Site icon Vistara News

Dipa Karmakar: ಅಮಾನತು ಶಿಕ್ಷೆ ಪ್ರಕಟಗೊಂಡ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ದೀಪಾ ಕರ್ಮಾಕರ್

Dipa Karmakar

#image_title

ನವದೆಹಲಿ: ನಿಷೇಧಿತ ವಸ್ತು ಬಳಸಿ 21 ತಿಂಗಳ ಅಮಾನತು ಶಿಕ್ಷೆಗೆ ಒಳಗಾದ ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್(Dipa Karmakar) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ದೇಶದ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ದೀಪಾ ಕರ್ಮಾಕರ್ ವಿಶ್ವ ಡೋಪಿಂಗ್ ಎಜೆನ್ಸಿ ನಿಷೇಧಿತ ವಸ್ತುಗಳಲ್ಲಿ ಸೇರಿಸಿರುವ ಹಿಜನಮೈನ್(S3. ಬೀಟಾ-2 ಅಗೊನಿಸ್ಟ್‌) ಸೇವಿಸಿರುವುದು ಡೋಪಿಂಗ್ ಟೆಸ್ಟ್‌ನಲ್ಲಿ ಸಾಬೀತಾದ ಕಾರಣ ಅವರಿಗೆ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ITA) 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ.

ನಿಷೇಧ ಎಂಬ ಸುದ್ದಿ ಹೊರಬರುತ್ತಿದ್ದಂತೆ ದೀಪಾ ಕರ್ಮಾಕರ್ ತಮ್ಮ ಟ್ವಿಟರ್​ ಖಾತೆಯಲ್ಲಿ ಪತ್ರವೊಂದನ್ನು ಪ್ರಕಟಿಸುವ ಮೂಲಕ “ನನ್ನ ಅರಿವಿಗೆ ಬಾರದೇ ನಾನು ನಿಷೇಧಿತ ವಸ್ತು ಸೇವಿಸಿದ್ದು, ಇದು ಎಲ್ಲಿಂದ ಬಂತು, ಹೇಗೆ ಸೇವಿಸಿದೆ ಎಂದು ತಿಳಿಯಲಿಲ್ಲ” ಎಂದು ಹೇಳಿದ್ದಾರೆ.

ತಪ್ಪು ಮಾಹಿತಿ ಪ್ರಕಟ

ಕೇಸು ಸೌಹಾರ್ದಯುತವಾಗಿ ಬಗೆಹರಿದಿದೆ. ಜುಲೈಯಲ್ಲಿ ನಾನು ಆಟಕ್ಕೆ ಮರಳಬಹುದಾಗಿದೆ. ಆದರೆ ನನ್ನನ್ನು ಎರಡು ವರ್ಷಗಳ ಕಾಲ ಅಮಾನತು ಮಾಡಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ. ಇದು ನಿಜವಲ್ಲ. ನನ್ನ ವೃತ್ತಿಬದುಕಿನಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸುವ ಯೋಚನೆಯೇ ನನಗೆ ಬಂದಿಲ್ಲ. ದೇಶದ ಗೌರವಕ್ಕೆ ಚ್ಯುತಿ ಬರುವಂತೆ ನಾನು ನಡೆದುಕೊಳ್ಳುವುದಿಲ್ಲ. ಸದ್ಯದಲ್ಲಿಯೇ ಜಿಮ್ನಾಸ್ಟಿಕ್​ಗೆ ಮರಳಲು ಎದುರು ನೋಡುತ್ತಿದ್ದೇ ಎಂದು ಹೇಳಿದರು.

ಇದನ್ನೂ ಓದಿ Dipa Karmakar: ನಿಷೇಧಿತ ವಸ್ತು ಬಳಕೆ; ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅಮಾನತು

2021ರ ಅಕ್ಟೋಬರ್ 11 ರಂದು ದೀಪಾ ಕರ್ಮಾಕರ್ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರ ಅಮಾನತು ಶಿಕ್ಷೆ ಇದೇ ಜುಲೈ 10ಕ್ಕೆ ಅಂತ್ಯಗೊಳ್ಳಲಿದೆ.

Exit mobile version