Site icon Vistara News

WPL 2023 : ಮುಂಬಯಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಬ್ಯಾಟಿಂಗ್ ಆಯ್ಕೆ

Delhi team won the toss and chose to bat against Mumbai

#image_title

ಮುಂಬಯಿ: ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) ಏಳನೆ ಪಂದ್ಯ ಮುಂಬಯಿ ಇಂಡಿಯನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆಯಲಿದೆ. ಡಿವೈ ಪಾಟೀಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್​ ಲ್ಯಾನಿಂಗ್​ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಡೆಲ್ಲಿ ಹಾಗೂ ಮುಂಬಯಿ ಬಲಿಷ್ಠ ತಂಡವಾಗಿದ್ದು ಜಿದ್ದಾಜಿದ್ದಿನ ಹೋರಾಟ ನಡೆಯಲಿದೆ.

ಪಂದ್ಯದುದ್ದಕ್ಕೂ ಪಿಚ್ ಏಕ ರೀತಿಯಲ್ಲಿ ವರ್ತಿಸಲಿದೆ. ಹೀಗಾಗಿ ಮೊದಲು ಬ್ಯಾಟ್​​ ಮಾಡಿ ದೊಡ್ಡ ಮೊತ್ತ ಪೇರಿಸುವ ಗುರಿಯನ್ನು ಹೊಂದಿದ್ದೇವೆ. ಹೀಗಾಗಿ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡೆ ಎಂದು ಮೆಗ್​ಲ್ಯಾನಿಂಗ್​ ತಮ್ಮ ಆಯ್ಕೆಗೆ ಸಮರ್ಥನೆ ಕೊಟ್ಟಿದ್ದಾರೆ.

ತಂಡಗಳು ಇಲ್ಲಿವೆ

ಡೆಲ್ಲಿ ಕ್ಯಾಪಿಟಲ್ಸ್​ : ಮೆಗ್ ಲ್ಯಾನಿಂಗ್ (ನಾಯಕಿ) ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಮರಿಜನ್​ ಕಪ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸೆನ್, ತಾನಿಯಾ ಭಾಟಿಯಾ (ವಿಕೆಟ್​ಕೀಪರ್​), ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್.

ಮುಂಬಯಿ ಇಂಡಿಯನ್ಸ್​: ಯಾಸ್ತಿಕಾ ಭಾಟಿಯಾ (ವಿಕೆಟ್​ಕೀಪರ್​), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಹುಮೈರಾ ಕಾಜಿ, ಅಮಂಜೋತ್ ಕೌರ್, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

Exit mobile version