Site icon Vistara News

Duleep Trophy | ದಕ್ಷಿಣ ವಲಯಕ್ಕೆ294 ರನ್‌ ಸೋಲು, ರಹಾನೆ ನೇತೃತ್ವದ ಪಶ್ಚಿಮ ವಲಯ ತಂಡ ಚಾಂಪಿಯನ್‌

duleep trophy

ಕೊಯಮತ್ತೂರು(ಸೆ.25): ಸಂಘಟಿತ ಹೋರಾಟ ನಡೆಸಿದ ಪಶ್ಚಿಮ ವಲಯ ತಂಡ ಇಲ್ಲಿ ಭಾನುವಾರ ಮುಕ್ತಾಯಗೊಂಡ ೨೦೨೨ನೇ ಋತುವಿನ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ ತಂಡದ ವಿರುದ್ಧ ೨೯೪ ರನ್‌ಗಳ ಭರ್ಜರಿ ಜಯ ದಾಖಲಿಸಿ ಟ್ರೋಫಿ ಎತ್ತಿ ಹಿಡಿಯಿತು. ಭಾನುವಾರ ದಕ್ಷಿಣ ವಲಯದ ಕೊನೇ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ ತಂಡ ಟ್ರೋಫಿ ತನ್ನದಾಗಿಸಿಕೊಡಿತು.

ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಪಶ್ಚಿಮ ವಲಯ ತಂಡ ಎರಡನೇ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ (೨೬೫) ಅವರ ದ್ವಿ ಶತಕ ಹಾಗೂ ಸರ್ಫರಾಜ್‌ ಖಾನ್‌ (೧೨೭*) ಅವರ ಅಜೇಯ ಶತಕದ ನೆರವಿನಿಂದ ೫೨೯ ರನ್‌ ಗುರಿಯೊಡ್ಡಿತು. ಆದರೆ, ದಕ್ಷಿಣ ವಲಯ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ೨೩೪ ರನ್‌ಗಳಿಗೆ ಆಲ್‌ಔಟ್ ಆಯಿತು. ಪಶ್ಚಿಮವಲಯ ಪರ ಶಮ್ಸ್‌ ಮುಲಾನಿ ೫೧ ರನ್‌ಗಳಿಗೆ ೪ ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್‌

ಪಶ್ಚಿಮ ವಲಯ : ಮೊದಲ ಇನಿಂಗ್ಸ್‌ ೨೭೦, ಎರಡನೇ ಇನಿಂಗ್ಸ್‌ ೪ವಿಕೆಟ್‌ಗೆ ೫೮೫ ರನ್‌ಗಳಿಗೆ ಡಿಕ್ಲೇರ್ಡ್‌ (ಯಶಸ್ವಿ ಜೈಸ್ವಾಲ್‌ ೨೬೫, ಸರ್ಫರಾಜ್‌ ಖಾನ್ ೧೨೭, ಸಾಯಿ ಕಿಶೋರ್‌ ೧೫೭ಕ್ಕೆ೨).

ದಕ್ಷಿಣ ವಲಯ: ಮೊದಲ ಇನಿಂಗ್ಸ್‌ ೩೨೭. ಎರಡನೇ ಇನಿಂಗ್ಸ್‌ ೨೩೪ ( ರವಿ ತೇಜಾ ೫೩, ಕೆ. ಗೌತಮ್‌ ೧೭; ಶಮ್ಸ್‌ ಮಲಾನಿ ೫೧ಕ್ಕೆ೪).

Exit mobile version