Site icon Vistara News

David Warner : ಡೇವಿಡ್​​ ವಾರ್ನರ್​ಗೆ ಗಾಯ, ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಆತಂಕ

David Warner

ಬೆಂಗಳೂರು: ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್​ ಡೇವಿಡ್ ವಾರ್ನರ್ (David Warner) ಸೊಂಟ ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ಅವರು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಮುಂಬರುವ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆತಂಕದ ಸುದ್ದಿಯಾಗಿದೆ. ಒಂದು ವೇಳೆ ಗಾಯದ ಪ್ರಮಾಣ ಹೆಚ್ಚಾದರೆ ಅವರು ಐಪಿಎಲ್​ಗೆ ಅಲಭ್ಯರಾಗುವ ಸಾಧ್ಯತೆಗಳಿವೆ.

ಡೇವಿಡ್​ ವಾರ್ನರ್ ಅವರಿಗೆ ಚೇತರಿಸಿಕೊಳ್ಳಲು ಸ್ವಲ್ಪ ಸಮಯದ ಅಗತ್ಯವಿದೆ. ಅದೇ ರೀತಿ ಇಂಡಿಯನ್ ಪ್ರೀಮಿಯರ್ ಲೀಗ್ 2024 ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ ಆಡುವ ಬಗ್ಗೆ ಇನ್ನೂ ಖಚಿತತೆ ಇಲ್ಲ ಎಂದು ಹೇಳಲಾಗಿದೆ.

ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ 72 ರನ್​ಗಳಿಂದ ಗೆದ್ದಿದ್ದರಿಂದ ವಾರ್ನರ್ ಎರಡನೇ ಟಿ 20 ಯಲ್ಲಿ ಆಡಲಿಲ್ಲ. ಡೇವಿಡ್ ಗೆ ವಿಶ್ರಾಂತಿ ನೀಡಲಾಗಿದೆ ಎಂದು ತಂಡದ ಅಧಿಕಾರಿಗಳು ಹೇಳಿದ್ದಾರೆ. 37 ವರ್ಷದ ಆಟಗಾರ ಮೈದಾನದಲ್ಲಿ ಹಾಜರಿದ್ದರು ಮತ್ತು ಆಟದ ಪೂರ್ವ ಚರ್ಚೆಗೂ ಹಾಜರಾಗಿದ್ದರು. ಆದಾಗ್ಯೂ ಅವರು 12 ನೇ ಆಟಗಾರನಾಗಿ ಇರಲಿಲ್ಲ.

ಸರಣಿಗೂ ಮುನ್ನ ವಾರ್ನರ್ ನ್ಯೂಜಿಲೆಂಡ್ ಅಭಿಮಾನಿಗಳ ಬಗ್ಗೆ ಮಾತನಾಡಿದ್ದರು. ಕಳೆದ ಬುಧವಾರ ವೆಲ್ಲಿಂಗ್ಟನ್​ನ ಸ್ಕೈ ಸ್ಟೇಡಿಯಂನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ 32 ರನ್​ಗಳಿಗೆ ಔಟಾದ ನಂತರ ವಾರ್ನರ್ ಟೀಕೆಗೆ ಒಳಗಾಗಿದ್ದರು.

ಇದನ್ನೂ ಓದಿ : Hockey News : ಭಾರತ ಮಹಿಳಾ ಹಾಕಿ ತಂಡದ ಕೋಚ್ ಶೋಪ್ಮನ್​ ರಾಜೀನಾಮೆ

ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್​​ಗೆ ಅಗ್ರ ಕ್ರಮಾಂಕದಲ್ಲಿ ಮತ್ತೊಂದು ಅವಕಾಶ ಸಿಗಲಿದೆ. ಆದಾಗ್ಯೂ, ಮ್ಯಾಥ್ಯೂ ಶಾ ರ್ಟ್ ಕೂಡ ತಂಡದಲ್ಲಿದ್ದು, ಅವರ ಸೇವೆಯನ್ನು ತಂಡ ಹೇಗೆ ಬಳಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. ಏತನ್ಮಧ್ಯೆ, ಎರಡನೇ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುವಾಗ ಹೆಬ್ಬೆರಳಿಗೆ ಪೆಟ್ಟಾಗಿದ್ದ ಡೆವೊನ್ ಕಾನ್ವೇ ಅವರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡ ಆಸೀಸ್ ತಂಡವನ್ನು ಎದುರಿಸಲಿದೆ.

ತಂಡಗಳು ಇಂತಿವೆ

ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಆಡಮ್ ಝಂಪಾ.

ನ್ಯೂಜಿಲೆಂಡ್ ಟಿ20 ತಂಡ: ಫಿನ್ ಅಲೆನ್, ಟಿಮ್ ಸೀಫರ್ಟ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೋಶ್ ಕ್ಲಾರ್ಕ್ಸನ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗುಸನ್, ಟಿಮ್ ಸೌಥಿ, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್, ಜೇಕಬ್ ಡಫಿ.

Exit mobile version