ದುಬೈ: ಟೀಮ್ ಇಂಡಿಯಾದ ಯುವ ಬ್ಯಾಟರ್ ರಿಷಭ್ ಪಂತ್(Rishabh Pant) ಅವರು 2022ರಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸದ್ಯ ಚೇತರಿಕೆಯ ಹಂತದಲ್ಲಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡುವ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಒಂದು ವರ್ಷಗಳಿಂದ ಕ್ರಿಕೆಟ್ ಆಡದಿದ್ದರೂ ಕೂಡ ಟೆಸ್ಟ್ ಬ್ಯಾಟಿಂಗ್(ICC Test Ranking) ಶ್ರೇಯಾಂಕದಲ್ಲಿ ಅವರ ಚಾರ್ಮ್ ಮಾತ್ರ ಕಡಿಮೆಯಾಗಿಲ್ಲ.
ಐಸಿಸಿ ನೂತನ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪಂತ್ 728 ರೇಟಿಂಗ್ ಅಂಕದೊಂದಿಗೆ 13ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಕ್ರಿಕೆಟ್ ಆಡದಿದ್ದರೂ ಕೂಡ ಪಂತ್ 758 ರೇಟಿಂಗ್ ಅಂಕದೊಂದಿಗೆ ಬಹುಕಾಲ 10ನೇ ಸ್ಥಾನದಲ್ಲಿದ್ದರು. ಸದ್ಯ ಈಗ ರೇಟಿಂಗ್ ಅಂಕದಲ್ಲಿ ಸಣ್ಣ ಮಟ್ಟದ ಕುಸಿತ ಕಾಣುತ್ತಲೇ ಸಾಗಿ 13ನೇ ಸ್ಥಾನ ಪಡೆದಿದ್ದಾರೆ. ಸತತವಾಗಿ ಟೆಸ್ಟ್ ಆಡುತ್ತಿರುವ ಬ್ಯಾಟರ್ಗಳಿಗೆ ಹೋಲಿಸಿದರೆ ಒಂದು ವರ್ಷದಿಂದ ಕ್ರಿಕೆಟ್ ಆಡದೆ ಪಂತ್ ಈ ಸ್ಥಾನ ಗಳಿಸಿರುವುದು ನಿಜಕ್ಕೂ ಗ್ರೇಟ್ ಎನ್ನಬಹುದು.
2022ರ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅರ್ಪಆತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.
ಸುಟ್ಟ ಗಾಯಗಳು ಹಾಗೂ ಮಂಡಿಗೆ ಗಾಯಗೊಂಡಿಗೆ ರಿಷಭ್ ಪಂತ್ಗೆ ಆರಂಭದಲ್ಲಿ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪಂತ್ ದುಬೈಯಲ್ಲಿ ಕ್ರಿಸ್ಮಸ್ ಪಾರ್ಟಿಯಲ್ಲಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.
Rehab & recovery 😪😇 pic.twitter.com/vCyP3f7Dnj
— Rishabh Pant (@RishabhPant17) January 9, 2024
ರಿಷಭ್ ಪಂತ್ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್ ಕ್ರಿಕೆಟ್ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಸದ್ಯ ತೇಚರಿಕೆ ಕಂಡಿರುವ ಪಂತ್ ಈ ಬಾರಿ ಐಪಿಎಲ್ ಆಡುವ ನಿರೀಕ್ಷೆಯಲ್ಲಿದ್ದಾರೆ. ಆದಷ್ಟು ಬೇಗ ಅವರು ಕ್ರಿಕೆಟ್ ಮೈದಾನಕ್ಕೆ(rishabh pant comeback) ಬರಲಿ ಎಂಬುದು ಅವರ ಅಭಿಮಾನಿಗಳ(rishabh pant fans) ಆಶಯಾಗಿದೆ.
ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ಸೆನ್ ಸಾಬೀತುಪಡಿಸಬೇಕಿದೆ.