Site icon Vistara News

INDvsAUS : ಕೋಪದ ನಡುವೆಯೂ ಚೋಲೆ, ಬಟೂರೆ ತರಿಸಿಕೊಂಡು ತಿಂದ ವಿರಾಟ್​ ಕೊಹ್ಲಿ, ಅವರ ಖುಷಿ ಹೀಗಿತ್ತು!

Despite his anger, Virat Kohli brought chole and bature and ate it

Despite his anger, Virat Kohli brought chole and bature and ate it

ನವ ದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್​ ಸರಣಿ (INDvsAUS) ಎರಡನೇ ಪಂದ್ಯದಲ್ಲಿ ವಿರಾಟ್​ ಕೊಹ್ಲಿಗೆ (VIrat kohli) ಮೂರನೇ ಅಂಪೈರ್ ವಿವಾದಾತ್ಮಕ ಔಟ್ ನೀಡುತ್ತಾರೆ. ಇದರಿಂದ ಸಿಡಿಮಿಡಿಗೊಂಡ ಅವರು ಡಗ್​ಔಟ್​ನಲ್ಲಿ ಕುಳಿತು ಬಗೆಬಗೆಯಾಗಿ ತಮ್ಮ ಕೋಪ ವ್ಯಕ್ತಪಡಿಸಿದ್ದಾರೆ. ಅದೂ ಅಲ್ಲದೆ ಕೋಚ್​ ರಾಹುಲ್​ ದ್ರಾವಿಡ್​ ಅವರ ಜತೆ ಗಂಭೀರ ಚರ್ಚೆ ಮಾಡುತ್ತಾರೆ. ಇಷ್ಟೆಲ್ಲ ಸಿಟ್ಟಲ್ಲಿರುವ ಅವರಿಗೆ ಸಹಾಯಕ ಸಿಬ್ಬಂದಿಯೊಬ್ಬರು ದೆಹಲಿಯ ಜನಪ್ರಿಯ ತಿನಿಸುವ ಚೋಲೇ, ಬಟೂರೆ ತಂದುಕೊಡುತ್ತಾರೆ. ಅದನ್ನು ನೋಡುತ್ತಿದ್ದಂತೆ ಕೊಹ್ಲಿ ನೀಡಿದ ಪ್ರತಿಕ್ರಿಯೆ ವೈರಲ್​ ಆಗಿದೆ. ಸಂಜೆಯ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಚೋಲೆ ಬಟೂರೆ ಟ್ರೆಂಡ್ ಆಗಿತ್ತು.

ಡಗ್ಔಟ್​ನಲ್ಲಿ ಕುಳಿತು ದ್ರಾವಿಡ್​ ಜತೆ ಚರ್ಚೆ ಮಾಡುತ್ತಿದ್ದ ದ್ರಾವಿಡ್​ ಬಳಿಗೆ ಚೋಲೆ ಹಾಗೂ ಬಟೋರೆಯ ಪ್ಯಾಕೆಟ್​ ಅನ್ನು ಸಹಾಯಕ ಸಿಬ್ಬಂದಿ ತಂದುಕೊಡುತ್ತಾರೆ. ಅಷ್ಟು ಹೊತ್ತು ಗಂಭೀರ ಚರ್ಚೆ ನಡೆಸುತ್ತಿದ್ದ ಕೊಹ್ಲಿ ಪ್ಯಾಕೆಟ್​ ನೋಡುತ್ತಿದ್ದಂತೆ ಚಪ್ಪಾಳೆ ತಟ್ಟಿ ಒಳಗೆ ತಂದು ಇಡುವಂತೆ ಸಹಾಯಕ ಸಿಬ್ಬಂದಿಗೆ ಸೂಚಿಸುತ್ತಾರೆ. ಈ ದೃಶ್ಯ ನೇರ ಪ್ರವಾಸದ ಕ್ಯಾಮೆರಾಗಳಲ್ಲಿ ಸರೆಯಾಗಿದೆ.

ವಿರಾಟ್​ ಕೊಹ್ಲಿ ಚೋಲೆ, ಬಟೋರೆ ಪ್ರೇಮಿ. ಬಾಲ್ಯದಲ್ಲಿ ಅತಿ ಸಿಕ್ಕಾಪಟ್ಟೆ ಚೋಲೇ, ಬಟೂರೆ ತಿನ್ನುತ್ತಿದ್ದರು. ಅದರೆ, ವೃತ್ತಿಪರ ಕ್ರಿಕೆಟ್​ಗೆ ಧುಮುಕಿದ ಬಳಿಕ ಫಿಟ್ನೆಸ್​ಗಾಗಿ ಒಂದೊಂದೆ ಜಂಕ್​ ಫುಡ್​ಗಳನ್ನು ತ್ಯಜಿಸಿದ್ದರು. ಈ ವೇಳೆ ಚೋಲೆ ತಿನ್ನುವುದನ್ನೂ ನಿಲ್ಲಿಸಿದ್ದರು. ಡೈರಿ ಉತ್ಪನ್ನಗಳ ಸೇವನೆ ಸೇರಿದಂತೆ ಪೂರ್ಣ ಪ್ರಮಾಣದ ಸಸ್ಯಾಹಾರಿ ಎನಿಸಿಕೊಂಡಿದ್ದರು. ಆದರೂ, ದೆಹಲಿಗೆ ಹೋದ ಸಂದರ್ಭದಲ್ಲಿ ಚೋಲೇ, ಬಟೂರೆ ತಿನ್ನುತ್ತಾರೆ. ಅಂತೆಯೇ ಶನಿವಾರ ಸ್ಟೇಡಿಯಮ್​ಗೇ ಪಾರ್ಸೆಲ್​ ತರಿಸಿಕೊಂಡಿದ್ದರು.

ಏನಿದು ವಿವಾದಾತ್ಮಕ ತೀರ್ಪು?

ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಸಲ್ಲಿಸಿದ್ದ ಎಲ್​ಬಿಡಬ್ಲ್ಯು ಮನವಿಯನ್ನು ಪುರಸ್ಕರಿಸಿದ್ದ ಫೀಲ್ಡ್​ ಅಂಪೈರ್​ ನಿತಿನ್ ಮೆನನ್​ ವಿರಾಟ್​ ಕೊಹ್ಲಿ ಔಟ್​ ಎಂದು ಘೋಷಿಸಿದ್ದರು. ಚೆಂಡು ಬ್ಯಾಟಿಗೆ ತಗುಲಿದೆ ಎಂದು ಗೊತ್ತಾದ ವಿರಾಟ್​ ಕೊಹ್ಲಿ ಡಿಆರ್​ಎಸ್​ ಮೊರೆ ಹೋದರು. ಅಲ್ಲೂ ಚೆಂಡು ಕಾಲಿಗೆ ಬಡಿಯುವ ಮೊದಲು ಬ್ಯಾಟ್​ಗೆ ಬಡಿದಿರುವುದು ಗೊತ್ತಾಗಿತ್ತು. ಆದರೂ ಮೂರನೇ ಅಂಪೈರ್​ ಔಟ್​ ಎಂದು ಘೋಷಿಸಿದ್ದರು.

Exit mobile version