Site icon Vistara News

ರಾಮನ ಫೋಟೊ ಹಂಚಿಕೊಂಡು ‘ಜೈ ಶ್ರೀರಾಮ್’ ಎಂದ ಡೇವಿಡ್​ ವಾರ್ನರ್​, ರಿಂಕು ಸಿಂಗ್​

David Warner

ಬೆಂಗಳೂರು: ಸೋಮವಾರ ನಡೆದ ರಾಮಮಂದಿರ(Ram Mandir) ಪ್ರಾಣ ಪ್ರತಿಷ್ಠಾ ಸಮಾರಂಭದ ಕುರಿತು ಟೀಮ್​ ಇಂಡಿಯಾದ ಯುವ ಬ್ಯಾಟರ್​ ರಿಂಕು ಸಿಂಗ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಯೋಧ್ಯೆಯ ಭಗವಾನ್ ಶ್ರೀ ರಾಮನ ವಿಗ್ರಹದ ಚಿತ್ರವನ್ನು ಪೋಸ್ಟ್ ಮಾಡಿ “ಜೈ ಶ್ರೀ ರಾಮ್” ಎಂದು ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಬ್ಯಾಟರ್ ಡೇವಿಡ್ ವಾರ್ನರ್ ಮತ್ತು ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ ಕೂಡ ಭಾರತೀಯರಿಗೆ ರಾಕ ಮಂದಿರ ಉದ್ಘಾಟನೆಯ ವಿಶೇಷ ಸಂದೇಶ ನೀಡಿದ್ದಾರೆ. ವಾರ್ನರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್​ನಲ್ಲಿ “ಜೈ ಶ್ರೀ ರಾಮ್ ಇಂಡಿಯಾ” ಎಂದು ಬರೆದುಕೊಂಡಿದ್ದಾರೆ.

ಸೋಮವಾರ ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸುವ ಮೂಲಕ ರಾಮಮಂದಿರ ಲೋಕಾರ್ಪಣೆ ಮಾಡಿದರು. ಶ್ರೀರಾಮನ ವಿಗ್ರಹ ಅನಾವರಣಗೊಳಿಸುತ್ತಿದ್ದಂತೆ ದೇಶಾದ್ಯಂತ ಸಂತಸ ಮನೆ ಮಾಡಿತ್ತು. ಎಲ್ಲಡೆ ಭಕ್ತರು ಸಂಭ್ರಮಾಚರಿಸಿದ್ದರು.

ಅಭೂತಪೂರ್ವ ಕ್ಷಣ ಎಂದ ಸಚಿನ್​ ತೆಂಡೂಲ್ಕರ್​


ಈ ಪವಿತ್ರ ಸಮಾರಂಭದಲ್ಲಿ ಪಾಲ್ಗೊಂಡ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಇದೊಂದು ಅಭೂತಪೂರ್ವ ಕ್ಷಣ ಮತ್ತು ಭಾವನೆ ಎಂದು ಹೇಳಿದ್ದಾರೆ. ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಂಡ ಸಚಿನ್​ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ಮಾತನ್ನು ಹೇಳಿದರು. ಕೋಟ್ಯಂತರ ರಾಮ ಭಕ್ತರ ಕನಸು ನನಸಾಗಿದೆ. ಅಭೂತಪೂರ್ವ ಕ್ಷಣದಲ್ಲಿ ನಾನು ಕೂಡ ಭಾಗಿಯಾದದ್ದು ನಿಜಕ್ಕೂ ಸಂತಸ ತಂದಿದೆ. ಜೈ ಶ್ರೀ ರಾಮ್​ ಎಂದು ಹೇಳಿದರು.

ಇದನ್ನೂ ಓದಿ Ram Mandir: ರಾಜ್ಯದೆಲ್ಲೆಡೆ ಬೆಳಗಿದ ರಾಮ ಜ್ಯೋತಿ; ದೀಪೋತ್ಸವ ಸಂಭ್ರಮದ ಕ್ಷಣಗಳು ಇಲ್ಲಿವೆ

ಭಾವನಾತ್ಮಕ ಸಂದೇಶ ಹಂಚಿಕೊಂಡ ಸೆಹವಾಗ್


“ನಾನು ಭಾವನಾತ್ಮಕ ಮತ್ತು ಸಂತಸಗೊಂಡಿದ್ದೇನೆ. ನಾನು ಸೀಮಿತಗೊಂಡಿದ್ದೇನೆ. ನಾನು ಶರಣಾಗಿದ್ದೇನೆ, ನಾನು ತೃಪ್ತಿ ಹೊಂದಿದ್ದೇನೆ, ನಾನು ಮೂಕನಾಗಿದ್ದೇನೆ, ನಾನು ಕೇವಲ ರಾಮನ ಧ್ಯಾನದಲ್ಲಿ ಮಗ್ನನಾಗಿದ್ದಾನೆ. ಇದೆಲ್ಲ ಶ್ರೀರಾಮನ ಮಹಿಮೆ. ರಾಮ್ ಲಲ್ಲಾ ಬಂದಿದ್ದಾರೆ. ಇದನ್ನು ಸಾಧ್ಯವಾಗಿಸಿದ ಮತ್ತು ತ್ಯಾಗ ಮಾಡಿದ ಎಲ್ಲರಿಗೂ ಕೃತಜ್ಞತೆಗಳು” ಎಂದು ಸೆಹವಾಗ್ ತಮ್ಮ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ರಾಮನ ವಿಗ್ರಹದ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ.​

ಸಚಿನ್​ ಸೇರಿದಂತೆ ಮಿಥಾಲಿ ರಾಜ್​, ಸೈನಾ ನೆಹ್ವಾಲ್​, ಸುನೀಲ್​ ಗವಾಸ್ಕರ್​, ಅನಿಲ್​ ಕುಂಬ್ಳೆ, ವೆಂಕಟೇಶ್​ ಪ್ರಸಾದ್​ ಸೇರಿ ಹಲವು ಕ್ರೀಡಾಪಟುಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಾಲಿವುಡ್‌ ನಟರಾಜ್‌ ಅಮಿತಾಭ್‌ ಬಚ್ಚನ್‌, ರಣಬೀರ್‌ ಕಪೂರ್‌, ಆಲಿಯಾ ಭಟ್‌, ಆಯುಷ್ಮಾನ್‌ ಖುರಾನ, ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಕೇಶ್‌ ಅಂಬಾನಿ ಕುಟುಂಬಸ್ಥರು, ಗಾಯಕರಾದ ಸೋನು ನಿಗಮ್‌ ಸೇರಿ ಸುಮಾರು 7 ಸಾವಿರಕ್ಕೂ ಅಧಿಕ ಗಣ್ಯರು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.

Exit mobile version