Site icon Vistara News

Team India | ಟೀಮ್‌ ಇಂಡಿಯಾದ ಲಕ್ಕಿ ಚಾರ್ಮ್‌ ಆಟಗಾರ ಇವರೇ ನೋಡಿ

team india

ಹರಾರೆ : ಟೀಮ್‌ ಇಂಡಿಯಾದ (Team India) ಸೀಮಿತ ಓವರ್‌ಗಳ ತಂಡ ಸತತ ಗೆಲುವಿನ ಸಂಭ್ರಮದಲ್ಲಿದೆ. ಕಳೆದ ಹಲವು ಸರಣಿಗಳನ್ನು ವಶಡಿಕೊಂಡಿರುವ ಜತೆಗೆ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅದರೆ, ಇದಕ್ಕೆಲ್ಲ ಒಬ್ಬ ಆಟಗಾರ ಕಾರಣ ಎಂದು ಕ್ರಿಕೆಟ್‌ ಪ್ರೇಮಿಗಳು ಹೇಳುತ್ತಿದ್ದಾರೆ. ಅವರು ತಂಡದಲ್ಲಿ ಇದ್ದರೆ ಭಾರತ ತಂಡ ಗೆದ್ದೇ ಗೆಲ್ಲುತ್ತದೆ. ಹೀಗಾಗಿ ಮುಂದಿನ ಏಷ್ಯಾ ಕಪ್‌ ಹಾಗೂ ವಿಶ್ವ ಕಪ್‌ಗೂ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದಾರೆ.

ಅವರೇ ಐಪಿಎಲ್‌ನಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪರ ಮಿಂಚಿ, ಭಾರತ ತಂಡದಲ್ಲಿ ಸ್ಥಾನ ಪಡೆದ ದೀಪಕ್‌ ಹೂಡ. ಹೂಡಾ ಆಡಿರುವ ಪ್ರತಿ ಪಂದ್ಯದಲ್ಲೂ ಭಾರತ ತಂಡ ಜಯ ಸಾಧಿಸಿದೆ. ಐಪಿಎಲ್‌ ಮುಗಿದ ಬಳಿಕ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ಈ ಯುವ ಆಲ್​ರೌಂಡರ್ ಇದುವರೆಗೆ ಭಾರತದ 16 ಪಂದ್ಯಗಳನ್ನು ಆಡಿದ್ದಾರೆ. ಅಷ್ಟರಲ್ಲೂ ಅವರು ಗೆಲುವು ಕಂಡಿದ್ದಾರೆ. ಇದರೊಂದಿಗೆ ಪದಾಪರ್ಣೆ ಮಾಡಿದ ಬಳಿಕ ಸತತವಾಗಿ ಗರಿಷ್ಠ ಪಂದ್ಯಗಳ ಗೆಲುವು ಸಾಧಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ರೊಮೇನಿಯಾದ ಸಾತ್ವಿಕ್‌ ನಾಡಿಗೊಟ್ಲ ಅವರು ಸತತ ೧೫ ಪಂದ್ಯಗಳನ್ನು ಗೆದ್ದು ದಾಖಲೆ ಮಾಡಿದ್ದರು.

ಟಿ೨೦ ಮಾದರಿಯಲ್ಲೂ ಹೂಡ ಉತ್ತಮ ಗೆಲುವಿನ ರೇಟಿಂಗ್ಸ್‌ ಹೊಂದಿದ್ದಾರೆ. 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹೂಡಾ ಅಷ್ಟೂ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಉಳಿದ 7 ಏಕದಿನ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಹೀಗಾಗಿಯೇ ದೀಪಕ್ ಹೂಡಾರನ್ನು ಲಕ್ಕಿ ಚಾರ್ಮ್‌ ಎನ್ನಲಾಗುತ್ತಿದೆ. ಈ ಮೂಲಕ ಅವರು ಪದಾಪರ್ಣೆ ಮಾಡಿದ ಬಳಿಕ ಸೋಲೇ ಕಾಣದ ಭಾರತದ ಆಟಗಾರ ಎಂಬ ಖ್ಯಾತಿ ಗಳಿಸಿಕೊಂಡಿದ್ದಾರೆ.

ದೀಪಕ್ ಹೂಡಾ, 7 ಏಕದಿನ ಪಂದ್ಯಗಳ 5 ಇನಿಂಗ್ಸ್​ಗಳಿಂದ 140 ರನ್ ಗಳಿಸಿದ್ದಾರೆ. ಅಂತೆಯೇ 9 ಟಿ20 ಪಂದ್ಯಗಳ 7 ಇನಿಂಗ್ಸ್​ ಮೂಲಕ 274 ರನ್ ಬಾರಿಸಿದ್ದಾರೆ. ಅದರಲ್ಲಿ ಒಂದು ಶತಕ ಕೂಡ ಸೇರಿದೆ. ಜತೆಗೆ ಮೂರು ವಿಕೆಟ್‌ ಕೂಡ ಕಬಳಿಸಿದ್ದಾರೆ. ಅವರು ಏಷ್ಯಾ ಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Practice match : ದೀಪಕ್‌ ಹೂಡಾ ಸ್ಫೋಟಕ ಬ್ಯಾಟಿಂಗ್‌, ಭಾರತಕ್ಕೆ ಜಯ

Exit mobile version