Site icon Vistara News

Devendra Jhajharia: ಬಿಜೆಪಿ ಟಿಕೆಟ್​ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್ ಕಮಿಟಿ ಅಧ್ಯಕ್ಷರಾಗಿ ಆಯ್ಕೆಯಾದ ದೇವೇಂದ್ರ ಜಜಾರಿಯಾ

Devendra Jhajharia

ನವದೆಹಲಿ: ಪ್ಯಾರಾ ಒಲಿಂಪಿಕ್ ಪದಕ ವಿಜೇತ,​ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಜಜಾರಿಯಾ(Devendra Jhajharia) ಅವರನ್ನು ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (Paralympic Committee of India)ಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಪಿಸಿಐ ಕಾರ್ಯಕಾರಿ ಸಮಿತಿಯ ಅವಧಿ ಮುಗಿದ ಬಳಿಕವೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪಿಸಿಐಯ ಮಾನ್ಯತೆಯನ್ನು ಕ್ರೀಡಾ ಸಚಿವಾಲಯ ಫೆಬ್ರವರಿಯಲ್ಲಿ ಅಮಾನತಿನಲ್ಲಿಟ್ಟಿತ್ತು. ಮಾರ್ಚ್ 28ರಂದು ಚುನಾವಣೆ ನಡೆಸುವ ಪಿಸಿಐಯ ನಿರ್ಧಾರಕ್ಕೆ ಸೂಕ್ತ ಕಾರಣಗಳಿಲ್ಲ ಎಂದು ಸಚಿವಾಲಯ ಹೇಳಿತ್ತು. ಅಮಾನತಿನ ಬಳಿಕ, ಮಾರ್ಚ್ 9ರಂದು ಹೊಸದಿಲ್ಲಿಯಲ್ಲಿ ಚುನಾವಣೆ ನಡೆಸುವುದಾಗಿ ಪಿಸಿಐ ಘೋಷಿಸಿತ್ತು. ಕ್ರೀಡಾ ಸಚಿವಾಲಯವು ಮಂಗಳವಾರ, ತಕ್ಷಣದಿಂದ ಜಾರಿಗೆ ಬರುವಂತೆ ಪಿಸಿಐಯ ಅಮಾನತನ್ನು ಹಿಂದಕ್ಕೆ ಪಡೆದಿತ್ತು. ಇದೀಗ ಜಜಾರಿಯಾ ಅವರನ್ನು ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ನೇಮಿಸಲಾಗಿದೆ.

ಜಯವಂತ್ ಹಮ್ಮನವರ್ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು ಉಪಾಧ್ಯಕ್ಷರಾಗಿ ಆರ್.ಚಂದ್ರಶೇಖರ್ ಮತ್ತು ಸತ್ಯ ಪ್ರಕಾಶ್ ಸಾಂಗ್ವಾನ್, ಖಜಾಂಚಿ ಹುದ್ದೆಗೆ ಸುನಿಲ್ ಪ್ರಧಾನ್ ಒಬ್ಬರೇ ಅಭ್ಯರ್ಥಿ, ಲಲಿತ್ ಠಾಕೂರ್ ಮತ್ತು ಟಿ.ದಿವಾಕರ ಜಂಟಿ ಕಾರ್ಯದರ್ಶಿಗಳಾಗಿದ್ದಾರೆ.

ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಐದು ಕಾರ್ಯಕಾರಿ ಸಮಿತಿ ಸದಸ್ಯರ ಹುದ್ದೆಗೆ ಚುನಾವಣೆ ನಡೆದವು ಆರಂಭದಲ್ಲಿ ಐದು ಕಾರ್ಯಕಾರಿ ಸಮಿತಿ ಸದಸ್ಯರ ಹುದ್ದೆಗೆ ಎಂಟು ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು. ಆದರೆ, ಅವರಲ್ಲಿ ಮೂವರು ಸ್ಪರ್ಧೆಯಿಂದ ಹಿಂದೆ ಸರಿದರು.

ಇದನ್ನೂ ಓದಿ IPL 2024: ದ್ವಿತೀಯ ಹಂತದ ಐಪಿಎಲ್​ ವೇಳಾಪಟ್ಟಿ ಬಗ್ಗೆ ಬಿಗ್​ ಅಪ್ಡೇಟ್‌ ನೀಡಿದ ಅಧ್ಯಕ್ಷ ಧುಮಾಲ್

ಚುರು(Churu) ಕ್ಷೇತ್ರದಿಂದ ಸ್ಪರ್ಧೆ

ದೇವೇಂದ್ರ ಜಜಾರಿಯಾ ಅವರು ರಾಜಸ್ಥಾನದ ಚುರು(Churu) ಕ್ಷೇತ್ರದಿಂದ ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. 2016ರ ರಿಯೋ ಪ್ಯಾರಾ ಲಿಂಪಿಕ್ಸ್‌ನಲ್ಲಿ ದಿವ್ಯಾಂಗ ಕ್ರೀಡಾಪಟು, ಜಾವೆಲಿನ್‌ ತಾರೆ ದೇವೇಂದ್ರ ಜಜಾರಿಯಾ ಚಿನ್ನ ಜಯಿಸಿದ್ದರು. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು.

Exit mobile version