Site icon Vistara News

Worlds Archery Squads: ಆರ್ಚರಿ ವಿಶ್ವಕಪ್‌; ಅರ್ಹತೆ ಗಳಿಸಲು ದೀಪಿಕಾ ಕುಮಾರಿ ವಿಫ‌ಲ

Deepika Kumari fails to make India’s Asian Games, Worlds Archery squads

Deepika Kumari fails to make India’s Asian Games, Worlds Archery squads

ಸೋನೆಪತ್‌: ಭಾರತ ಸ್ಟಾರ್​ ಬಿಲ್ಲುಗಾರ್ತಿ ದೀಪಿಕಾ ಕುಮಾರಿ(Deepika Kumari) ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್, ವಿಶ್ವ ಕಪ್‌ ಮತ್ತು ವಿಶ್ವ ಚಾಂಪಿಯನ್‌ಶಿಪ್​ಗೆ(Worlds Archery Squads) ಅರ್ಹತೆ ಗಳಿಸಲು ವಿಫ‌ಲರಾಗಿದ್ದಾರೆ.

ಸೋನೆಪತ್‌ನಲ್ಲಿ ನಡೆದ 3 ದಿನಗಳ ಆಯ್ಕೆ ಟ್ರಯಲ್ಸ್‌ನ ವನಿತಾ ರಿಕರ್ವ್‌ ವಿಭಾಗದಲ್ಲಿ ವಿಶ್ವದ ಮಾಜಿ ನಂ.1 ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅಗ್ರ 8ರ ಒಳಗಡೆ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದರು. ಜತೆಗೆ ಹಾಲಿ ಜೂನಿಯರ್‌ ವಿಶ್ವ ಚಾಂಪಿಯನ್‌ ಕೋಮಲಿಕಾ ಬಾರಿ, ಮಾಜಿ ರಾಷ್ಟ್ರೀಯ ಚಾಂಪಿಯನ್‌ ರಿಧಿ ಪೋರ್‌ ಕೂಡ ಟಾಪ್‌-8 ಸ್ಥಾನ ಕಾಯ್ದುಕೊಳ್ಳಲಾಗದೆ ಹೊರಬಿದ್ದರು.

ತಾಯ್ತನದ ರಜೆ ಬಳಿಕ ಸ್ಪರ್ಧೆಗೆ ಮರಳಿದ ದೀಪಿಕಾ ಕುಮಾರಿ ಕಳೆದ ತಿಂಗಳು ಕೋಲ್ಕೊತಾದಲ್ಲಿ ನಡೆದ ಮೊದಲ ಹಂತದ ಟ್ರಯಲ್ಸ್‌ ನಲ್ಲಿ 7ನೇ ಸ್ಥಾನಿಯಾಗಿದ್ದರು. ಆದರೆ ಈ ಟೂರ್ನಿಯಲ್ಲಿ ಅವರು ಮತ್ತೆ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದರು. ಇದು ವಿಫಲಗೊಂಡಿದೆ. ಆದರೆ ದೀಪಿಕಾ ಕುಮಾರಿ ಅವರ ಪತಿ ಅತನು ದಾಸ್‌ ಒಂದು ವರ್ಷದ ಬಳಿಕ ರೀಕರ್ವ್‌ ವಿಭಾಗಕ್ಕೆ ಮರಳಲು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ Prithvi Shaw: ಪೃಥ್ವಿ ಶಾ ಕಾರಿನ ಮೇಲೆ ದಾಳಿ: ನಟಿ ಸಪ್ನಾ ಗಿಲ್ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

ಭಜನ್‌ ಕೌರ್‌, ಅದಿತಿ ಜೈಸ್ವಾಲ್‌, ಅಂಕಿತಾ ಭಕತ್‌ ಮತ್ತು ಸಿಮ್ರನ್‌ಜಿತ್‌ ಕೌರ್‌ ಈ ವರ್ಷದ ಏಷ್ಯನ್‌ ಗೇಮ್ಸ್‌, 4 ಹಂತಗಳ ವಿಶ್ವಕಪ್‌ ಹಾಗೂ ವಿಶ್ವ ಚಾಂಪಿಯನ್‌ಶಿಪ್‌- ಈ ಮೂರು ಜಾಗತಿಕ ಸ್ಪರ್ಧೆಗಳಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

Exit mobile version