Site icon Vistara News

Rohit Sharma: ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ರೋಹಿತ್​ ಶರ್ಮ ನಾಯಕ!

rohit sharma

ಮುಂಬಯಿ: ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನಾಯಕನನ್ನಾಗಿ ನೇಮಿಸಿದಾಗಿನಿಂದ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇತ್ತು. ಆದರೆ ಈ ಬಗ್ಗೆ ಮುಂಬೈ ಫ್ರಾಂಚೈಸಿ ಮಾತ್ರ ಈ ಸುದ್ದಿಯನ್ನು ಅಲ್ಲಗಳೆಯುತ್ತಲೇ ಬಂದಿತ್ತು. ಇದೀಗ ಮತ್ತೆ ರೋಹಿತ್​ ಮುಂಬೈ ತಂಡದಿಂದ ಹೊರ ಹೋಗಲಿದ್ದಾರೆ ಎಂಬ ಮಾತುಗಳು ಮುನ್ನಲೆಗೆ ಬಂದಿತ್ತು.

ರೋಹಿತ್​ ಅವರು ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಮತ್ತೆ ಮುನ್ನಲೆಗೆ ಬರಲು ಕಾರಣ, ತಂಡದ ಕೋಚ್​ ಬೌಚರ್​ ಕೆಲ ದಿನಗಳ ಹಿಂದೆ ರೋಹಿತ್​ ಅವರನ್ನು ನಾಯಕತ್ವದಿಂದ ಇಳಿಸಿದ್ದು ಕ್ರಿಕೆಟಿಂಗ್​ ಸೂತ್ರವಷ್ಟೇ ಬೇರೆ ಯಾವುದೇ ಕಾರಣವಿಲ್ಲ ಎಂದು ಹೇಳಿದ್ದರು. ಇದಕ್ಕೆ ರೋಹಿತ್​ ಪತ್ನಿ ರಿತಿಕಾ(Ritika ) ಇದರಲ್ಲಿ ಹಲವು ತಪ್ಪುಗಳಿವೆ ಎಂದು ಟಾಂಗ್​ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳು ನಡೆದ ಬಳಿಕ ರೋಹಿತ್​ ಮುಂಬೈ ಬಿಟ್ಟು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಲಿದ್ದಾರೆ ಎನ್ನುವ ಟಾಕ್​ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದೆ.

“ಭಾರತದಲ್ಲಿ ಕ್ರಿಕೆಟ್​ ಎನ್ನುವುದು ತುಂಬಾ ಭಾವನಾತ್ಮಕವಾಗಿರುತ್ತಾರೆ. ಈ ಭಾವನೆಗಳನ್ನು ದೂರವಿಡಿ. ರೋಹಿತ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಕ್ರಿಕೆಟಿಂಗ್​​ ನಿರ್ಧಾರ. ಬೇರೇನೂ ಇಲ್ಲ. ಬಹಳಷ್ಟು ಮಂದಿಗೆ ಇದು ಅರ್ಥವಾಗಿಲ್ಲ” ಎಂದು ಬೌಚರ್ ಹೇಳಿದ್ದರು.

ಮುಂಬೈ ಇಂಡಿಯನ್ಸ್ ನಿಂದ ಬಿಟ್ಟು ಬರುವಂತೆ ಡೆಲ್ಲಿ ಕ್ಯಾಪಿಟಲ್ಸ್ ರೋಹಿತ್​ ಅವರನ್ನು​ ಮನವೊಲಿಸುತ್ತಿದೆ ಎಂಬ ವದಂತಿಗಳು ಹರಡಿದೆ. ಅಷ್ಟೇ ಅಲ್ಲ, ರೋಹಿತ್ ಅವರ ಸಹವರ್ತಿಗಳಾದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಜಸ್​ಪ್ರೀತ್​ ಬುಮ್ರಾ ಅವರಿಗೂ ಬೇರೆ ತಂಡ ಗಾಳ ಹಾಕಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ IPL 2024: ಸಂಪೂರ್ಣವಾಗಿ ಐಪಿಎಲ್ ಟೂರ್ನಿ ಆಡಲಿದ್ದಾರೆ ಪಂತ್​; ಮಾಹಿತಿ ನೀಡಿದ ಕೋಚ್​

ರೋಹಿತ್​ ಶರ್ಮ ಅವರನ್ನು ರಾಯಲ್​ ಚಾಲೆಂಜರ್ಸ್ ತಂಡ ಟ್ರೇಡಿಂಗ್​ ವಿಂಡೋದ ಮೂಲಕ ಖರೀದಿ ಮಾಡಲಿದೆ ಎಂದು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಜೆರ್ಸಿಯಲ್ಲಿ ರೋಹಿತ್​ ಅವರ ಫೋಟೊವನ್ನು ಎಡಿಟ್​ ಮಾಡಿ ಎಲ್ಲಡೆ ಶೇರ್​ ಮಾಡಿಕೊಂಡಿದ್ದರು. ರೋಹಿತ್‌ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣದಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿತ್ತು.

“ಮುಂಬೈ ತಂಡ ಎಂದಿಗೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್‌ ತೆಂಡೂಲ್ಕರ್​ ಅವರಿಂದ ಹರ್ಭಜನ್‌ ತನಕ, ಪಾಂಟಿಂಗ್‌ ಅವರಿಂದ ರೋಹಿತ್‌ ತನಕ ಉತ್ತಮ ನಾಯಕರನ್ನು ಕಂಡಿದೆ. ಇವರಲ್ಲಿ ರೋಹಿತ್‌ ಅವರದು ಅತ್ಯಂತ ದೊಡ್ಡ ಕೊಡುಗೆ ಇದೆ. 5 ಬಾರಿ ತಂಡವನ್ನು ಚಾಂಪಿಯನ್​ ಮಾಡಿದ್ದಾರೆ. ಫ್ರಾಂಚೈಸಿ ಎಂದಿಗೂ ರೋಹಿತ್‌ಗೆ ಕೃತಜ್ಞವಾಗಿದೆ” ಎಂದು ಮುಂಬೈ ಇಂಡಿಯನ್ಸ್​ ತನ್ನ ವೆಬ್‌ಸೈಟ್‌ನಲ್ಲಿ ಬರೆದು ರೋಹಿತ್​ ಅವರನ್ನು ನಾಯಕ್ವದಿಂದ ಕೆಳಗಿಳಿಸಿದ ನಿರ್ಧಾರವನ್ನು ಪ್ರಕಟಿಸಿತ್ತು.

Exit mobile version