Site icon Vistara News

David Warner: ಕ್ರಿಸ್​ ಗೇಲ್​ ದಾಖಲೆ ಮುರಿದ ಡೇವಿಡ್​ ವಾರ್ನರ್​

David Warner

David Warner: australia batter David Warner breaks Chris Gayle's record

ಬಾರ್ಬಡೋಸ್‌: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​(David Warner) ಅವರು ಇಂದು(ಗುರವಾರ) ನಡೆದ ಒಮಾನ್​ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ(T20 World Cup 2024) ದಾಖಲೆಯೊಂದನ್ನು ಬರೆದಿದ್ದಾರೆ. ಈ ಮೂಲಕ ಕ್ರಿಸ್​ ಗೇಲ್(Chris Gayle)​ ದಾಲೆಯನ್ನು ಮುರಿದಿದ್ದಾರೆ.

ಒಮಾನ್​ ವಿರುದ್ಧ ವಾರ್ನರ್​ 51 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 56 ರನ್​ ಬಾರಿಸಿ ಅರ್ಧಶತಕ ಪೂರ್ತಿಗೊಳಿಸಿದರು. ಇದೇ ವೇಳೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದರು. ಇದು ವಾರ್ನರ್​ ಅವರ 111ನೇ ಟಿ20 ಅರ್ಧಶತಕ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್​ ಇಂಡೀಸ್​ ತಂಡದ ಮಾಜಿ ಆಟಗಾರ ಕ್ರಿಸ್​ ಗೇಲ್​ ಗೆಸರಿನಲ್ಲಿತ್ತು. ಗೇಲ್​ 110 ಅರ್ಧಶತಕ ಬಾರಿಸಿದ್ದಾರೆ.

ಈಗಾಗಲೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ವಾರ್ನರ್​ ಟಿ20 ವಿಶ್ವಕಪ್​ ಬಳಿಕ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಲಿದ್ದಾರೆ. ಇದೇ ವರ್ಷ ನಡೆದಿದ್ದ ಐಪಿಎಲ್​ನಲ್ಲಿ ನಿರೀಕ್ಷಿತ ಪ್ರದರ್ಶನ ಮತ್ತು ಸರಿಯಾಗಿ ಆಡುವ ಅವಕಾಶ ಸಿಗದ ವಾರ್ನರ್​ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅಮೋಘ ಬ್ಯಾಟಿಂಗ್​ ನಡೆಸಿ ಗಮನಸೆಳೆದರು.

ಇದನ್ನೂ ಓದಿ David Warner : ಬಾಹುಬಲಿ ರಾಜಮೌಳಿ ನಿರ್ದೇಶನದಲ್ಲಿ ಕ್ರಿಕೆಟಿಗ ಡೇವಿಡ್​ ವಾರ್ನರ್ ಆ್ಯಕ್ಟಿಂಗ್​; ಇಲ್ಲಿದೆ ವಿಡಿಯೊ

ಡ್ರೆಸ್ಸಿಂಗ್​ ರೂಮ್​ ಮರೆತ ವಾರ್ನರ್​


ಇದೇ ಪಂದ್ಯದಲ್ಲಿ ವಾರ್ನರ್​ ಅವರು ಔಟ್​ ಆಗಿ ತಮ್ಮ ತಂಡದ ಡ್ರೆಸ್ಸಿಂಗ್​ ರೋಮ್​ಗೆ ತೆರಳುವ ಬದಲು ಎದುರಾಳಿ ಒಮಾನ್ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ಪ್ರಸಂಗವೂ ನಡೆಯಿತು. ಮೆಟ್ಟಿಲೇರುತ್ತಾ ಒಮಾನ್​ ಡ್ರೆಸ್ಸಿಂಗ್​ ಕೋಣೆಗೆ ತೆರಳುತ್ತಿದ್ದ ವಾರ್ನರ್​ ಅವರನ್ನು ತಮ್ಮ ತಂಡದ ಸಹ ಆಟಗಾರರು ಜೋರಾಗಿ ಕರೆದು ಅದು ನಮ್ಮ ಕೊಠಡಿಯಲ್ಲ ಎಂದು ಹೇಳಿದ್ದಾರೆ. ಬಳಿಕ ವಾರ್ನರ್​ ತಂಡದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದರು. ಇದರ ವಿಡಿಯೊ ವೈರಲ್​ ಆಗಿದೆ.

ಪಂದ್ಯ ಗೆದ್ದ ಆಸ್ಟ್ರೇಲಿಯಾ


ಮಾಜಿ ಚಾಂಪಿಯನ್​ ಆಸ್ಟ್ರೇಲಿಯಾ ತಂಡ ಒಮಾನ್​ ವಿರುದ್ಧ 39 ರನ್​ಗಳ ಪ್ರಯಾಸದ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 164 ರನ್​ ಬಾರಿಸಿತು. ಆಸೀಸ್​ ತಂಡದ ಸಾಮರ್ಥ್ಯಕ್ಕೆ ಇದು ಕನಿಷ್ಠ ಮೊತ್ತ. ಜವಾಬಿತ್ತ ಒಮಾನ್​ ಉತ್ತಮ ಪೈಪೋಟಿ ನೀಡಿ 9 ವಿಕೆಟ್​ಗೆ 125 ರನ್​ ಗಳಿಸಿ ಸಣ್ಣ ಅಂತರದ ಸೋಲು ಕಂಡಿತು.

ಒಮಾನ್​ ಉತ್ತಮ ಬೌಲಿಂಗ್​ ದಾಳಿ ನಡೆಸಿದರೂ ಕೂಡ ಬ್ಯಾಟಿಂಗ್​ನಲ್ಲಿ ವಿಫಲವಾಯಿತು. ಸೋಲು ಕಂಡರೂ ಕೂಡ ಬಲಿಷ್ಠ ಆಸ್ಟ್ರೇಲಿಯಾದಂತಹ ತಂಡಕ್ಕೆ ತೀವ್ರ ಪೈಪೋಟಿ ನೀಡಿದನ್ನು ಮಾತ್ರ ಮೆಚ್ಚಲೇ ಬೇಕು. ಒಮಾನ್​ ಪರ ಮೆಹ್ರಾನ್ ಖಾನ್ 2 ವಿಕೆಟ್​ ಕಿತ್ತರು. ಆಸೀಸ್​ ಪರ ಸ್ಪಿನ್ನರ್​ ಝಾಂಪ (20), ಮಾರ್ಕಸ್​ ಸ್ಟೋಯಿನಿಸ್​(3) ಮಿಚೆಲ್​ ಸ್ಟಾರ್ಕ್​(2) ಮತ್ತು ನಥಾನ್​ ಎಲ್ಲಿಸ್​(2) ವಿಕೆಟ್​ ಕಿತ್ತರು.

Exit mobile version