ನವದೆಹಲಿ: ಪ್ಲೇ ಆಫ್ ರೇಸ್ನ ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಸೋತ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಹ್ವಾನ ಪಡೆದಿದೆ. ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪಂಜಾಬ್ ಕಿಂಗ್ಸ್ ಪ್ರತಿ ಪಂದ್ಯದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುತ್ತದೆ. ಆದರೆ ತಂಡಕ್ಕೆ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. 200ರ ಗಡಿ ದಾಟಿದರೂ ಅಂತಿಮ ಹಂತದಲ್ಲಿ ಎಡವಿ ಗೆಲ್ಲುವ ಪಂದ್ಯವನ್ನು ಸೋಲುತ್ತಿರುವುದು ವಿಪರಾಸ್ಯವೇ ಸರಿ. ಇನ್ನೊಂದೆಡೆ ಟಿ20 ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರನ್ ಅವರು ದುಬಾರಿಯಾಗುತ್ತಿರುವುದು ಕೂಡ ತಂಡಕ್ಕೆ ಕೊಂಚ ಹಿನ್ನಡೆಯಾಗಿ ಪರಿಣಮಿಸಿದೆ. ಉಳಿದಂತೆ ಎಲ್ಲ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಅರ್ಶ್ದೀಪ್ ಸಿಂಗ್ ಘಾತಕ ದಾಳಿ ನಡೆಸುವಲ್ಲಿ ಸಮರ್ಥರಿದ್ದಾರೆ. ಕಳೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ 6 ರನ್ಗಳನ್ನು ಕೊನೆಯ ಎಸೆತದ ವರೆಗೆ ಹಿಡಿದಿಟ್ಟುಕೊಂಡಿರುವುದು ಇದಕ್ಕೆ ಉತ್ತಮ ನಿದರ್ಶನ.
ಆಡಿದ 11 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಇಲ್ಲಿ ಗೆದ್ದರೂ, ಸೋತರು ಯಾವುದೇ ಚಿಂತೆ ಇಲ್ಲ. ಹೀಗಾಗಿ ಅವರು ಈ ಪಂದ್ಯದಲ್ಲಿ ಬಿಂದಾಸ್ ಆಗಿ ಕಣಕ್ಕಿಳಿಯಲಿದ್ದಾರೆ. ಡೆಲ್ಲಿ ಮುಂದಿರುವ ಪ್ರಮುಖ ಯೋಜನೆ ಎಂದರೆ ಪ್ಲೇ ಆಫ್ ಪ್ರವೇಶಕ್ಕೆ ಗೆಲ್ಲಲೇ ಬೇಕಾದ ತಂಡಗಳನ್ನು ಕಾಲೆಳೆದು ಈ ತಂಡಕ್ಕೂ ಶಾಕ್ ನೀಡುವುದು ಆದ್ಯ ಗುರಿಯಾಗಿದೆ. ಇದೇ ನಿಟ್ಟಿನಲ್ಲಿ ಡೆಲ್ಲಿ ತಂಡ ಪಂಜಾಬ್ಗೆ ಸೋಲಿನ ಶಾಕ್ ನೀಡೀತೇ ಎಂಬುದು ಈ ಪಂದ್ಯದ ಕುತೂಹಲವಾಗಿದೆ.
ಇದನ್ನೂ ಓದಿ IPL 2023: ಅಮೀರ್ ಖಾನ್ ಜತೆಗೆ ಫೋಟೊ ತೆಗೆಸಿಕೊಂಡ ಚಹಲ್-ಧನಶ್ರೀ ಜೋಡಿ
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್ : ಶಿಖರ್ ಧವನ್ (ನಾಯಕ), ಪ್ರಭ್ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಹರ್, ಅರ್ಶ್ದೀಪ್ ಸಿಂಗ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಅಕ್ಷರ್ ಪಟೇಲ್, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.