Site icon Vistara News

Davis Cup: ಡೇವಿಸ್‌ ಕಪ್ ಟೆನಿಸ್‌; ಸುಮಿತ್ ನಗಾಲ್​ಗೆ ಜಯ; ರೇಸ್​ನಲ್ಲಿ ಉಳಿದ ಭಾರತ

Sumit Nagal

#image_title

ಹಿಲರ್ಡ್‌, (ಡೆನ್ಮಾರ್ಕ್‌): ಇಲ್ಲಿ ನಡೆಯುತ್ತಿರುವ ಡೇವಿಸ್‌ ಕಪ್(Davis Cup) ಟೆನಿಸ್‌ ಟೂರ್ನಿಯಲ್ಲಿ ಸುಮಿತ್ ನಗಾಲ್(Sumit Nagal) ಗೆಲುವು ದಾಖಲಿಸಿದ್ದಾರೆ. ಈ ಗೆಲುವಿನೊಂದಿಗೆ ವಿಶ್ವ ಗುಂಪಿನಲ್ಲಿ ಸ್ಥಾನ ಉಳಿಸಿಕೊಳ್ಳುವ ಭಾರತದ ಆಸೆ ಜೀವಂತವಾಗಿ ಉಳಿದಿದೆ.

ಶನಿವಾರ ನಡೆದ ವಿಶ್ವ ಗುಂಪು 1ರ ಪ್ಲೇ ಆಫ್‌ ಪಂದ್ಯದ ಪುರುಷರ ಸಿಂಗಲ್ಸ್ ಎರಡನೇ ‍ಹಣಾಹಣಿಯಲ್ಲಿ ಆತಿಥೇಯ ಡೆನ್ಮಾರ್ಕ್ ತಂಡದ ಆಗಸ್ಟ್ ಹೊಮ್‌ಗ್ರೇನ್(August Holmgren) ವಿರುದ್ಧ ಸುಮಿತ್ ನಗಾಲ್ 4-6, 6-4, 6-4 ಅಂತರದಿಂದ ಗೆಲುವು ದಾಖಲಿಸಿದರು.

ಈ ಗೆಲುವಿನೊಂದಿಗೆ ಭಾರತದ ಹೋರಾಟ ಜೀವಂತವಾಗಿ ಉಳಿದುಕೊಂಡಿದೆ. ಸದ್ಯ ಭಾರತ 1-1ರ ಸಮಬಲ ಸಾಧಿಸಿದೆ. ಶುಕ್ರವಾರ ನಡೆದ ಸಿಂಗಲ್ಸ್ ವಿಭಾಗದ ಮೊದಲ ಸೆಣಸಾಟದಲ್ಲಿ ಭಾರತದ ಯೂಕಿ ಭಾಂಬ್ರಿ 2-6, 2-6ರಿಂದ ಹೋಲ್ಗರ್ ರೂನ್ ವಿರುದ್ಧ ಪರಾಭವಗೊಂಡಿದ್ದರು. ಒಂದೊಮ್ಮೆ ಸುಮಿತ್​ ನಗಾಲ್​ ಈ ಪಂದ್ಯದಲ್ಲಿ ಸೋಲು ಕಂಡಿದ್ದರೆ ಭಾರತದ ಹೋರಾಟ ಇಲ್ಲಿಗೆ ಕೊನೆಗೊಳ್ಳುತ್ತಿತ್ತು.

ಇದನ್ನೂ ಓದಿ Davis Cup: ಡೇವಿಸ್‌ ಕಪ್‌: ಭಾರತ ತಂಡಕ್ಕೆ ಡೆನ್ಮಾರ್ಕ್‌ ಸವಾಲು

ಜಿದ್ದಾಜಿದ್ದಿನ ಹೋರಾಟದಲ್ಲಿ ಮೊದಲ ಸೆಟ್‌ನಲ್ಲಿ ಸುಮಿತ್‌ ಹಿನ್ನಡೆ ಅನುಭವಿಸಿದರು. ಆದರೆ ಬಳಿಕ ಎರಡೂ ಸೆಟ್​ಗಳಲ್ಲಿ ಮೇಲುಗೈ ಸಾಧಿಸಿ ಹೊಮ್‌ಗ್ರೇನ್ ಅವರನ್ನು ಹಿಮ್ಮಟಿಸಿದರು. ಉಭಯ ಆಟಗಾರರ ಈ ಹೋರಾಟ ಎರಡು ಗಂಟೆ 27 ನಿಮಿಷಗಳ ಕಾಲ ನಡೆಯಿತು. ಡಬಲ್ಸ್ ಮತ್ತು ರಿವರ್ಸ್ ಸಿಂಗಲ್ಸ್ ಪಂದ್ಯಗಳು ಇನ್ನೂ ಬಾಕಿ ಇವೆ. ಭಾರತ ಡೆನ್ಮಾರ್ಕ್‌ ಎದುರು ಸೋತರೆ ವಿಶ್ವದ ಎರಡನೇ ಗುಂಪಿಗೆ ಜಾರಲಿದೆ.

Exit mobile version