Site icon Vistara News

Rishabh Pant | ಆಡದಿದ್ದರೂ ಪರ್ವಾಗಿಲ್ಲ, ಐಪಿಎಲ್​ ವೇಳೆ ಪಂತ್​ ನನ್ನ ಜತೆಗಿರಬೇಕು ಎಂದು ಹೇಳಿದ ಡೆಲ್ಲಿ ಕ್ಯಾಪಿಟಲ್ಸ್​ ಕೋಚ್​​ ರಿಕಿ ಪಾಂಟಿಂಗ್​

Rickey ponting

ಮುಂಬಯಿ: ಭಾರತ ತಂಡದ ವಿಕೆಟ್​ಕೀಪರ್​ ಬ್ಯಾಟರ್ ರಿಷಭ್​ ಪಂತ್​ ಕಾರು ಅವಘಡದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ಅವರಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಅನಿರೀಕ್ಷಿತ ಅವಘಡದಿಂದಾಗಿ ಅವರು ಹಾಲಿ ಕ್ರಿಕೆಟ್​ ಋತುವಿನಲ್ಲಿ ಆಡುವುದು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಕೆಲವೇ ತಿಂಗಳಲ್ಲಿ ಆರಂಭವಾಗಲಿರುವ ಐಪಿಎಲ್ ಹಾಗೂ ಮುಂದಿನ ಏಕ ದಿನ ವಿಶ್ವ ಕಪ್​ನಲ್ಲಿ ಆಡುವುದು ಸಾಧ್ಯವಾಗುವುದಿಲ್ಲ. ಇದು ಡೆಲ್ಲ ಕ್ಯಾಪಿಟಲ್ಸ್​ ಹಾಗೂ ಟೀಮ್​ ಇಂಡಿಯಾ ತಂಡಕ್ಕೆ ದೊಡ್ಡ ಮಟ್ಟದ ನಷ್ಟ ಎನಿಸಿಕೊಂಡಿದೆ.

ಐಸಿಸಿ ವಿಮರ್ಶೆಯ ವೇಳೆ ಮಾತನಾಡಿದ ರಿಕಿ ಪಾಂಟಿಂಗ್​, ಎರಡು ದಿನಗಳ ಹಿಂದೆ ನಾನು ರಿಷಭ್​ ಪಂತ್​ ಜತೆ ಮಾತನಾಡಿದ್ದೆ. ಅವರು ಗುಣಮುಖರಾಗುತ್ತಿದ್ದಾರೆ. ಇದೊಂದು ಆಘಾತಕಾರಿ ಘಟನೆ. ಎಲ್ಲರೂ ಆತಂಕ ಪಡಬೇಕಾದ ಸಂಗತಿ. ಈಗ ಅವರನ್ನು ಗುಣಮುಖರಾಗಲು ಏಕಾಂಗಿಯಾಗಿ ಬಿಡುವುದು ಉತ್ತಮ ಎಂದು ಪಾಂಟಿಂಗ್ ಹೇಳಿದ್ದಾರೆ.

ಅವರು 2023ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡುವುದು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಹೀಗಾಗಿ ಅವರ ಪರ್ಯಾಯ ಆಟಗಾರರಿಗೆ ಹುಡುಕಾಟ ನಡೆಸುತ್ತಿದ್ದೇವೆ. ವಾಸ್ತವದಲ್ಲಿ ಅವರಿಗೆ ಪರ್ಯಾಯ ಇನ್ಯಾರೂ ಇಲ್ಲ. ಹೀಗಾಗಿ ರಿಷಭ್​ ಪೂರ್ತಿಯಾಗಿ ಗುಣಮುಖರಾಗದೇ ಹೋದರೂ ಅವರು ತಂಡದ ಜತೆ ಇರುವುದನ್ನು ನಾನು ಬಯಸುತ್ತೇನೆ ಎಂದು ರಿಕಿ ಪಾಂಟಿಂಗ್​ ಹೇಳಿದ್ದಾರೆ.

ಇದನ್ನೂ ಓದಿ | Rishabh pant | ಇನ್ನೆರಡು ವಾರಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ರಿಷಭ್​ ಪಂತ್​

Exit mobile version