Site icon Vistara News

Deepti Sharma | ನಾನ್‌ಸ್ಟ್ರೈಕ್‌ ರನ್‌ಔಟ್‌ ಬಗ್ಗೆ ಮೌನ ಮುರಿದ ದೀಪ್ತಿ; ಏನೆಂದರು ಭಾರತೀಯ ಬೌಲರ್?

deepti sharma

ನವ ದೆಹಲಿ : ಕ್ರಿಕೆಟ್‌ ಕ್ಷೇತ್ರದಲ್ಲಿ ಮತ್ತೊಮ್ಮೆ ಮಂಕಂಡಿಗ್ ಚರ್ಚೆಗೆ ಕಾರಣವಾಗಿದ್ದು ಭಾರತ ಮಹಿಳೆಯರ ತಂಡದ ಆಲ್‌ರೌಂಡರ್‌ ದೀಪ್ತಿ ಶರ್ಮ (Deepti Sharma). ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕ ಸರಣಿಯಲ್ಲಿ ಅವರು ಇಂಗ್ಲೆಂಡ್ ಬ್ಯಾಟರ್‌ ಚಾರ್ಲಿ ಡೀನ್‌ ಅವರನ್ನು ನಾನ್‌ಸ್ಟ್ರೈಕ್‌ ಎಂಡ್‌ನಲ್ಲಿ ರನ್‌ಔಟ್‌ ಮಾಡಿದ್ದರು. ಈ ಬಗ್ಗೆ ಇಂಗ್ಲೆಂಡ್‌ನ ಕೆಲವು ಆಟಗಾರರು ವಿರೋಧ ವ್ಯಕ್ತಪಡಿಸಿದ್ದರೆ ಬಹುತೇಕ ಮಂದಿ ದೀಪ್ತಿ ಶರ್ಮ ಅವರ ಬೆಂಬಲಕ್ಕೆ ನಿಂತಿದ್ದರು. ಎರಡು ದಿನ ಚರ್ಚೆ ನಡೆದ ಬಳಿಕ ಇದೀಗ ದೀಪ್ತಿ ಶರ್ಮ ಅವರೇ ಅದರ ಬಗ್ಗೆ ಬಾಯ್ಬಿಟ್ಟಿದ್ದು, ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಕೇಳದ ಕಾರಣ ಔಟ್‌ ಮಾಡಿದೆ ಎಂದಿದ್ದಾರೆ.

ಚಾರ್ಲಿ ಡೀನ್‌ ಪ್ರತಿಯೊಂದು ಎಸೆತಕ್ಕೂ ಮೊದಲು ನಾನ್‌ಸ್ಟ್ರೈಕ್‌ ಎಂಡ್‌ನ ಕ್ರೀಸ್‌ ತೊರೆಯುತ್ತಿದ್ದರು. ಹಲವು ಬಾರಿ ಆ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದೆ. ಆದರೆ ಅದನ್ನವರು ಪರಿಗಣಿಸಿರಲಿಲ್ಲ. ಹೀಗಾಗಿ ಮುಂದಿನ ಎಸೆತದಲ್ಲಿ ಔಟ್‌ ಮಾಡಿದೆ ಎಂಬುದಾಗಿ,” ದೀಪ್ತಿ ಶರ್ಮ ನುಡಿದಿದ್ದಾರೆ.

ಯಾರೂ ಹೇಳಿಲ್ಲ

ನಾನ್‌ಸ್ಟ್ರೈಕ್‌ ಎಂಡ್‌ನಲ್ಲಿ ರನ್‌ಔಟ್‌ ಮಾಡುವಂತೆ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಅವರು ಹೇಳಿದ ಕಾರಣ ದೀಪ್ತಿ ಔಟ್‌ ಮಾಡಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ಪೂರಕವಾಗಿರುವ ವಿಡಿಯೊಗಳನ್ನೂ ಹರಿಯಬಿಡಲಾಗಿತ್ತು. ದೀಪ್ತಿ ಶರ್ಮ ಅದನ್ನು ನಿರಾಕರಿಸಿದ್ದಾರೆ. “ಆ ರೀತಿ ಔಟ್‌ ಮಾಡುವುದು ನನ್ನ ನಿರ್ಧಾರವಾಗಿತ್ತು. ಎಚ್ಚರಿಕೆ ನೀಡಿದ ಬಳಿಕವೂ ಅದನ್ನು ಕಿವಿಗೆ ಹಾಕಿಕೊಳ್ಳದೇ ಇರುವುದು ನನಗೆ ಸರಿ ಅನಿಸಿರಲಿಲ್ಲ. ಹೀಗಾಗಿ ಔಟ್‌ ಮಾಡಿದೆ. ನನಗೆ ಯಾರೂ ಹೇಳಿಕೊಟ್ಟಿಲ್ಲ,” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Deepti Sharma | ದೀಪ್ತಿ ಶರ್ಮ ಬೆಂಬಲಕ್ಕೆ ನಿಂತ ಕ್ರಿಕೆಟ್‌ ನಿಯಮ ರೂಪಿಸುವ ಎಮ್‌ಸಿಸಿ ಕ್ಲಬ್‌

Exit mobile version