Site icon Vistara News

Bajrang Punia: ಬಜರಂಗ್​ ಪೂನಿಯಗೆ ಸಮನ್ಸ್ ನೀಡಿದ ದೆಹಲಿ ಕೋರ್ಟ್

Wrestler Bajrang Punia

ನವದೆಹಲಿ: ಒಲಿಂಪಿಯನ್​ ಕುಸ್ತಿಪಟು ಬಜರಂಗ್​ ಪೂನಿಯಗೆ(Bajrang Punia) ದೆಹಲಿಯ ಪಟಿಯಾಲ ಹೌಸ್ ಕೋರ್ಟ್​ ಸಮನ್ಸ್(Delhi Court Summons)​ ಜಾರಿಗೊಳಿಸಿದೆ. ಕುಸ್ತಿ ತರಬೇತುದಾರ ನರೇಶ್ ದಹಿಯಾ(coach Naresh Dahiya) ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಈ ಸಮನ್ಸ್​ ನೀಡಲಾಗಿದೆ.

ಸೆಪ್ಟೆಂಬರ್ 6 ರಂದು ಕೋರ್ಟ್​ಗೆ ಹಾಜರಾಗುವಂತೆ ಬಜರಂಗ್​ಗೆ ತಿಳಿಸಲಾಗಿದೆ. ಬ್ರಿಜ್​ ಭೂಷಣ್​ ಶರಣ್​ ಸಿಂಗ್(Brij Bhushan Sharan Singh)​ ಅವರ ವಿರುದ್ಧ ಹೋರಾಟ ನಡೆಸುತ್ತಿದ್ದ(wrestlers protest) ವೇಳೆ ಮೇ 10 ರಂದು ಜಂತರ್ ಮಂತರ್‌ನಲ್ಲಿ ಬಜರಂಗ್ ಪತ್ರಿಕಾಗೋಷ್ಠಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇದರಿಂದ ನಮಗೆ ಮಾನಹಾನಿ ಮಾಡಲಾಗಿದೆ ಎಂದು ದೂರುದಾರ ನರೇಶ್ ದಹಿಯಾ ನ್ಯಾಯಾಲಯಕ್ಕೆ ದೂರು ನಿಡಿದ್ದಾರೆ.

ಬಿಜೆಪಿ ಸಂಸದ, ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಅವರ ಬಂಧನಕ್ಕೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಇತರ ಕುಸ್ತಿಪಟುಗಳು ಭಾರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಜರಂಗ್​ ಪೂನಿಯ ಅವರು ನರೇಶ್ ದಹಿಯಾ ಕುರಿತು ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದರು. ಹೀಗಾಗಿ ಬಜರಂಗ್​ ವಿರುದ್ಧ ನರೇಶ್ ದಹಿಯಾ ಕೋರ್ಟ್​ಗೆ ದೂರು ನೀಡಿ ತಮ್ಮ ಮಾನಹಾನಿ ಮಾಡಿದವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ Wrestlers Protest: ಬಜರಂಗ ದಳಕ್ಕೆ ಬೆಂಬಲ ಸೂಚಿಸಿದ ಪ್ರತಿಭಟನಾನಿತರ ಕುಸ್ತಿಪಟು ಬಜರಂಗ್‌ ಪೂನಿಯ

ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಟ್ರಪಯಲ್ಸ್​ನಿಂದ ವಿನಾಯಿತಿ ಪಡೆದ ವಿಚಾರದಲ್ಲಿಯೂ ಬಜರಂಗ್​ ಸುದ್ದಿಯಲ್ಲಿದ್ದರು. ಅವರ ಆಯ್ಕೆಯನ್ನು ಪ್ರಶ್ನಿಸಿ ಇತರ ಕುಸ್ತಿಪಟುಗಳು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಅದನ್ನು ವಜಾಗೊಳಿಸಿದೆ. ಹೀಗಾಗಿ ಇಲ್ಲಿ ಬಜರಂಗ್​ಗೆ ಜಯ ಸಿಕ್ಕಿತ್ತು. ಸದ್ಯ ಅವರು ಏಷ್ಯನ್​ ಗೇಮ್ಸ್​ಗಾಗಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

Exit mobile version