Site icon Vistara News

WTC Final 2023 : ಡಬ್ಲ್ಯುಟಿಸಿ ಫೈನಲ್​​ಗೂ ಮೊದಲೇ ಟೆಸ್ಟ್​​​​​ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾದ ಸ್ಟಾರ್ ​ಬ್ಯಾಟರ್​​

david warner

ಲಂಡನ್​: ಭಾರತ ತಂಡದ ವಿರುದ್ಧದ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್​​ಷಿಪ್​ ಫೈನಲ್ ಪಂದ್ಯ (WTC Final 2023) ಆರಂಭಕ್ಕೆ ಕೇವಲ ನಾಲ್ಕು ದಿನಗಳ ಮೊದಲು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್ ನಿವೃತ್ತಿ ಘೋಷಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾದ ಬೇಸಿಗೆಯ ಕೊನೆಯಲ್ಲಿ ದೀರ್ಘ ಅವಧಿಯ ಕ್ರಿಕೆಟ್​​ಗೆ ವಿದಾಯ ಹೇಳುವ ಯೋಜನೆ ಇದೆ ಎಂಬುದಾಗಿ ವಾರ್ನರ್ ಶನಿವಾರ ಬಹಿರಂಗಪಡಿಸಿದ್ದಾರೆ.

ವಾರ್ನರ್ ಪ್ರಸ್ತುತ ಲಂಡನ್​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತೀಯ ತಂಡದ ವಿರುದ್ಧ ಡಬ್ಲ್ಯುಟಿಸಿ ಫೈನಲ್​ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಈ ಹಣಾಹಣಿ ಜೂನ್ 7ರಿಂದ ಪ್ರಾರಂಭವಾಗಲಿದ್ದು, ನಂತರ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಆಶಸ್ ಸರಣಿಗೆ ಸಿದ್ಧಗೊಳ್ಳಲಿದ್ದಾರೆ.

ಬೆಕೆನ್​ಹ್ಯಾಮ್​ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ವಾರ್ನರ್, ಮುಂದಿನ ವರ್ಷ ಜನವರಿಯಲ್ಲಿ ತಮ್ಮ ತವರು ಮೈದಾನವಾಗಿರುವ ಸಿಡ್ನಿಯಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯುವುದಾಗಿ ಘೋಷಿಸಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್​ನಲ್ಲಿ ಆಡುವುದಾಗಿ ಅವರು ಹೇಳಿದ್ದಾರೆ.

ಯಾವಾಗಲೂ ನನಗೆ ರನ್​ ಗಳಿಸಬೇಕು ಎಂಬ ಉದ್ದೇಶವಿರುತ್ತದೆ. ಆದರೆ, 2024ರ ವಿಶ್ವ ಕಪ್​ ನನ್ನ ವೃತ್ತಿ ಜೀವನದ ಕೊನೇ ಪಂದ್ಯ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ : WTC Final 2023 : ವೃದ್ಧಿಮಾನ್​​ಗೆ ಡಬ್ಲ್ಯುಟಿಸಿ ಫೈನಲ್​ನಲ್ಲಿ ಅವಕಾಶ ಕೊಡಬೇಕಿತ್ತು ಎಂದ ಮಾಜಿ ಆಟಗಾರ್ತಿ

ನಾನು ನನ್ನ ಕುಟುಂಬಕ್ಕೆ ಋಣಿಯಾಗಿದ್ದೇನೆ. ನಾನು ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ರನ್ ಗಳಿಸಲು ಮತ್ತು ಆಸ್ಟ್ರೇಲಿಯಾದಲ್ಲಿ ಆಡುವುದನ್ನು ಮುಂದುವರಿಸಲು ಸಾಧ್ಯವಾದರೆ ಖಂಡಿತವಾಗಿಯೂ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.

ಡಬ್ಲ್ಯುಟಿಸಿ ಫೈನಲ್ ಮತ್ತು ಮುಂಬರುವ ಆ್ಯಶಸ್ ಸರಣಿ ಮುಗಿಸಿ ಪಾಕಿಸ್ತಾನ ಸರಣಿಯನ್ನು ಗೆಲ್ಲಲು ಸಾಧ್ಯವಾದರೆ ನಾನು ಖಂಡಿತವಾಗಿಯೂ ಅಲ್ಲಿಗೆ ನನ್ನ ಟೆಸ್ಟ್​ ವೃತ್ತಿಯನ್ನು ಮುಗಿಸುತ್ತೇನೆ ಎಂದು ವಾರ್ನರ್​ ಹೇಳಿದ್ದಾರೆ.

ನಾನು 2024ರ ವಿಶ್ವಕಪ್​ನಲ್ಲಿ ಆಡಲು ಬಯಸುತ್ತೇನೆ. ಇದು ನನ್ನ ಮನದಾಳದ ಸಂಗತಿ. ಅದಕ್ಕೂ ಮೊದಲು ನಾವು ಸಾಕಷ್ಟು ಪಂದ್ಯಗಳನ್ನು ಆಡಲಿದ್ದೇನೆ. ಮುಂದಿನ ಫೆಬ್ರವರಿಗೆ ಅಭಿಯಾನ ಮುಕ್ತಾಯಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ವಾರ್ನರ್ ಹೇಳಿದ್ದಾರೆ.

ನಾನು ಐಪಿಎಲ್ ಸೇರಿದಂತೆ ಇತರ ಕೆಲವು ಫ್ರ್ಯಾಂಚೈಸಿ ಲೀಗ್​​ಗಳಲ್ಲಿ ಆಡಬೇಕಾಗುತ್ತದೆ. ಜೂನ್​ನಲ್ಲಿ ಆಟದ ಲಯವನ್ನು ಕಂಡುಕೊಳ್ಳಲಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ. ಇದೇ ವೇಳೆ ಅವರು ನ್ಯೂ ಸೌತ್ ವೇಲ್ಸ್ ಪರ ದೇಶಿಯ ಕ್ರಿಕೆಟ್​ನಲ್ಲಿ ಆಡುವುದಾಗಿಯೂ ಹೇಳಿದ್ದಾರೆ.

Exit mobile version