Site icon Vistara News

ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಗೆದ್ದರೂ ಟ್ರೋಲ್​ ಆದ ಸೂರ್ಯಕುಮಾರ್​ ಯಾದವ್​

Suryakumar Yadav, back to his favourite format, scored quickly

ಬೆಂಗಳೂರು: ಆಸ್ಟ್ರೇಲಿಯಾ(India vs Australia, 1st T20) ವಿರುದ್ಧ ಗುರುವಾರ ರಾತ್ರಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 2 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು. ಸೂಯಕುಮಾರ್​ ಯಾದವ್(Suryakumar Yadav)​ ಅವರು ಈ ಪಂದ್ಯದಲ್ಲಿ 80 ರನ್​ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಈ ಪ್ರದರ್ಶನ ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಸೂರ್ಯಕುಮಾರ್​ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾಗಿದ್ದರು. ಬ್ಯಾಟಿಂಗ್​ ಮರೆತವರಂತೆ ಆಡಿ ಒಂದೊಂದು ರನ್​ಗೂ ಪರದಾಡಿದ್ದರು. 28 ಎಸೆತ ಎದುರಿಸಿ ಕೇವಲ 18 ರನ್​ಗಳಿಸಿದ್ದರು. ಇದೀಗ ಟಿ20 ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ 80 ಬಾರಿಸಿದ್ದಾರೆ. ಅವರ ಈ ಪ್ರದರ್ಶನ ಕಂಡು ಅನೇಕ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿದ್ದಾರೆ.

ಈ ಪ್ರದರ್ಶನವನ್ನು ರೋಹಿತ್​ ಶರ್ಮ ಅವರು ನೋಡಿದರೆ ನಿಮ್ಮನ್ನು ಸುಮ್ಮನೆ ಬಿಡಲಾರರು, 80 ರನ್​ನಲ್ಲಿ 40 ರನ್​ ಬಾರಿಸುತ್ತಿದ್ದರೂ ಫೈನಲ್​ನಲ್ಲಿ ಭಾರತ ಗೆಲ್ಲುವ ಸಾಧ್ಯತೆ ಇತ್ತು. ಹೀಗೆ ಹಲವು ಟ್ವೀಟ್​ ಮೀಮ್ಸ್​ಗಳನ್ನು ಮಾಡಿ ಸೂರ್ಯಕುಮಾರ್​ ಅವರನ್ನು ಟ್ರೋಲ್​ ಮಾಡಿದ್ದಾರೆ.

22 ರನ್​ಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಕಂಡಿದ್ದ ತಂಡಕ್ಕೆ ನಾಯಕ ಸೂರ್ಯಕುಮಾರ್​ ಮತ್ತು ಇಶಾನ್​ ಕಿಶನ್​ ಬಿರುಸಿನ ಬ್ಯಾಟಿಂಗ್​ ಮೂಲಕ ಆಸರೆಯಾದರು. ಇಬ್ಬರು ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆ ಸುರಿಸಿದರು. ಆಸೀಸ್​ ಬೌಲರ್​ಗಳು ಲಯ ಕಳೆದುಕೊಂಡರು. ಬೌಂಡರಿ ಮೂಲಕವೇ ಇಶಾನ್​ ಅರ್ಧಶತಕ ಪೂರ್ತಿಗೊಳಿಸಿದರು.

ಇದನ್ನೂ ಓದಿ IND vs AUS: ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

ಸೂರ್ಯಕುಮಾರ್​ ಮುತ್ತು ಇಶಾನ್​ ಮೂರನೇ ವಿಕೆಟ್​ಗೆ 112ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿದರು. ಇಶಾನ್​ ವಿಕೆಟ್​ ಬಿದ್ದರೂ ವಿಚಲಿತರಾಗದ ಸೂರ್ಯ ತಮ್ಮ ಸ್ಫೋಟಕ ಬ್ಯಾಟಿಂಗ್​ ಮುಂದುವರಿಸಿದರು. ಅವರು ಕೂಡ ಸಿಕ್ಸರ್​ ಬಾರಿಸುವ ಅರ್ಧಶತಕ ಬಾರಿಸಿದರು.

ಇಶಾನ್​ ವಿಕೆಟ್​ ಪತನದ ಬಳಿಕ ಬಂದ ತಿಲಕ್​ ವರ್ಮ ಬಡಬಡನೆ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು. ಆದರೆ ಇದೇ ಆಟವನ್ನು ಮುಂದುವರಿಸುವಲ್ಲಿ ಎಡವಿದ ಅವರು 12 ರನ್​ಗೆ ವಿಕೆಟ್​ ಕೈಚೆಲ್ಲಿದರು. ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಆದರೆ ಎದೆಗುಂದದ ಸೂರ್ಯಕುಮಾರ್​ ಯಾದವ್ 42 ಎಸೆತಗಳಿಂದ 80 ರನ್​ ಬಾರಿಸಿ ಮತ್ತೆ ತಂಡದ ನೆರವಿಗೆ ನಿಂತರು. ಅವರ ಈ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು

Exit mobile version