Site icon Vistara News

Commonwealth Games | ಮತ್ತೊಂದು ಉದ್ದೀಪನಾ ಕಳಂಕ

commonwealth games

ನವ ದೆಹಲಿ : Commonwealth Games ಸ್ಪರ್ಧೆಗೆ ತೆರಳಿರುವ ಭಾರತ ಅಥ್ಲೀಟ್‌ಗಳ ನಿಯೋಗಕ್ಕೆ ಮತ್ತೊಂದು ಉದ್ದೀಪನಾ ಮದ್ದು ಸೇವನೆಯ ಕಳಂಕ ತಟ್ಟಿದೆ. ೪X೧೦೦ ಮೀಟರ್ಸ್‌ ರಿಲೇ ಮಹಿಳೆಯರ ತಂಡದ ಅಥ್ಲೀಟ್‌ ಒಬ್ಬರು ಡೋಪಿಂಗ್‌ ಟೆಸ್ಟ್‌ನಲ್ಲಿ ಫೇಲ್‌ ಆಗಿದ್ದಾರೆ. ಹೀಗಾಗಿ ಭಾರತ ತಂಡದಿಂದ ಅವರನ್ನು ಕೈ ಬಿಡುವ ಸಾಧ್ಯತೆಗಳಿದ್ದು, ತವರಿಗೆ ಮರಳಬೇಕಾಗಿದೆ.

ಅಥ್ಲೀಟ್‌ ಹೆಸರನ್ನು ಅಧಿಕಾರಿಗಳು ಬಹಿರಂಗ ಮಾಡಿಲ್ಲ. Commonwealth Games ರಿಲೇ ತಂಡಕ್ಕೆ ಆಯ್ಕೆಯಾಗಿದ್ದ ಸ್ಪರ್ಧಿಯೊಬ್ಬರು ಉದ್ದೀಪನಾ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದೆ. ಅವರು ಕೂಟದಿಂದ ಹಿಂದೆ ಸರಿಯಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಬ್ಬರು ಅವಕಾಶ ಕಳೆದುಕೊಳ್ಳುವ ಮೂಲಕ ಮಹಿಳಾ ರಿಲೇ ತಂಡದಲ್ಲಿ ನಾಲ್ವರು ಸ್ಪರ್ಧಿಗಳು ಮಾತ್ರ ಉಳಿಯುವಂತಾಗಿದೆ. ಈ ಪೈಕಿ ಒಬ್ಬರು ಗಾಯಗೊಂಡರೂ ಟ್ರ್ಯಾಕ್ ವಿಭಾಗಕ್ಕೆ ಆಯ್ಕೆಯಾಗಿರುವ ಯಾರಾದರೂ ತಂಡ ಸೇರಬಹುದು. ಒಟ್ಟಿನಲ್ಲಿ ಇದು ತಂಡದ ಮೇಲೆ ಪರಿಣಾಮ ಬೀರುವುದು ಖಚಿತ.

ಭಾರತ ಅಥ್ಲೆಟಿಕ್ಸ್‌ ಈ ಹಿಂದೆ ಹಿಮಾ ದಾಸ್, ದ್ಯುತಿ ಚಾಂದ್‌, ಶ್ರವಣಿ ನಂದಾ, ಎನ್‌ ಎಸ್‌ ಸಿಮಿ, ಎಸ್‌, ಧನಲಕ್ಷ್ಮಿ ಮತ್ತು ಎಂ. ವಿ ಜಿಲ್ನಾ ಅವರನ್ನು ೩೭ ಸದಸ್ಯರ ಅಥ್ಲೆಟಿಕ್ಸ್‌ ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ, ಭಾರತ ಒಲಿಂಪಿಕ್ಸ್‌ ಸಂಸ್ಥೆಯು ೩೬ ಅಥ್ಲೀಟ್‌ಗಳ ಕೋಟಾ ನಿಗದಿ ಪಡಿಸಿದ್ದರಿಂದ ಜಿಲ್ನಾ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಬಳಿಕ ಧನಲಕ್ಷ್ಮಿ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಖಚಿತವಾದ್ದರಿಂದ ಸ್ಥಾನ ಕಳೆದುಕೊಂಡರು. ಆ ಸ್ಥಾನಕ್ಕೆ ಮತ್ತೆ ಜಿಲ್ನಾ ಆಯ್ಕೆಯಾಗಿದ್ದರು.

ತಡವಾಗಿ ತಂಡ ಸೇರಿದ ಅಥ್ಲೀಟ್‌ ಕೂಡ ಉದ್ದೀಪನಾ ಮದ್ದು ಸೇವಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಕಾಮನ್ವೆಲ್ತ್​ ಗೇಮ್ಸ್​ ನಿಯೋಗವನ್ನು ಹುರಿದುಂಬಿಸಲಿದ್ದಾರೆ Narendra Modi , ಬುಧವಾರ ಸಂವಾದ

Exit mobile version