ಮೀರ್‌ಪುರ್ : ಭಾರತ ಮತ್ತ ಬಾಂಗ್ಲಾದೇಶ ನಡುವಿನ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಲಿಗೆ ಹೀರೋ ಆಗಬೇಕಾಗಿದ್ದ ಕೆ. ಎಲ್ ರಾಹುಲ್ ಏಕಾಏಕಿ ವಿಲನ್ ಆಗಿದ್ದಾರೆ. ಬಾಂಗ್ಲಾದೇಶ ವಿರುದ್ಧ ಅಜೇಯ ೩೮ ರನ್ ಬಾರಿಸಿದ್ದ ಮೆಹೆದಿ ಹಸನ್ ಅವರ ಸುಲಭ ಕ್ಯಾಚ್ ಕೈ ಚೆಲ್ಲುವ ಮೂಲಕ ತಂಡದ ಸೋಲಿಗೆ ಕಾರಣರಾದರು. ಹೀಗಾಗಿ ಪಂದ್ಯ ಮುಗಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಕೆ. ಎಲ್ ರಾಹುಲ್ ಟ್ರೆಂಡ್ ಆದರು.
ಮೀರ್‌ಪುರದ ಕಠಿಣ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೪೧.೨ ಓವರ್‌ಗಳಲ್ಲಿ ೧೮೬ ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ತಂಡದ ಘಟಾನುಘಟಿ ಬ್ಯಾಟರ್‌ಗಳು ವೈಫಲ್ಯ ಕಂಡ ವೇಳೆ ವಿಕೆಟ್‌ಕೀಪಿಂಗ್ ಕೋಟಾದಲ್ಲಿ ಸ್ಥಾನ ಪಡೆದಿದ್ದ ಕೆ. ಎಲ್ ರಾಹುಲ್ ಐದನೆಯವರಾಗಿ ಬ್ಯಾಟ್ ಮಾಡಲು ಇಳಿದರು. ಅಲ್ಲದೆ ಸಂಯಮದಿಂದ ಬ್ಯಾಟ್ ಬೀಸಿ ೭೦ ಎಸೆತಗಳಲ್ಲಿ ೭೩ ರನ್ ಬಾರಿಸಿದರು.ಅವರು ಔಟಾದ ಬಳಿಕ ಭಾರತ ತಂಡದ ಉಳಿದ ಬ್ಯಾಟರ್‌ಗಳೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದ ಕಾರಣ ಭಾರತ ತಂಡ ೧೮೬ ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ತಂಡ ಸಣ್ಣ ಮೊತ್ತ ಪೇರಿಸಿದ ಹೊರತಾಗಿಯೂ ಟೀಮ್ ಕೆ. ಎಲ್ ರಾಹುಲ್ ಹೀರೋ ಎನಿಸಿಕೊಂಡರು.
ಭಾರತ ತಂಡ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆದರೆ ಆ ಬಳಿಕ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಬೌಲರ್‌ಗಳು ಬಾಂಗ್ಲಾ ಬ್ಯಾಟರ್‌ಗಳನ್ನು ಕಟ್ಟಿ ಹಾಕಿದರು. ಆದರೆ, ಮೆಹೆದಿ ಹಸನ್ ಮಿರಾಜ್ (೩೮*) ಟೀಮ್ ಇಂಡಿಯಾದ ಗೆಲುವು ಕಸಿದರು. ಆದರೆ, ವಿಕೆಟ್‌ಕೀಪರ್ ಕೆ. ಎಲ್ ರಾಹುಲ್ ಮೆಹೆದಿ ಹಸನ್ ೧೫ ರನ್ ಗಳಿಸಿದ್ದಾಗ ನೀಡಿದ್ದ ಸುಲಭವಾಗಿ ನೀಡಿದ್ದ ಕ್ಯಾಚ್ ಅನ್ನು ಕೈ ಚೆಲ್ಲಿದ್ದರು. ಅದು ೧೦ನೇ ವಿಕೆಟ್ ಹಾಗೂ ೯ ವಿಕೆಟ್‌ಗೆ ೧೫೫ ರನ್ ಗಳಿಸಿತ್ತು.
ಈ ಕ್ಯಾಚ್ ಭಾರತ ತಂಡದ ಸೋಲಿಗೆ ಕಾರಣವಾಯಿತು. ಹೀಗಾಗಿ ಕೆ. ಎಲ್ ರಾಹುಲ್ ಒಂದೇ ಪಂದ್ಯದಲ್ಲಿ ಹೀರೊ ಹಾಗೂ ವಿಲನ್ ಎನಿಸಿಕೊಂಡರು.
ಇದನ್ನೂ ಓದಿ | INDvsBAN | ಗೆಲುವಿನ ಹೊಸ್ತಿಲಲ್ಲಿ ಎಡವಿದ ಭಾರತ, ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 1 ವಿಕೆಟ್ ವೀರೋಚಿತ ಸೋಲು