Site icon Vistara News

Big Bash League | ಮಗಳು ಆಟ ನೋಡಬೇಕೆಂತೆ, ಅದಕ್ಕೆ ಇಲ್ಲೇ ಆಡುವೆ ಎಂದ ಡೇವಿಡ್‌ ವಾರ್ನರ್‌

Big Bash League

ಬ್ರಿಸ್ಬೇನ್‌ : ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ ಡೇವಿಡ್‌ ವಾರ್ನರ್‌ ಅವರಿಗೆ ವಿಶ್ವದ ನಾನಾ ಕ್ರಿಕೆಟ್‌ ಲೀಗ್‌ಗಳು ಕೈ ಬೀಸಿ ಕರೆಯುತ್ತಿವೆ. ಐಪಿಎಲ್‌ನಲ್ಲಿ ಅವರು ಮಾಡಿರುವ ಸಾಧನೆಯೇ ಅದಕ್ಕೆ ಕಾರಣ. ಆರಂಭಿಕರಾಗಿ ಬ್ಯಾಟ್‌ ಹಿಡಿದು ಇಳಿಯುವ ಅವರು ಎಂಥದ್ದೇ ದೊಡ್ಡ ಗುರಿಯನ್ನು ಮುಟ್ಟಲು ಸಮರ್ಥರು. ಸನ್‌ ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ಅವರು ಚಾಂಪಿಯನ್‌ ಪಟ್ಟವನ್ನೂ ಅಲಂಕರಿಸಿದ್ದಾರೆ. ಹೀಗಾಗಿ ಅವರಿಗೆ ಯುಎಇ ಟಿ೨೦ ಲೀಗ್ ಹಾಗೂ ದಕ್ಷಿಣ ಆಫ್ರಿಕಾ ಟಿ೨೦ ಲೀಗ್‌ನಿಂದ ಭಾರೀ ಬೇಡಿಕೆಯಿದೆ. ಆದರೆ, ಅವರು ಅವೆಲ್ಲವನ್ನೂ ಬಿಟ್ಟು ಸ್ವದೇಶದ Big Bash League ಕ್ರಿಕೆಟ್‌ ಲೀಗ್‌ನಲ್ಲಿ ಆಡಲು ಮುಂದಾಗಿದ್ದಾರೆ. ಅದಕ್ಕೆ ಅವರ ಪುತ್ರಿಯೇ ಕಾರಣವಂತೆ.

ಯುಎಇ ಲೀಗ್‌ ಹಾಗೂ ದಕ್ಷಿಣ ಆಫ್ರಿಕಾ ಲೀಗ್ ಮತ್ತು ಬಿಗ್‌ಬ್ಯಾಶ್‌ ಲೀಗ್‌ ಸೇರಿದಂತೆ ಎಲ್ಲವೂ ಏಕ ಕಾಲಕ್ಕೆ ನಡೆಯಲಿದೆ. ಮುಂದಿನ ವರ್ಷದ ಅರಂಭದ ತಿಂಗಳಲ್ಲಿ ಆಯೋಜನೆಗೊಳ್ಳಲಿದೆ. ಹೀಗಾಗಿ ವಾರ್ನರ್‌ಗೆ ಯಾವ ಲೀಗ್‌ನಲ್ಲಿ ಆಡಬೇಕು ಎಂಬ ಗೊಂದಲ ಉಂಟಾಗಿತ್ತು. ಅದನ್ನು ಪುತ್ರಿ ಪರಿಹರಿಸಿದ್ದಾರೆ. Big Bash League ಕ್ರಿಕೆಟ್‌ನಲ್ಲೇ ಆಡಬೇಕೆಂದು ಅವರು ಹೇಳಿದ್ದಕ್ಕೆ ಒಪ್ಪಿ ವಾರ್ನರ್‌, ಸಿಡ್ನಿ ಥಂಡರ್ ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ.

ನಾನು Big Bash League ಕ್ರಿಕೆಟ್ ಲೀಗ್‌ನಲ್ಲಿ ಆಡುವುದನ್ನು ನೋಡಬೇಕು ಎಂದು ನನ್ನ ಮಗಳು ಹೇಳಿದಳು. ಕುಟುಂಬ ಸದಸ್ಯನಂತೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ನನಗೆ ಇಷ್ಟ,” ಎಂದು ವಾರ್ನರ್‌ ಹೇಳಿಕೆ ನೀಡಿದ್ದಾರೆ.

ಡೇವಿಡ್‌ ವಾರ್ನರ್‌ ಅವರು ಜನವರಿಯಲ್ಲಿ ನಡೆಯಲಿರುವ ಅಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಸರಣಿ ಮುಕ್ತಾಯಗೊಂಡ ಬಳಿಕ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಲಿದ್ದಾರೆ. ಕೊನೇ ಐದು ಸುತ್ತುಗಳ ಪಂದ್ಯದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಸಿಡ್ನಿ ಥಂಡರ್‌ ತಂಡದ ಆಟಗಾರರು

ಒಲಿ ಡೇವಿಸ್‌, ಬ್ರೆಂಡನ್‌ ಡಾಗೆಟ್‌, ಮ್ಯಾಥ್ಯೂ ಗಿಲ್ಕೆಸ್‌, ಕ್ರಿಸ್ ಗ್ರೀನ್‌, ಬಾಕ್ಸ್ಟೆರ್ ಹಾಲ್ಟ್‌, ನಥಾನ್‌ ಮ್ಯಾಕ್‌ ಅಂಡ್ರ್ಯೂ, ಡೇನಿಯಲ್‌ ಸ್ಯಾಮ್ಸ್‌, ಜೇಸನ್‌ ಸಂಗಾ, ತನ್ವೀಗ್‌ ಸಂಗಾ, ಡೇವಿಡ್‌ ವಾರ್ನರ್‌.

Exit mobile version