Site icon Vistara News

David Warner | ನೂರನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಡೇವಿಡ್​ ವಾರ್ನರ್​!

david warner

ಮೆಲ್ಬೋರ್ನ್‌: ಕೆಲ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಡೇವಿಡ್‌ ವಾರ್ನರ್‌(David Warner) ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿ ಮೆರೆದಾಡಿದ್ದಾರೆ. ಜತೆಗೆ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೆಲ್ಬೋರ್ನ್‌ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಂಗಳವಾರ 25ನೇ ಟೆಸ್ಟ್ ಶತಕ ಬಾರಿಸಿದ ವಾರ್ನರ್, ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್ ಬಳಿಕ 100ನೇ ಪಂದ್ಯದಲ್ಲಿ ಶತಕ ಬಾರಿಸಿದ ಎರಡನೇ ಆಸ್ಟ್ರೇಲಿಯಾ ಕ್ರಿಕೆಟಿಗ ಎಂಬ ವಿಶೇಷ ದಾಖಲೆ ಬರೆದರು.

ಪಾಂಟಿಂಗ್ ತಮ್ಮ 100ನೇ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ. ಸಾರಸ್ಯವೆಂದರೆ ಪಾಂಟಿಂಗ್​ ಕೂಡ 2006 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ತಮ್ಮ ನೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಈ ಮೈಲುಗಲ್ಲು ಸ್ಥಾಪಿಸಿದ್ದರು. ಇದೀಗ ವಾರ್ನರ್​ ಕೂಡ ದ. ಆಫ್ರಿಕಾ ವಿರುದ್ಧವೇ ಈ ಸಾಧನೆ ಮಾಡಿದ್ದು ವಿಶೇಷ. ಅಂದು ಪಾಂಟಿಂಗ್​ 120 ಮತ್ತು ಅಜೇಯ 143 ರನ್ ಗಳಿಸಿದ್ದರು. ವಾರ್ನರ್ ಶತಕದ ಜತೆಗೆ ತಮ್ಮ ಟೆಸ್ಟ್​ ಕ್ರಿಕೆಟ್​ ವೃತ್ತಿಜೀವನದಲ್ಲಿ 8 ಸಾವಿರ ರನ್‌ ಗಳನ್ನೂ ಇದೇ ವೇಳೆ ಪೂರೈಸಿದರು.

ಇದನ್ನೂ ಓದಿ | IPL 2023 | ಐಪಿಎಲ್​ನಲ್ಲಿ ನನಗೆ ಸಿಕ್ಕಿದ ದುಡ್ಡು ಜಾಸ್ತಿಯಾಯಿತು ಎಂದ ಕ್ಯಾಮೆರಾನ್​ ಗ್ರೀನ್​!

Exit mobile version