Site icon Vistara News

ವಿದಾಯ ಟೆಸ್ಟ್​ ಪಂದ್ಯಕ್ಕೂ ಮುನ್ನ ಗ್ರೀನ್ ಕ್ಯಾಪ್ ಕಳವು; ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಾರ್ನರ್​

David Warner loses Baggy Green cap

ಸಿಡ್ನಿ: ವಿದಾಯ ಟೆಸ್ಟ್​ ಪಂದ್ಯ ಆಡುತ್ತಿರುವ ಡೇವಿಡ್ ವಾರ್ನರ್(David Warner)​ ಅವರ ಮೆಚ್ಚಿನ ಗ್ರೀನ್ ಕ್ಯಾಪ್(Baggy Green cap) ಕಳೆದು ಹೋಗಿದ್ದು, ಸಿಕ್ಕಿದವರು ಇದನ್ನು ದಯವಿಟ್ಟು ಹಿಂತಿರುಗಿಸುವಂತೆ ವಾರ್ನರ್​ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಕಟ ತೋಡಿಕೊಂಡಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್ ಆಗಿದ್ದು ಅವರ ಅಭಿಮಾನಿಗಳು ಕೂಡ ನೆಚ್ಚಿನ ಆಟಗಾರನ ಗ್ರೀನ್ ಕ್ಯಾಪ್ ಸಿಕ್ಕಿದವರು ಹಿಂದುರಿಗಿಸಿ ಎಂದು ಮನವಿ ಮಾಡಿದ್ದಾರೆ.

ಡೇವಿಡ್​ ವಾರ್ನರ್​ ಅವರು ಪಾಕಿಸ್ತಾನ ವಿರುದ್ಧದ ಪಿಂಕ್​ ಟೆಸ್ಟ್​ ಆಡುವ ಮೂಲಕ ತಮ್ಮ ಟೆಸ್ಟ್​ ವೃತ್ತಿ ಬದುಕಿಗೆ ತೆರೆ ಎಳೆಯಲಿದ್ದಾರೆ. ಆದರೆ ಈ ಪಂದ್ಯದಲ್ಲಿ ಅವರು ತೊಡಬೇಕಿದ್ದ ಗ್ರೀನ್​ ಕ್ಯಾಚ್​ ಇದೀಗ ಕಳೆದು ಹೋಗಿದೆ. ವಾರ್ನರ್ ಕಳೆದ 12 ವರ್ಷಗಳಿಂದ ಈ ಗ್ರೀನ್ ಕ್ಯಾಪ್ ತೊಡುತ್ತಿದ್ದರು. ಈ ಕ್ಯಾಪ್​ ಅಲ್ಲಲ್ಲಿ ಕಿತ್ತು ಹೋಗಿದ್ದರೂ ಅದರ ಮೇಲೆ ಭಾವನಾತ್ಮಕ ನಂಟು ವಾರ್ನರ್​ ಅವರಿಗಿತ್ತು. ಇದೀಗ ವಿದಾಯ ಪಂದ್ಯದ ವೇಳೆ ಈ ಕ್ಯಾಪ್​ ಕಳೆದು ಹೋಗಿರುವ ಬಗ್ಗೆ ಅವರು ತುಂಬಾ ಬೇಸರಗೊಂಡಿದ್ದು ದಯವಿಟ್ಟು ಇದನ್ನು ಮರಳಿ ಕೊಡಿ ಎಂದು ವಿಡಿಯೊ ಮಾಡಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ David Warner : ವಿಶ್ವದ ಭಯಂಕರ ಬೌಲರ್​ ಯಾರೆಂದು ವಿವರಿಸಿದ ಡೇವಿಡ್​ ವಾರ್ನರ್​

ಮೆಲ್ಬೋರ್ನ್​ನಲ್ಲಿ ಮುಕ್ತಾಯಗೊಂಡಿದ್ದ ದ್ವಿತೀಯ ಟೆಸ್ಟ್​ ಪಂದ್ಯದ ಬಳಿಕ ಕೊನೆಯ ಪಂದ್ಯವಾಡಲು ಸಿಡ್ನಿಗೆ ಬರುವಾಗ ವಾರ್ನರ್​ ಅವರ ಲಗೇಜ್ ಒಂದು ಮಿಸ್ ಆಗಿದ್ದು ಲಗೇಜ್​ ಸಿಕ್ಕರೂ ಕೂಡ ಅದರಲ್ಲಿದ್ದ ಕ್ಯಾಪ್ ಮಾತ್ರ ಸಿಗಲಿಲ್ಲ. ಹೊಟೇಲ್​ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಲ್ಲಿ ಯಾರು ಕೂಡ ಈ ಕ್ಯಾಪ್ ತೆಗೆದಿಲ್ಲ ಎನ್ನುವುದು ಕಂಡು ಬಂದಿದೆ. ಇದು ವಿಮಾನ ನಿಲ್ದಾಣದಲ್ಲಿ ಮಿಸ್​ ಆಗಿರುವುದು ಖಚಿತವಾಗಿದೆ. ಆದರೆ ಯಾರು ಈ ಕ್ಯಾಪ್ ತೆಗೆದಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಹೀಗಾಗಿ ಈ ಕ್ಯಾಪ್​ ಯಾರಾದರೂ ತೆಗೆದುಕೊಂಡಿದ್ದರೆ ದಯವಿಟ್ಟು ಅದನ್ನು ಹಿಂದಿರುಗಿಸಿ, ನಿಮಗೆ ಬೇರೊಂದು ಕ್ಯಾಪ್ ನೀಡುತ್ತೇನೆ ಎಂದು ವಾರ್ನರ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡೊಯೊ ಮೂಲಕ ಮನವಿ ಮಾಡಿದ್ದಾರೆ.

ಏಕದಿನ ಕ್ರಿಕೆಟ್​ಗೂ ನಿವೃತ್ತಿ ಘೋಷಣೆ

ಡೇವಿಡ್‌ ವಾರ್ನರ್‌ (David Warner) ಅವರು ಏಕದಿನ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಅವಶ್ಯಕತೆ ಬಿದ್ದರೆ ತಂಡದ ಪರವಾಗಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ (Champions Trophy) ಆಡುತ್ತೇನೆ ಎಂದು ಕೂಡ ಡೇವಿಡ್‌ ವಾರ್ನರ್‌ ಘೋಷಿಸಿದ್ದಾರೆ. ಹಾಗೆಯೇ, ಚಾಂಪಿಯನ್ಸ್‌ ಟ್ರೋಫಿಯೇ 37 ವರ್ಷದ ಡೇವಿಡ್‌ ವಾರ್ನರ್‌ ಅವರಿಗೆ ಕೊನೆಯ ಏಕದಿನ ಸರಣಿ ಆಗಲಿದೆ ಎಂದು ಹೇಳಲಾಗುತ್ತಿದೆ. “ನಾನು ಟೆಸ್ಟ್‌ ಕ್ರಿಕೆಟ್‌ ಜತೆಗೆ ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುತ್ತಿದ್ದೇನೆ. ಏಕದಿನ ವಿಶ್ವಕಪ್‌ ಗೆಲುವು ಸಾಧಿಸಿದ ಬಳಿಕ ನನ್ನಲ್ಲಿ ಇಂತಹದ್ದೊಂದು ನಿರ್ಧಾರ ಮೂಡಿದೆ. ಭಾರತದಲ್ಲಿ ಏಕದಿನ ವಿಶ್ವಕಪ್‌ ಗೆಲುವು ಸಾಧಿಸಿರುವುದು ಪ್ರಮುಖ ಸಾಧನೆಯಾಗಿದೆ” ಎಂದು ಡೇವಿಡ್‌ ವಾರ್ನರ್‌ ಹೇಳಿದ್ದಾರೆ.

Exit mobile version