Site icon Vistara News

Davis Cup 2024: ವಿಶ್ವ ಗುಂಪು-1ರಲ್ಲೇ ಉಳಿದ ಭಾರತ; ತವರಿನಲ್ಲೇ ಪಾಕ್​ಗೆ ಮುಖಭಂಗ

India vs Pakistan Davis Cup

ಇಸ್ಲಾಮಾಬಾದ್‌: ಭಾರತ ಡೇವಿಸ್ ಕಪ್(Davis Cup 2024) ತಂಡವು ಪಾಕಿಸ್ತಾನವನ್ನು(India vs Pakistan Davis Cup) 3-0 ಅಂತರದಿಂದ ಮಣಿಸಿ ವಿಶ್ವ ಗ್ರೂಪ್ 1ಕ್ಕೆ(World Group I) ಅರ್ಹತೆ ಪಡೆದಿದೆ. ಭಾನುವಾರ ನಡೆದ ಸ್ಪರ್ಧೆಯಲ್ಲಿ ಯೂಕಿ ಭಾಂಬ್ರಿ ಮತ್ತು ಸಾಕೇತ್ ಮೈನೇನಿ ಗೆಲುವು ಸಾಧಿಸುವ ಮೂಲಕ ಭಾರತ ಈ ಸಾಧನೆ ಮಾಡಿತು.

60 ವರ್ಷಗಳ ನಂತರ ಪಾಕಿಸ್ತಾನಕ್ಕೆ ಭಾರತ ತನ್ನ ಐತಿಹಾಸಿಕ ಭೇಟಿ ನೀಡಿತ್ತು. ಈ ಭೇಟಿಯನ್ನು ಭಾರತ ಯಶಸ್ವಿಯಾಗಿ ಮುಗಿಸಿದೆ. ಶನಿವಾರ ನಡೆದಿದ್ದ ವರ್ಲ್ಡ್ ಗ್ರೂಪ್‌ 1 ಪ್ಲೇ-ಆಫ್ ಸ್ಪರ್ಧೆಯಲ್ಲಿ ರಾಮ್ ಕುಮಾರ್ ರಾಮನಾಥನ್(Ramkumar Ramanathan) ಮತ್ತು ಶ್ರೀರಾಮ್ ಬಾಲಾಜಿ(Sriram Balaji) ಗೆಲುವು ಸಾಧಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟಿದ್ದರು.

ಭಾನುವಾರ ನಡೆದ ಡಬಲ್ಸ್​ ಪಂದ್ಯದಲ್ಲಿ ಭಾರತದ ಯೂಕಿ ಭಾಂಬ್ರಿ ಮತ್ತು ಸಾಕೇತ್ ಮೈನೇನಿ ಅವರು ಪಾಕ್‌ನ ಮುಜಮ್ಮಿಲ್ ಮುರ್ತಾಜಾ ಮತ್ತು ಬರ್ಕತ್ ಉಲ್ಲಾ ಅವರನ್ನು 6-2 7-6 ನೇರ ಸೆಟ್​ಗಳಿಂದ ಮಣಿಸಿದರು.

ವಿಶ್ವಕಪ್ ಟೆನಿಸ್ ಎಂದು ಕರೆಯಲ್ಪಡುವ ಈವೆಂಟ್‌ನಲ್ಲಿ ಭಾರತವು ಎಂಟನೇ ಗೆಲುವು ಸಾಧಿಸಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ವಿಶ್ವ ಗುಂಪಿನ 1ರಲ್ಲಿ ಭಾರತ ಸ್ಪರ್ಧಿಸಿದರೆ, ಪಾಕಿಸ್ತಾನವು ಗುಂಪು 2ರಲ್ಲಿ ಉಳಿಯಲಿದೆ. ಭಾರತ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿ ಡೇವಿಸ್‌ ಕಪ್ ಆಡಿತ್ತು. ಇದರಲ್ಲಿ ಭಾರತ 4-0 ಅಂತರದಿಂದ ಜಯಗಳಿಸಿತ್ತು. ಇದೀಗ 60 ವರ್ಷಗಳ ಬಳಿಕ ಆಡಲಿಳಿದ ಭಾರತ 3-0 ಅಂತರದಿಂದ ಗೆದ್ದು ಬೀಗಿದೆ.

ಇದನ್ನೂ ಓದಿ Davis Cup: ಮೊದಲ ದಿನವೇ ಪಾಕಿಸ್ತಾನ​ ವಿರುದ್ಧ 2-0 ಮುನ್ನಡೆ ಸಾಧಿಸಿದ ಭಾರತ

60 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಕಾಲಿಟ್ಟ ಭಾರತ ತಂಡಕ್ಕೆ ನಾಲ್ಕರಿಂದ ಐದು ಹಂತಗಳ ಭದ್ರತೆ ಕಲ್ಪಿಸಲಾಗಿತ್ತು. ಇಸ್ಲಾಮಾಬಾದ್​ನ ನಗರದಲ್ಲಿ ಸುಮಾರು ಹತ್ತು ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪಂದ್ಯಗಳು ನಡೆಯುವ ಇಸ್ಲಾಮಾಬಾದ್ ಸ್ಪೋರ್ಟ್‌ ಕ್ಲಾಂಪೆಕ್ಸ್‌ನಲ್ಲಿ ಬಾಂಬ್‌ ನಿಷ್ಕ್ರಿಯ ದಳ ನಿತ್ಯ ಬೆಳಿಗ್ಗೆ ತಪಾಸಣೆ ನಡೆಸಲಾಗುತ್ತಿತ್ತು. ಆಟಗಾರರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಅತಿಥಿ ಗಣ್ಯರಿಗೆ ನೀಡುವ ಬಹುಸ್ತರ ಭದ್ರತಾ ವ್ಯವಸ್ಥೆ ಜತೆಗೆ ತಂಡ ಪ್ರಯಾಣಿಸುವ ವೇಳೆ ಎರಡು ಬೆಂಗಾವಲು ವಾಹನ ಒದಗಿಸಲಾಗಿತ್ತು.

Exit mobile version