Site icon Vistara News

David Warner | ಮಗಳ ಜತೆಗೆ ಸೂಪರ್​ ಸ್ಟೆಪ್ಸ್​ ಹಾಕಿದ ಡೇವಿಡ್​ ವಾರ್ನರ್​; ವಿಡಿಯೊ ವೈರಲ್​

David Warner

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ಡೇವಿಡ್​ ವಾರ್ನರ್​ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮಗೆ ಇಷ್ಟವಾದ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುವ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತಮ್ಮ ಮಗಳೊಂದಿಗೆ ಇಂಗ್ಲಿಷ್​​​ ಸಿನಿಮಾದ ಹಾಡಿಗೆ ನೃತ್ಯ ಮಾಡಿದ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಾರ್ನರ್​ ಇಂಗ್ಲಿಷ್​ನ ಫೇಮಸ್​ “ಸ್ಟೇಯಿಂಗ್ ಅಲೈವ್​” ಹಾಡಿಗೆ ಕುಣಿದಿದ್ದು, ಈ ಫೊಸ್ಟ್​ಗೆ ಡಿಯರ್​ ವಿ ಆರ್​ ಬ್ಯಾಕ್​ ಎಂದು ಕ್ಯಾಪ್ಶನ್​ ನೀಡಿದ್ದಾರೆ. ಮಗಳ ಜತೆಗೆ ವಾರ್ನರ್​ ಹೆಜ್ಜೆ ಹಾಕಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಹಿಂದೆಯೂ ವಾರ್ನರ್​ ಬಾಲಿವುಡ್​, ಹಾಲಿವುಡ್​ ಸೇರಿದಂತೆ ಕನ್ನಡ, ತೆಲುವು, ತಮಿಳು ಸಿನಿಮಾದ ಹಾಡಿಗೂ ಕುಟುಂಬ ಸದಸ್ಯರ ಜತೆಗೆ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದ ವಾರ್ನರ್,​ ಪಂತ್​ ಅನುಪಸ್ಥಿತಿಯಲ್ಲಿ 16ನೇ ಆವೃತ್ತಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕನಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | Rishabh Pant | ಐಪಿಎಲ್​ಗೆ ರಿಷಭ್​ ಪಂತ್​ ಅಲಭ್ಯ​; ಡೆಲ್ಲಿ ತಂಡಕ್ಕೆ ಡೇವಿಡ್​ ವಾರ್ನರ್​ ನಾಯಕ?

Exit mobile version