ಮೊಹಾಲಿ: ರೋಹಿತ್ ಶರ್ಮ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ೦-೧ ಹಿನ್ನಡೆಗೆ ಒಳಗಾಗಿದೆ. ಸರಣಿಯನ್ನು ವಶಪಡಿಸಿಕೊಳ್ಳಬೇಕಾದರೆ, ಸೆಪ್ಟೆಂಬರ್ ೨೩ ಹಾಗೂ ೨೫ರಂದು ನಾಗ್ಪುರ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ದಾಖಲಿಸಲೇಕು. ಇಷ್ಟೆಲ್ಲ ಸವಾಲಿನ ನಡುವೆ ಮಂಗಳವಾರ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟ್ ಮಾಡಿ ಅರ್ಧ ಶತಕ (೫೫ ರನ್) ಬಾರಿಸಿರುವ ಕನ್ನಡಿಗ ಕೆ. ಎಲ್ ರಾಹುಲ್ ಭಾರತ ತಂಡದ ಪರ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಭಾರತ ತಂಡದ ಸ್ಟಾರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ರಾಹುಲ್ ಅವರು ಸದ್ಯ ಟೀಮ್ ಇಂಡಿಯಾ ಪರ ಅತಿ ವೇಗದಲ್ಲಿ ೨೦೦೦ ಟಿ೨೦ ರನ್‌ಗಳ ಗುರಿಯನ್ನು ದಾಟಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರದ ಪಂದ್ಯ ಅವರ ಪಾಲಿನ ೫೮ನೇ ಇನಿಂಗ್ಸ್. ಭಾರತ ಪರ ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು ೫೬ ಇನಿಂಗ್ಸ್‌ನಲ್ಲಿ ೨ ಸಹಸ್ರ ರನ್‌ಗಳ ದಾಖಲೆ ಮಾಡಿದ್ದಾರೆ.
ಪಾಕಿಸ್ತಾನದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ೫೨ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿ ಜಾಗತಿಕ ಕ್ರಿಕೆಟರ್‌ಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿಗೆ ಮೂರನೇ ಸ್ಥಾನವಾದರೆ, ಕೆ. ಎಲ್ ರಾಹುಲ್‌ಗೆ ನಾಲ್ಕನೇ ಸ್ಥಾನ.
ರಾಹುಲ್ ೨೦೦ ರನ್‌ಗಳ ಗಡಿ ದಾಟುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೂರನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಈ ಗಡಿ ದಾಟಿದ್ದರು.
ಇದನ್ನೂ ಓದಿ | Asia Cup | ವಿಕೆಟ್ ಕೀಪರ್‌ನಿಂದಲೇ ಬೌಲಿಂಗ್ ಮಾಡಿಸಿದ ಹಂಗಾಮಿ ನಾಯಕ ಕೆ. ಎಲ್ ರಾಹುಲ್