Site icon Vistara News

David Warner : ವಿಶ್ವದ ಭಯಂಕರ ಬೌಲರ್​ ಯಾರೆಂದು ವಿವರಿಸಿದ ಡೇವಿಡ್​ ವಾರ್ನರ್​

David Warner

ಬೆಂಗಳೂರು: ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್​​ಗಳಲ್ಲಿ ಒಬ್ಬರಾದ ಡೇವಿಡ್ ವಾರ್ನರ್ ಒಂದು ದಶಕಕ್ಕೂ ಹೆಚ್ಚು ಕಾಲ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಲೈನ್​ ಅಪ್​ನ ಆಧಾರಸ್ತಂಭವಾಗಿದ್ದರು. ಪಾಕಿಸ್ತಾನ ವಿರುದ್ಧದ ಸಿಡ್ನಿ ಟೆಸ್ಟ್ ನಂತರ ಅವರು ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತರಾಗಲಿದ್ದಾರೆ. ಇದು ಖಂಡಿತವಾಗಿಯೂ ಆಸ್ಟ್ರೇಲಿಯಾಕ್ಕೆ ದೊಡ್ಡ ನಷ್ಟವಾಗಿದೆ.

ಇತ್ತೀಚೆಗೆ ಭಾರತದಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ ವಾರ್ನರ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಏಕದಿನ ಸ್ವರೂಪದಲ್ಲಿ ಕನಿಷ್ಠ 2025 ರ ಚಾಂಪಿಯನ್ಸ್ ಟ್ರೋಫಿಯವರೆಗೆ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಏಕ ದಿನ ಕ್ರಿಕೆಟ್​ನಿಂದಲೂ ಮುಕ್ತಿ ಪಡೆದಿದ್ದಾರೆ. ಇದೀಗ ಅವರು ಟಿ 20 ಸ್ವರೂಪದತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ. ಇದೀಗ ಅವರು ತಮ್ಮ ಆಯ್ಕೆಗಳ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : David Warner : ಕ್ಯಾಪಿಟಲ್ಸ್ ತಂಡಕ್ಕೆ ವಾರ್ನರ್ ನಾಯಕ

ವಿದಾಯದ ಬಳಿಕ ವಾರ್ನರ್ ಈಗ ತಮ್ಮ ವೃತ್ತಿಜೀವನದಲ್ಲಿ ಆಡಿದ ಕಠಿಣ ಬೌಲರ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅವರೇ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೇನ್​. ಆಫ್ರಿಕಾದ ವೇಗಿಯನ್ನು ವಿಶ್ವ ದರ್ಜೆಯ ಬೌಲರ್ ಎಂದು ಶ್ಲಾಘಿಸಿದ್ದಾರೆ. 2016-17ರ ತವರು ಬೇಸಿಗೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಅನ್ನು ನೆನಪಿಸಿಕೊಂಡ ಅವರು, ಶಾನ್ ಮಾರ್ಷ್ ಮತ್ತು ತಾವು ಆರಂಭಿಕರಾಗಿ ಡೇಲ್​​ಸ್ಟೇನ್ ಅವರನ್ನು ಎದುರಿಸಲು ಕಷ್ಟಪಟ್ಟಿದ್ದೆವು ಎಂದು ಹೇಳಿದ್ದಾರೆ.

ನಾನು ನೋಡಿದ ಭಯಾನಕ ಬೌಲರ್​​ ಡೇಲ್ ಸ್ಟೇನ್. ನಾನು ವಾಕಾಗೆ (ದಕ್ಷಿಣ ಆಫ್ರಿಕಾ ವಿರುದ್ಧದ 2016-17ರ ತವರು ಸರಣಿಯ ಮೊದಲ ಟೆಸ್ಟ್) ಬಗ್ಗೆ ಮಾತನಾಡುತ್ತಿದ್ದೇನೆ. ಆಗ ನಾನು ಮತ್ತು ಶಾನ್ ಮಾರ್ಷ್ 45 ನಿಮಿಷಗಳ ಆರಂಭಿಕ ಸೆಷನ್​ನಲ್ಲಿ ಒದ್ದಾಡಬೇಕಾಯಿತು. ಶಾನ್ ನನ್ನ ಬಳಿಗೆ ಬಂದು ಸ್ಟೇನ್ ಅವರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದರು ಎಂದು ವಾರ್ನರ್ ಹೇಳಿಕೊಂಡಿದ್ದಾರೆ.

ಮಾರ್ಷ್​ ಭುಜಕ್ಕೆ ಗಾಯ

ಸ್ಟೇನ್ ತಮ್ಮ ಕಠಿಣ ಬೌಲಿಂಗ್​ ಮೂಲಕ ಮಾರ್ಷ್ ಅವರ ಭುಜದ ನೋವು ಎದುರಿಸುವಂತೆ ಮಾಡಿದ್ದರು. ಚೆಂಡನ್ನು ಎಡಗೈ ಬ್ಯಾಟರ್​ಗೆ ಕಠಿಣವಾಗುವಂತೆ ತಿರುಗಿಸುವ ಅವರ ಸಾಮರ್ಥ್ಯವು ವಿಶೇಷ ಎಂದು ವಾರ್ನರ್ ಹೇಳಿದ್ದಾರೆ. ಡೇಲ್ ಸ್ಟೇನ್​ ಬ್ಯಾಟರ್​ಗಳ ಮುಖದಲ್ಲಿ ಎಂದಿಗೂ ನಗು ತರಿಸುತ್ತಿರಲಿಲ್ಲ ಎಂದು ವಾರ್ನರ್ ಅಭಿಪ್ರಾಯಪಟ್ಟಿದ್ದಾರೆ.

“ಡೇಲ್​ ಸ್ಟೇನ್​ ನನ್ನನ್ನು ಸತಾಯಿಸಿದ್ದರು. ಆ ಪಂದ್ಯದಲ್ಲಿ ಅವರು ಮಾರ್ಷ್​ ಭುಜವನ್ನು ಮುರಿದರು/ ಅವರು ಚೆಂಡನ್ನು ಮತ್ತೆ ಎಡಗೈ ಬ್ಯಾಟರ್​ಗೆ ಮಾರಕವಾಗಿಸುತ್ತಿದ್ದರು. ಇದು ಮಿಚೆಲ್ ಸ್ಟಾರ್ಕ್ ಚೆಂಡನ್ನು ಬಲಗೈ ಬ್ಯಾಟರ್​ಗೆ ಅಪಾಯಕಾರಿ ಮಾಡುವಂತಿದೆ. ಅವರು ನಿಮಗೆ ಬ್ಯಾಟರ್​ಗಳ ಪಾಲಿಗೆ ಅಪಾಯಕಾರಿ ಎಂದು ವಾರ್ನರ್ ನೆನಪಿಸಿಕೊಂಡಿದ್ದಾರೆ.

ಡೇವಿಡ್ ವಾರ್ನರ್ ಭವಿಷ್ಯದಲ್ಲಿ ಟಿ 20 ಮತ್ತು ಟಿ20 ಫ್ರಾಂಚೈಸಿಗಳಿಗಾಗಿ ಆಡುವುದನ್ನು ಮುಂದುವರಿಸಲಿದ್ದಾರೆ. ಆದರೆ, ಆ ತಂಡದ ಪರವಾಗಿ ಅವರು ಹಲವಾರು ಅವಿಸ್ಮರಣೀಯ ಇನಿಂಗ್ಸ್​ಗಳನ್ನು ನೀಡಿದ್ದಾರೆ.

Exit mobile version