇದನ್ನೂ ಓದಿ | MS Dhoni | ಈ ಬಾರಿಯೂ ಸಿಎಸ್ಕೆಗೆ ಮಹೇಂದ್ರ ಸಿಂಗ್ ಧೋನಿಯೇ ಸಾರಥಿ; ಕೆ.ಎಸ್. ವಿಶ್ವನಾಥನ್