ನವದೆಹಲಿ: ಕ್ರಿಕೆಟ್ನಲ್ಲಿ ಈಗ ಆಲ್ರೌಂಡರ್ಗಳ ಜಮಾನ. ವೇಗದ ಬೌಲಿಂಗ್ ಆಲ್ರೌಂಡರ್ಗಳಿಗಂತೂ ಇನ್ನೂ ಹೆಚ್ಚಿನ ಮರ್ಯಾದೆ. ಭಾರತ ತಂಡದಲ್ಲಿ ಈ ಸ್ಥಾನ ಸದ್ಯಕ್ಕೆ ಅಲಂಕರಿಸಿರುವುದು ಹಾರ್ದಿಕ್ ಪಾಂಡ್ಯ. ಶಾರ್ದೂಲ್ ಠಾಕೂರ್ ಸ್ಪಾಟ್ಗೆ ಹಾತೊರೆಯುತ್ತಿರುವ ಇನ್ನೊಬ್ಬ ಆಟಗಾರ. ಶಾರ್ದೂಲ್ಗಿಂತಲೂ ಉತ್ತಮ ಬ್ಯಾಟರ್ ದೀಪಕ್ ಚಾಹರ್. ಆದರೆ ಗಾಯದ ಸಮಸ್ಯೆಯಿಂದಾಗಿ ಅವರಿಗೆ ಆಡುವ ಅವಕಾಶವೇ ಸಿಗುತ್ತಿಲ್ಲ. ಅವರು ಈಗ ಸಂಪೂರ್ಣ ಫಿಟ್ ಆಗಿದ್ದು ಮುಂದಿನ ಐಪಿಎಲ್ಗೆ ಸಜ್ಜಾಗುತ್ತಿದ್ದಾರೆ. ಈ ಖುಷಿಯಲ್ಲಿರುವ ಅವರು ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪೋರ್ಟ್ಸ್ ಟಾಕ್ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಈ ವೇಳೆ ಹಾರ್ದಿಕ್ ಪಾಂಡ್ಯಗೆ ಪೈಪೋಟಿ ನೀಡಲು ನಾನು ಸಜ್ಜು ಎಂಬರ್ಥದಲ್ಲಿ ಮಾತನಾಡಿದ್ದಾರೆ.
ನಾನೀಗ ಸರಾಗವಾಗಿ 140 ಕಿಲೋಮೀಟರ್ ವೇಗದಲ್ಲಿ ಚೆಂಡು ಎಸೆಯಬಲ್ಲೆ. ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯವೂ ಇದೆ. ಯಾರನ್ನು ಬೇಕಾದರೂ ಔಟ್ ಮಾಡಬಲ್ಲೆ. ಆದರೆ, ಬ್ಯಾಟ್ ಮೂಲಕ ತಂಡಕ್ಕೆ ಹೆಚ್ಚಿನ ಕೊಡುಗೆ ನಿಡುವುದೇ ನನ್ನು ಉದ್ದೇಶ. ವೇಗದ ಬೌಲರ್ ಆಗಿ ನನಗೆ ಎಲ್ಲ ಸಂದರ್ಭದಲ್ಲೂ ಬ್ಯಾಟ್ ಮಾಡಬಲ್ಲೆ ಹಾಗೂ ತಂಡದಲ್ಲೂ ಸ್ಥಾನ ಪಡೆಯಲು ಸಾಧ್ಯ. ಆ ಮಟ್ಟಕ್ಕೆ ಏರುವುದೇ ನನ್ನ ಉದ್ದೇಶ ಹಾಗೂ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಅಯ್ಕೆಯಾಗುವುದೇ ನನ್ನ ಗುರಿ ಎಂಬುದಾಗಿ ಹೇಳಿದ್ದಾರೆ.
ವೇಗದ ಬೌಲಿಂಗ್ ಆಲ್ರೌಂಡರ್ ವಿಭಾಗದಲ್ಲಿ ಸ್ಪರ್ಧೆ ಕಡಿದೆ. ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಆ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು ವಿಶ್ವದ ನಂಬರ್ ಒನ್ ಆಲ್ರೌಂಡರ್ ಹಾಗೂ ಆ ರೀತಿಯ ಕೌಶಲವನ್ನು ಉಳಿಸಿಕೊಳ್ಳುವುದು ಶ್ರೇಷ್ಠತೆ ಎಂಬುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ : Hardik Pandya Marriage: ಇಲ್ಲಿವೆ ಹಾರ್ದಿಕ್ ಪಾಂಡ್ಯ ಮರು ಮದುವೆಯ ಕ್ಷಣಗಳು
ಮೂರು ಆವೃತ್ತಿಯ ಐಪಿಎಲ್ನಲ್ಲಿ ನಾನು ಉದ್ಘಾಟನಾ ಪಂದ್ಯದಲ್ಲಿ ಮೊದಲ ಎಸೆತವನ್ನು ಎಸೆದಿದ್ದೆ. ನಾಲ್ಕನೇ ಬಾರಿಯೂ ಅದೇ ಅವಕಾಶದ ನಿರೀಕ್ಷೆಯಲ್ಲಿ ನಾನಿದ್ದೇನೆ ಎಂಬುದಾಗಿ ದೀಪಕ್ ಚಾಹರ್ ಹೇಳಿದ್ದಾರೆ.