ನವದೆಹಲಿ: ಇಸ್ಲಾಮಾಬಾದ್ನಲ್ಲಿ ಫೆ.3 ಮತ್ತು 4ರಂದು ನಡೆಯುವ ಡೇವಿಸ್ ಕಪ್(Davis Cup) ಪಂದ್ಯವನ್ನಾಡಲು ಭಾರತ ತಂಡ ಈಗಾಗಲೇ ಪಾಕಿಸ್ತಾನ ತಲುಪಿದೆ. ಇದು 60 ವರ್ಷಗಳ ನಂತರ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿರುವುದು. ಹೀಗಾಗಿ ಆಟಗಾರರ ಮತ್ತು ಪಂದ್ಯ ನಡೆಯುವ ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಬೆಂಗಾವಲು ವಾಹನದೊಂದಿಗೆ ಪ್ರಯಾಣ
ಪಂದ್ಯಗಳು ನಡೆಯುವ ಇಸ್ಲಾಮಾಬಾದ್ ಸ್ಪೋರ್ಟ್ ಕ್ಲಾಂಪೆಕ್ಸ್‌ನಲ್ಲಿ ಬಾಂಬ್ ನಿಷ್ಕ್ರಿಯ ದಳ ನಿತ್ಯ ಬೆಳಿಗ್ಗೆ ತಪಾಸಣೆ ಕೈಗೊಳ್ಳಲಿದೆ. ಆಟಗಾರರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಅತಿಥಿ ಗಣ್ಯರಿಗೆ ನೀಡುವ ಬಹುಸ್ತರ ಭದ್ರತಾ ವ್ಯವಸ್ಥೆ ಜತೆಗೆ ತಂಡ ಪ್ರಯಾಣಿಸುವ ವೇಳೆ ಎರಡು ಬೆಂಗಾವಲು ವಾಹನ ಒದಗಿಸಲಾಗಿದೆ.
ಇದನ್ನೂ ಓದಿ ಕನ್ನಡಿಗ ಬೋಪಣ್ಣಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ
‘We are well looked after’, says Indian Davis Cup manager on landing in Pakistan https://t.co/cIewdllywr via @IndianExpress
— Indian Tennis Daily (ITD) (@IndTennisDaily) January 29, 2024
ಭಾರತ ತಂಡ 1964 ರಲ್ಲಿ ಕೊನೆಯ ಬಾರಿ ಪಾಕಿಸ್ತಾನಕ್ಕೆ ತೆರಳಿ ಡೇವಿಸ್ ಕಪ್ ಆಡಿತ್ತು. ಇದರಲ್ಲಿ ಭಾರತ 4-0 ಅಂತರದಿಂದ ಜಯಗಳಿಸಿತ್ತು. ಇದಾದ ಬಳಿಕ ಭಾರತ ಪಾಕ್ನಲ್ಲಿ ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಪಾಕ್ ತಂಡ ಭಾರತಕ್ಕೆ ಬಂದು ಪಂದ್ಯಗಳನ್ನು ಆಡಿತ್ತು.
ಇಸ್ಲಾಮಾಬಾದ್ ಸ್ಪೋರ್ಟ್ ಕ್ಲಾಂಪೆಕ್ಸ್ ಸುತ್ತ ಮುತ್ತ ಹದ್ದಿನ ಕಣ್ಣಿಟ್ಟಿ ಪಾಕ್ ಆರ್ಮಿ.
5 ಹಂತದ ಭದ್ರತೆ
ಭಾರತ ತಂಡಕ್ಕೆ ನಾಲ್ಕರಿಂದ ಐದು ಹಂತಗಳ ಭದ್ರತೆ ಕಲ್ಪಿಸಲಾಗಿದೆ. ಇಸ್ಲಾಮಾಬಾದ್ ಏಷ್ಯಾದ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವುದರಿಂದ ಭದ್ರತೆ ಈಗಾಗಲೇ ಬಿಗಿಯಾಗಿದೆ. ನಗರದಲ್ಲಿ ಸುಮಾರು ಹತ್ತು ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಾರತೀಯ ಆಟಗಾರರ ಸುರಕ್ಷತೆ ಮತ್ತು ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆ ಉಂಟಾದರು ಕೂಡ ಪಂದ್ಯಗಳನ್ನು ಆಡುವುದಿಲ್ಲ ಎಂದು ಪಿಟಿಎಫ್ ಪ್ರಧಾನ ಕಾರ್ಯದರ್ಶಿ ಕರ್ನಲ್ ಗುಲ್ ರೆಹಮಾನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.