Site icon Vistara News

T20 World Cup | ದೀಪಕ್ ಚಾಹರ್ ವಿಶ್ವ ಕಪ್‌ ತಂಡದಲ್ಲಿ ಇರಲೇಬೇಕು ಎಂದು ಮಾಜಿ ಕ್ರಿಕೆಟಿಗ

T20 World Cup

ಮುಂಬಯಿ : ಭಾರತ ತಂಡದ ಮಧ್ಯಮ ವೇಗಿ ದೀಪಕ್‌ ಚಾಹರ್‌ ಸುಮಾರು ೬ ತಿಂಗಳ ಬಳಿಕ ಟೀಮ್‌ ಇಂಡಿಯಾಗೆ ಎಂಟ್ರಿ ಪಡೆದುಕೊಂಡಿದ್ದು, ಅವರೀಗ ಜಿಂಬಾಬ್ವೆಯಲ್ಲಿ ನಡೆಯುತ್ತಿರುವ ಏಕ ದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಅಂತೆಯೇ ಮೊದಲ ಪಂದ್ಯದಲ್ಲಿ ಅವರು ೭ ಓವರ್‌ಗಳನ್ನು ಎಸೆದು ೨೭ ರನ್‌ಗಳನ್ನು ನೀಡಿ ೩ ವಿಕೆಟ್ ಕಬಳಿಸುವ ಮೂಲಕ ಪ್ರಭಾವಿ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಗೆ ಮುಂಬರುವ ಟಿ೨೦ ವಿಶ್ವ ಕಪ್‌ನಲ್ಲಿ (T20 World Cup) ಆಡುವ ಅವಕಾಶ ನೀಡಬೇಕು ಎಂದು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಡುತ್ತಿದ್ದಾರೆ. ಅವರಲ್ಲೊಬ್ಬರು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೆಕರ್‌.

ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಉಳಿದಿವೆ. ಮೊದಲ ಪಂದ್ಯದಂತೆ ಎಲ್ಲ ಪಂದ್ಯಗಳಲ್ಲಿ ದೀಪಕ್‌ ಚಾಹರ್‌ ವಿಕೆಟ್ ಕಬಳಿಸಿದರೆ ಅವರಿಗೆ ಮುಂದಿನ ವಿಶ್ವ ಕಪ್‌ನಲ್ಲಿ ಆಡುವ ಅವಕಾಶ ಖಂಡಿತವಾಗಿಯೂ ದೊರೆಯಲಿದೆ ಎಂದು ಮಾಂಜ್ರೆಕರ್‌ ಭವಿಷ್ಯ ನುಡಿದಿದ್ದಾರೆ.

“ದೀಪಕ್‌ ಚಾಹರ್‌ ಅವರು ಭುವನೇಶ್ವರ್‌ ಕುಮಾರ್ ಅವರ ಯುವ ಆವೃತ್ತಿ ಇದ್ದಂತೆ. ಹೀಗಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವ ಕಪ್‌ನಲ್ಲಿ ಅವರಿಗೆ ಅವಕಾಶ ನೀಡಿದರೆ ತಂಡಕ್ಕೆ ಹೆಚ್ಚು ಲಾಭವಾಗಲಿದೆ,” ಎಂದು ಅವರು ಹೇಳಿದ್ದಾರೆ.

“”ದೀಪಕ್ ಚಾಹರ್‌ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಏಕದಿನ ಮಾದರಿಯಲ್ಲಿ ಅವರ ಫಿಟ್ನೆಸ್‌ ಸಾಮರ್ಥ್ಯವನ್ನು ಟೀಮ್ ಇಂಡಿಯಾದ ಅಯ್ಕೆಗಾರರು ಪರೀಕ್ಷಿಸುತ್ತಿದ್ದಾರೆ. ಇಲ್ಲಿ ಪಾಸಾದರೆ ಅವರು ಟಿ೨೦ ಮಾದರಿಯಲ್ಲೂ ಹೆಚ್ಚು ವಿಕೆಟ್‌ ಪಡೆಯಬಲ್ಲರು. ಹೀಗಾಗಿ ಮುಂದಿನ ವಿಶ್ವ ಕಪ್‌ನಲ್ಲಿ ಅವರಿಗೆ ಅವಕಾಶ ಸಿಗಬಹುದು,” ಎಂದು ಮಾಂಜ್ರೆಕರ್‌ ಅಭಿಪ್ರಾಯಪಟ್ಟಿದ್ದಾರೆ.

“ಪವರ್‌ ಪ್ಲೇನಲ್ಲಿ ದೀಪಕ್‌ ಚಾಹರ್‌ ಪ್ರಭಾವಿ ಬೌಲಿಂಗ್ ಮಾಡಬಲ್ಲರು. ಆರಂಭಿಕ ವಿಕೆಟ್‌ಗಳನ್ನು ಪಡೆಯುವಲ್ಲೂ ನಿಸ್ಸೀಮರು. ಆದರೆ, ಡೆತ್ ಓವರ್‌ಗಳಲ್ಲಿ ವಿಕೆಟ್‌ ಪಡೆಯುವುದನ್ನು ಅವರಿಗೆ ಸ್ವಲ್ಪ ಕಷ್ಟ. ಈ ಅವಧಿಯ ಬೌಲಿಂಗ್‌ನಲ್ಲೂ ಅವರು ಸುಧಾರಣೆ ಮಾಡಿಕೊಳ್ಳಲಿದ್ದಾರೆ,” ಎಂದು ಮಾಂಜ್ರೆಕರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | IND vs ZIM ODI | ದೀಪಕ್‌ ಚಾಹರ್‌ ಭರ್ಜರಿ ರೀ ಎಂಟ್ರಿ, 7 ಓವರ್‌ಗಳಲ್ಲಿ 3 ವಿಕೆಟ್‌ ಕಬಳಿಸಿದ ಮಧ್ಯಮ ವೇಗಿ

Exit mobile version