Site icon Vistara News

Deepak Chahar : ದೀಪಕ್​ ಚಾಹರ್​ ಐಪಿಎಲ್​ಗೆ ಮೊದಲ ಫಿಟ್​, ಸಿಎಸ್​ಕೆ ಪರ ಆಡಲಿದ್ದಾರೆ ಮಾರಕ ವೇಗಿ

A murder case has also been registered against T Sapna Gill, the possibility of going to jail again?

#image_title

ಚೆನ್ನೈ: ಟೀಮ್ ಇಂಡಿಯಾದ ವೇಗದ ಬೌಲರ್​ ದೀಪಕ್​ ಚಾಹರ್ (Deepak Chahar)​ ಗಾಯದ ಸಮಸ್ಯೆಯಿಂದ ಸುಧಾರಿಸಿಕೊಂಡಿದ್ದು, ಮುಂಬರುವ ಐಪಿಎಲ್​ ಟೂರ್ನಿಯಲ್ಲಿ ಆಡುವುದಾಗಿ ಹೇಳಿಕೊಂಡಿದ್ದಾರೆ. ಎರಡೆರಡು ಬಾರಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಅವರು ಸಂಪೂರ್ಣ ಸುಧಾರಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಅವರು ತಾವು ಒಂದು ವರ್ಷ ಅನುಭವಿಸಿದ ನೋವಿನ ಸಮಸ್ಯೆ ಬಗ್ಗೆಯೂ ಪಿಟಿಐ ಜತೆ ಮಾತನಾಡುತ್ತಾ ವಿವರಿಸಿದ್ದಾರೆ.

ದೀಪಕ್​ ಚಾಹರ್​ 2022ರ ಸಾಲಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರವಾಗಿ ಆಡಬೇಕಾಗಿತ್ತು. ಆದರೆ ಅದಕ್ಕಿಂತ ಮೊದಲು ಒತ್ತಡ ಗಾಯಕ್ಕೆ ಒಳಗಾಗಿ ಪೂರ್ಣ ಟೂರ್ನಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಸುಧಾರಿಸಿಕೊಂಡ ಅವರು ಟಿ20 ವಿಶ್ವ ಕಪ್​ನಲ್ಲಿ ಭಾರತ ತಂಡದ ಮೀಸಲು ಬೌಲರ್​ ಆಗಿ ತಂಡ ಸೇರಿಕೊಂಡಿದ್ದರು. ಆದರೆ, ಮತ್ತೆ ಗ್ರೇಡ್​ 3 ಟಿಯರ್​ ಸಮಸ್ಯೆಗೆ ಒಳಗಾದ ಅವರು ಮತ್ತೆ ಕ್ರಿಕೆಟ್​ನಿಂದ ದೂರ ಉಳಿಯುವಂತಾಗಿತ್ತು. ಇದೀಗ ಗಾಯದ ಸಮಸ್ಯೆಯಿಂದ ಗುಣಮುಖರಾಗಿದ್ದು ಐಪಿಎಲ್​ಗೆ ಫಿಟ್​ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಫಿಟ್ನೆಸ್​ಗಾಗಿ ನಾನು ಕಳೆದ ಮೂರು ತಿಂಗಳಿಂದ ಸತತವಾಗಿ ಪ್ರಯತ್ನ ಮಾಡುತ್ತಿದ್ದೇನೆ. ನಾನು ಈಗ ಫುಲ್​ ಫಿಟ್​ ಆಗಿದ್ದು ಮುಂದಿನ ಐಪಿಎಲ್​ನಲ್ಲಿ ಆಡವುದೇ ನನ್ನ ಗುರಿ. ನನಗೆ ಕಳೆದ ವರ್ಷ ಆಗಿರುವುದು ದೊಡ್ಡ ಮಟ್ಟಿನ ಗಾಯವಾಗಿತ್ತು. ದೀರ್ಘ ಕಾಲ ತಂಡದಿಂದ ದೂರ ಇದ್ದ ನಾನು ಫಿಟ್ನೆಸ್ ಪಡೆದುಕೊಳ್ಳುವುದಕ್ಕೆ ಸಾಕಷ್ಟು ಒದ್ದಾಟ ನಡೆಸಿದ್ದೇನೆ ಎಂಬುದಾಗಿ ದೀಪಕ್​ ಚಾಹರ್​ ಪಿಟಿಐ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಒತ್ತಡ ಗಾಯದ ಸಮಸ್ಯೆಗೆ ಒಳಗಾದರೆ ಮತ್ತೆ ಕ್ರಿಕೆಟ್​ ಆಡುವಾಗ ಎಚ್ಚರ ವಹಿಸಬೇಕಾಗುತ್ತದೆ. ಸಾಕಷ್ಟು ಬೌಲರ್​ಗಳು ಇದೇ ರೀತಿಯ ಒತ್ತಡ ಗಾಯಕ್ಕೆ ಒಳಗಾಗಿ ಪೇಚಾಡುತ್ತಿದ್ದಾರೆ ಎಂಬುದಾಗಿ ಚಾಹರ್​ ಹೇಳಿದ್ದಾರೆ.

Exit mobile version