Site icon Vistara News

Davis Cup: ಡೇವಿಸ್‌ ಕಪ್‌: ಭಾರತ ತಂಡಕ್ಕೆ ಡೆನ್ಮಾರ್ಕ್‌ ಸವಾಲು

sumit nagal

#image_title

ಹಿಲರ್ಡ್‌, (ಡೆನ್ಮಾರ್ಕ್‌): ಡೇವಿಸ್‌ ಕಪ್‌(Davis Cup) ಟೆನಿಸ್‌ ಟೂರ್ನಿಯ ಪ್ಲೇ ಆಫ್‌ ಪಂದ್ಯ ಶುಕ್ರವಾರ ಆರಂಭವಾಗಲಿದೆ. ವಿಶ್ವ ಗುಂಪಿನಲ್ಲಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ತಂಡ ಡೆನ್ಮಾರ್ಕ್‌ ತಂಡದ ಸವಾಲನ್ನು ಮೀರಿ ನಿಲ್ಲಬೇಕಿದೆ.

ಭಾರತ ತಂಡದಲ್ಲಿರುವ ಆಟಗಾರರಲ್ಲಿ ಯಾರೂ ವಿಶ್ವ ರ‍್ಯಾಂಕಿಂಗ್‌ನಲ್ಲಿ ಉತ್ತಮ ಶ್ರೇಯಾಂಕ ಹೊಂದಿಲ್ಲ ಆದ್ದರಿಂದ ಎಟಿಪಿ ರ‍್ಯಾಂಕಿಂಗ್​ನಲ್ಲಿ 9ನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ ತಂಡದ ಯುವ ಆಟಗಾರ ಹೋಲ್ಗರ್‌ ರೂನ್‌ ಅವರು ಭಾರತದ ಆಟಗಾರರಿಗೆ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆಯಿದೆ.

2022ರ ಮಾರ್ಚ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 4-0 ಅಂತರದಲ್ಲಿ ಡೆನ್ಮಾರ್ಕ್‌ ತಂಡವನ್ನು ಮಣಿಸಿತ್ತು. ಇದೇ ಪ್ರದರ್ಶನವನ್ನು ಭಾರತ ಈ ಬಾರಿಯೂ ತೋರಿದರೆ ಗೆಲುವು ಖಚಿತ ಎನ್ನಲಡ್ಡಿಯಿಲ್ಲ. ಆದರೆ 19 ವರ್ಷದ ರೂನ್‌ ಅವರ ಸವಾಲನ್ನು ಮೆಟ್ಟಿನಿಲ್ಲಬೇಕು ಏಕೆಂದರೆ ಇತ್ತೀಚೆಗೆ ಮುಕ್ತಾಯ ಕಂಡ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಅವರು ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಅನುಭವಿ ಆಟಗಾರರನ್ನು ಮಣಿಸಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು.

ಭಾರತ ಪರ ಯೂಕಿ ಭಾಂಬ್ರಿ(yuki bhambri) ಸಿಂಗಲ್ಸ್‌ ಪಂದ್ಯದಲ್ಲಿ ಆಡಲಿದ್ದಾರೆ. ಉಳಿದಂತೆ ಪ್ರಜ್ಞೇಶ್‌ ಗುಣೇಶ್ವರನ್(prajnesh gunneswaran), ರಾಮಕುಮಾರ್‌ ರಾಮನಾಥನ್‌ ಮತ್ತು ಸುಮಿತ್‌ ನಗಾಲ್(sumit nagal) ಕೂಡ ಸಿಂಗಲ್ಸ್​ ಆಡಲಿದ್ದಾರೆ.

ಇದನ್ನೂ ಓದಿ Australian Open | ಸರ್ಬಿಯಾದ ನೊವಾಕ್​ ಜೊಕೊವಿಕ್​ ಆಸ್ಟ್ರೇಲಿಯನ್​ ಓಪನ್​ ಚಾಂಪಿಯನ್​

ಶುಕ್ರವಾರ ನಡೆಯಲಿರುವ ಸಿಂಗಲ್ಸ್‌ ಪಂದ್ಯಗಳಲ್ಲಿ ಯೂಕಿ-ರೂನ್‌ ಮತ್ತು ಸುಮಿತ್‌-ಹೋಮ್‌ಗ್ರೆನ್‌ ಎದುರಾಗಲಿದ್ದಾರೆ. ಶನಿವಾರ ನಡೆಯುವ ಡಬಲ್ಸ್‌ನಲ್ಲಿ ಅನುಭವಿ ರೋಹನ್‌ ಬೋಪಣ್ಣ(rohan bopanna) ಮತ್ತು ಯೂಕಿ ಭಾಂಬ್ರಿ ಜತೆಯಾಗಿ ಆಡಲಿದ್ದಾರೆ. ರೋಹನ್‌ ಬೋಪಣ್ಣ ಆಸ್ಟ್ರೇಲಿಯಾ ಓಪನ್​ ಮಿಶ್ರ ಡಬಲ್ಸ್​ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಜತೆ ಆಡಿ ರನ್ನರ್​ ಅಪ್​ ಸ್ಥಾನ ಪಡೆದಿದ್ದರು.

Exit mobile version