ಪೋರ್ಟ್ ಆಫ್ ಸ್ಪೇನ್: ಕನ್ನಡಿಗ ಹಾಗೂ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಭಾನುವಾರ ರಾತ್ರಿ ನಡೆದ IND vs WI ODI ಸರಣಿಯ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಆದರೆ, ಅವರ ಜರ್ಸಿಯನ್ನು ತೊಟ್ಟಿದ್ದ ಬೌಲರ್ ಬೌಲಿಂಗ್ ಮಾಡಿದ್ದರು! ಇದು ಹೇಗೆ ಸಾಧ್ಯ ಎಂಬುದು ಸದ್ಯದ ಪ್ರಶ್ನೆ. ಆದರೆ ಅದು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಆಫ್ ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ದೀಪಕ್ ಹೂಡಾ.
ವಿಂಡೀಸ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಶಾಯ್ ಹೋಪ್ ಹಾಗೂ ಕೈಲ್ ಮೇಯರ್ಸ್ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ನಾಯಕ ಶಿಖರ್ ಧವನ್ ಚೆಂಡನ್ನು ದೀಪಕ್ ಹೂಡಾ ಅವರ ಕೈಗಿಟ್ಟಿದ್ದರು. ಅಂತೆಯೇ ೧೦ನೇ ಓವರ್ ಎಸೆದ ಅವರು ಮೊದಲ ಎಸೆತದಲ್ಲಿಯೇ ರಿಟರ್ನ್ ಕ್ಯಾಚ್ ಮೂಲಕ ಕೈಲ್ ಮೇಯರ್ಸ್‌ಗೆ ಪೆವಿಲಿಯನ್ ದಾರಿ ತೋರಿದ್ದರು. ಇದೇ ವೇಳೆ ದೀಪಕ್ ಹೂಡ ಪ್ರಸಿದ್ಧ್ ಕೃಷ್ಣ ಅವರ ೨೪ ನಂಬರ್‌ನ ಜರ್ಸಿ ತೊಟ್ಟಿರುವುದು ಗಮನಕ್ಕೆ ಬಂದಿದೆ.
ದೀಪಕ್ ಹೂಡಾ ಅವರು ಪ್ರಸಿದ್ಧ ಕೃಷ್ಣ ಅವರ ಜರ್ಸಿ ಯಾಕೆ ತೊಟ್ಟರು ಎಂಬುವ ಚರ್ಚೆ ಈ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಕಳೆಗಟ್ಟಿದೆ. ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಿಂದೊಮ್ಮೆ ಸುರೇಶ್ ರೈನಾ ಅವರ ಜರ್ಸಿ ತೊಟ್ಟು ಆಡಿದ್ದರು ಎಂಬುದನ್ನು ನೆಟ್ಟಿಗರೊಬ್ಬರು ನೆನಪಿಸಿದ್ದಾರೆ.
ಸಾಮಾನ್ಯವಾಗಿ ಬೇರೆ ಆಟಗಾರರ ಜರ್ಸಿ ತೊಡುವ ಅನಿವಾರ್ಯತೆ ಬಂದರೆ ಹೆಸರನ್ನು ಟೇಪ್ ಅಂಟಿಸಿ ಕಾಣದಂತೆ ಮಾಡುತ್ತಾರೆ. ಆದರೆ, ದೀಪಕ್ ಹೂಡ ಟೇಪ್ ಅಂಟಿಸದೇ ಆಡಿದ್ದರು. ಹೀಗಾಗಿ ಅಭಿಮಾನಿಗಳು ಅವರನ್ನು ಗುರುತಿಸಿದ್ದಾರೆ.
ದೀಪಕ್ ಹೂಡ ಈ ಪಂದ್ಯದಲ್ಲಿ ಒಂದೇ ವಿಕೆಟ್ ಕಬಳಿಸಿದ್ದಾರೆ. ಅದರು ಪ್ರಮುಖ ವಿಕೆಟ್. ಅಲ್ಲದೆ ಒಟ್ಟಾರೆ ೯ ಓವರ್‌ಗಳಲ್ಲಿ ೪೨ ರನ್ ನೀಡಿದ್ದರು.
ಇದನ್ನೂ ಓದಿ | India vs West Indies 2nd ODI| ಅಕ್ಷರ್ ಪಟೇಲ್ ಅಬ್ಬರ, ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ