Site icon Vistara News

David Warner: ನಿವೃತ್ತಿ ಹಿಂಪಡೆದು ಚಾಂಪಿಯನ್ಸ್​ ಟ್ರೋಫಿ ಆಡಲು ಬಯಸಿದ ಡೇವಿಡ್​ ವಾರ್ನರ್​

David Warner

David Warner: David Warner keeps door ajar for Champions Trophy 'if selected'

ಸಿಡ್ನಿ: ಈಗಾಗಲೇ ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಆಸ್ಟ್ರೇಲಿಯಾ ತಂಡದ ಎಡಗೈ ಬ್ಯಾಟರ್​ ಡೇವಿಡ್​ ವಾರ್ನರ್(David Warner)​ ಅವರು ತಮ್ಮ ನಿವೃತ್ತಿಯನ್ನು ಹಿಂಪಡೆಯಲು ಯೋಚಿಸಿದ್ದಾರೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ(Champions Trophy) ತಂಡಕ್ಕೆ ಸಹಾಯ ಬೇಕಾದಲ್ಲಿ ತಾನು ಆಯ್ಕೆಗೆ ಲಭ್ಯವಿರುವುದಾಗಿ ವಾರ್ನರ್ ಹೇಳಿದ್ದಾರೆ.

ಕಳೆದ ತಿಂಗಳು ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದಲ್ಲಿ ಆಸ್ಟ್ರೇಲಿಯಾ ಸೋತು ಹೊರಬಿದ್ದ ತಕ್ಷಣ ವಾರ್ನರ್​ ಅವರು ತಮ್ಮ 15 ವರ್ಷಗಳ ಕ್ರಿಕೆಟ್​ ವೃತ್ತಿ ಜೀವನಕ್ಕೆ ತೆರೆ ಎಳೆದಿದ್ದರು. ಇದೀಗ ತಂಡದ ಬಯಸಿದ್ದಲ್ಲಿ ಚಾಂಪಿಯನ್ಸ್​ ಟ್ರೋಫಿ ಆಡುವೆ ಎಂದು ಹೇಳಿದ್ದಾರೆ. 110 ಟಿ20 ಪಂದ್ಯಗಳನ್ನು ಆಡಿರುವ ವಾರ್ನರ್‌ 3,277 ರನ್‌ ಗಳಿಸಿದ್ದಾರೆ. ಈ ವರ್ಷದ ಜನವರಿಯಲ್ಲಿ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ಗೂ ವಾರ್ನರ್‌ ವಿದಾಯ ಹೇಳಿದ್ದರು.

112 ಟೆಸ್ಟ್‌ಗಳಿಂದ ಅವರು 2011 ಮತ್ತು 2024 ರ ನಡುವೆ 26 ಶತಕಗಳು ಮತ್ತು 37 ಅರ್ಧಶತಕಗಳೊಂದಿಗೆ 44.59 ಸರಾಸರಿಯಲ್ಲಿ 8,786 ರನ್ ಗಳಿಸಿದ್ದಾರೆ. 161 ಏಕದಿನ ಪಂದ್ಯಗಳಿಂದ 45.30 ಸರಾಸರಿಯಲ್ಲಿ 22 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 6,932 ರನ್ ಗಳಿಸಿದ್ದಾರೆ. 37 ವರ್ಷದ ಡೇವಿಡ್​ ವಾರ್ನರ್​, 2009ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಇದನ್ನೂ ಓದಿ Champions Trophy 2025 : ಭಾರತ ತಂಡ ಪಾಕಿಸ್ತಾನಕ್ಕೆ ಬರಲೇಬೇಕು ಹಠ ಹಿಡಿದು ಕುಳಿತಿರುವ ಪಿಸಿಬಿ

ರಿಕಿ ಪಾಂಟಿಂಗ್, ಆ್ಯಡಂ ಗಿಲ್ ಕ್ರಿಸ್ಟ್​, ಶೇನ್​ ವಾರ್ನ್​ ಅವರಂತಹ ದಿಗ್ಗಜ ಆಟಗಾರರೊಂದಿಗೆ ಆಡಿದ ಅನುಭವವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಕ್ರಿಕೆಟ್​ ವೃತ್ತಿಜೀವನದಲ್ಲಿ ಸಾಧಿಸುವುದು ಇನ್ನೂ ಯಾವುದೂ ಉಳಿದಿಲ್ಲ. ಮೂರು ಮಾದರಿಯ (ಏಕದಿನ, ಟೆಸ್ಟ್ ಮತ್ತು ಟಿ20) ವಿಶ್ವಕಪ್​ ತಂಡದ ಸದಸ್ಯ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ. ನನ್ನ ಕ್ರಿಕೆಟ್​ ಜರ್ನಿಯಲ್ಲಿ ಸಹಕರಿಸಿದ ಎಲ್ಲ ಸಿಬ್ಬಂದಿ, ಸಹ ಆಟಗಾರರಿಗೆ ನಾನು ಚಿರಋಣಿ ಎಂದು ವಾರ್ನರ್​ ಹೇಳಿ ತಮ್ಮ ನಿವೃತ್ತಿ ಪ್ರಕಟಿಸಿದ್ದರು.

ವಾರ್ನರ್​ ಟೆಸ್ಟ್​ ಸಾಧನೆ


2011 ಜನವರಿ 4ರಂದು ಬ್ರಿಸ್ಬೇನ್‌ನಲ್ಲಿ ಕಿವೀಸ್​ ವಿರುದ್ಧದ ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಡೇವಿಡ್ ವಾರ್ನರ್ ಒಟ್ಟು 205 ಇನಿಂಗ್ಸ್‌ಗಳಲ್ಲಿ 8,786 ರನ್ ಗಳಿಸಿದ್ದಾರೆ. 26 ಶತಕ ಹಾಗೂ 37 ಅರ್ಧಶತಕ ಬಾರಿಸಿದ್ದಾರೆ. ಅಜೇಯ 335 ಇವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 4 ವಿಕೆಟ್​ ಕೂಡ ಪಡೆದಿದ್ದಾರೆ.

ಏಕದಿನ ಸಾಧನೆ


161 ಏಕದಿನ ಪಂದ್ಯಗಳನ್ನು ಆಡಿರುವ ವಾರ್ನರ್​ 159 ಇನಿಂಗ್ಸ್​ಗಳಿಂದ 6932 ರನ್​ ಬಾರಿಸಿದ್ದಾರೆ. 22 ಶತಕ ಮತ್ತು 33 ಅರ್ಧಶತಕ ಒಳಗೊಂಡಿದೆ. 179 ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಕಳೆದ ವರ್ಷ ಭಾರತ ವಿರುದ್ಧ ಏಕದಿನ ವಿಶ್ವಕಪ್​ ಪಂದ್ಯವೇ ವಾರ್ನರ್​ಗೆ ಕೊನೆಯ ಏಕದಿನ ಪಂದ್ಯವಾಗಿತ್ತು.

Exit mobile version