ಬೆಂಗಳೂರು: ಆಲ್‌ರೌಂಡರ್ ದೀಪಕ್ ಹೂಡಾ ಏಕಕಾಲಕ್ಕೆ ಕ್ರಿಕೆಟ್ ಕ್ಷೇತ್ರದ ಗಮನ ಸೆಳೆದಿದ್ದಾರೆ. ಐರ್ಲೆಂಡ್ ವಿರುದ್ಧ ಸ್ಫೋಟಕ ಶತಕ ಬಾರಿಸುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನೆ ಮಾತಾಗಿದ್ದಾರೆ. ಅಂತೆಯೇ ಅವರು ICC T20 Ranking ಪಟ್ಟಿಯನ್ನೂ ಭರ್ಜರಿ ಬಡ್ತಿ ಪಡೆದುಕೊಂಡಿದ್ದು, ಏಕಕಾಲಕ್ಕೆ ೪೧೪ ಸ್ಥಾನಗಳ ಜಿಗಿತ ಕಂಡಿದ್ದಾರೆ.
೨೭ ವರ್ಷದ ದೀಪಕ್ ಹೂಡಾ ಮೊದಲ ಪಂದ್ಯದಲ್ಲಿ ಅಜೇಯ ೪೭ ರನ್ ಬಾರಿಸಿದ್ದರೆ ಎರಡನೇ ಪಂದ್ಯದಲ್ಲಿ ೧೦೪ ರನ್ ಪೇರಿಸಿದ್ದರು. ಎರಡೂ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಅಬ್ಬರದಿಂದ ಭಾರತ ತಂಡ ಗೆಲುವು ಕಂಡಿತ್ತು. ಹೀಗಾಗಿ ಅವರು ಐಸಿಸಿ ಬ್ಯಾಟಿಂಗ್ Ranking ಪಟ್ಟಿಯಲ್ಲಿ ಜಿಗಿತ ಕಂಡಿದ್ದಾರೆ. ಸದ್ಯ ಅವರು ೧೦೪ನೇ ಸ್ಥಾನದಲ್ಲಿದ್ದಾರೆ.
ಟಾಪ್ ೧೦ರಲ್ಲಿ ಇಶಾನ್ ಮಾತ್ರ
ಭಾರತ ತಂಡದ ಹಿರಿಯ ಆಟಗಾರರು ಇತ್ತೀಚಿನ ದಿನಗಳಲ್ಲಿ ಟಿ೨೦ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಗಾಯದ ಸಮಸ್ಯೆ ಹಾಗೂ ಬಿಡುವಿಲ್ಲದ ಕ್ರಿಕೆಟ್‌ನ ಕಾರಣಕ್ಕೆ ಅವರು ರಜಾ ಪಡೆಯುತ್ತಿದ್ದಾರೆ. ಹೀಗಾಗಿ ಅವರೆಲ್ಲರೂ Ranking ಪಟ್ಟಿಯಲ್ಲಿ ಟಾಪ್ ೧೦ ಹಂತದಲ್ಲಿ ಸ್ಥಾನ ಪಡೆಯುತ್ತಿಲ್ಲ. ಆದಾಗ್ಯೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಅಗ್ರ ೧೦ರೊಳಗಿನ ಸ್ಥಾನ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಪಟ್ಟಿಯಲ್ಲಿ ಅವರು ಎರಡು ಸ್ಥಾನ ಇಳಿಕೆ ಕಂಡ ಹೊರತಾಗಿಯೂ ೬೮೨ ಅಂಕಗಳೊಂದಿಗೆ ೭ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: IND-IRE T20 | ಹೂಡ-ಹಾರ್ದಿಕ್ ಬ್ಯಾಟಿಂಗ್ ಅಬ್ಬರ, ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತಕ್ಕೆ ಗೆಲುವು