Site icon Vistara News

Devon Thomas: ಟಿ20 ವಿಶ್ವಕಪ್​ಗೂ ಮುನ್ನ ವಿಂಡೀಸ್​ ಬ್ಯಾಟರ್​ಗೆ 5 ವರ್ಷ ನಿಷೇಧ ಹೇರಿದ ಐಸಿಸಿ

Devon Thomas

ದುಬೈ: ವೆಸ್ಟ್​ ಇಂಡೀಸ್​(West Indies) ತಂಡದ ಡೆವೊನ್ ಥಾಮಸ್(Devon Thomas) ಅವರನ್ನು ಐದು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ನಿಯಮಗಳ ಏಳು ಉಲ್ಲಂಘನೆಗಳನ್ನು ಒಪ್ಪಿಕೊಂಡ ಬಳಿಕ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ICC) ಈ ನಿರ್ಧಾರ ಕೈಗೊಂಡಿದೆ. ಈ ಶಿಕ್ಷೆಯು ಒಂದು ವರ್ಷ ಪೂರ್ವಾನ್ವಯವಾಗಿದೆ ಎಂದು ಪರಿಗಣಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.

ವಿಂಡೀಸ್​ ಪರ 2009 ರಿಂದ 2022 ರವರೆಗೆ ಮೂರು ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಥಾಮಸ್ ಒಟ್ಟು 34(1 ಟೆಸ್ಟ್​, 21 ಏಕದಿನ, 12 ಟಿ20) ಪಂದ್ಯಗಳನ್ನು ಆಡಿ 320 ರನ್​ ಗಳಿಸಿದ್ದಾರೆ. 2022ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ ವಿರುದ್ಧ ಕೊನೆಯ ಬಾರಿ ಟೆಸ್ಟ್​ ಮತ್ತು ಏಕದಿನ ಪಂದ್ಯಗಳನ್ನಾಡಿದ್ದರು.

34 ವರ್ಷದ ಥಾಮಸ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಲಂಕಾ ಪ್ರೀಮಿಯರ್ ಲೀಗ್ ಮತ್ತು ಅಬುಧಾಬಿ ಟಿ10 ಎಂಬ ಮೂರು ಪ್ರತ್ಯೇಕ ಪಂದ್ಯಾವಳಿಗಳಲ್ಲಿ ಅಪರಾಧಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಶ್ರೀಲಂಕಾ ಮೂಲದ ಪಂದ್ಯಾವಳಿಯಲ್ಲಿ ಮ್ಯಾಚ್-ಫಿಕ್ಸಿಂಗ್ ಯತ್ನಗಳಲ್ಲಿ ಭಾಗಿಯಾಗಲು ಸಂಚು ರೂಪಿಸಿದ್ದಕ್ಕಾಗಿ ತಾನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವುದು ತಿಳಿದುಬಂದಿದೆ.

ಸ್ಯಾಮುಯೆಲ್ಸ್​ಗೆ 6 ವರ್ಷ ನಿಷೇಧ

ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್​ ತಂಡದ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್(Marlon Samuels) ಅವರನ್ನು ಆರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಕಳೆದ ವರ್ಷ ನಿಷೇಧಿಸಿತ್ತು.

2016ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ಸ್ಯಾಮುಯೆಲ್ಸ್ ಪ್ರಧಾನ ಪಾತ್ರವಹಿಸಿದ್ದರು. ಬೌಲಿಂಗ್ ಮತ್ತು ಬ್ಯಾಟಿಂಗ್​ ಸಾಹಸದಿಂದ ವಿಂಡೀಸ್​ ಕಪ್​ ಗೆದ್ದಿತ್ತು. ಇದೀಗ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಅವರನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಸ್ಯಾಮುಯೆಲ್ಸ್ ವಿರುದ್ಧ ಸೆಪ್ಟೆಂಬರ್ 2021 ರಲ್ಲಿ ಒಟ್ಟು ನಾಲ್ಕು ಆರೋಪಗಳನ್ನು ಹೊರಿಸಲಾಗಿತ್ತು. ಈ ವರ್ಷದ ಆಗಸ್ಟ್​ನಲ್ಲಿ ಅಪರಾಧಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರಿಗೆ 6 ವರ್ಷಗಳ ಕಾಲ ಕ್ರಿಕೆಟ್​ ನಿಷೇಧ ಹೇರಲಾಗಿತ್ತು.

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

2020ರಲ್ಲಿ ಸ್ಯಾಮುಯೆಲ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ನಿವೃತ್ತಿ ಘೋಷಿಸಿದ ಬಳಿಕ ಅವರು ಬೇರೆ ದೇಶಗಳಲ್ಲಿ ನಡೆಯುವ ಲೀಗ್​ ಕ್ರಿಕೆಟ್​ಗಳಲ್ಲಿ ಆಟ ಮುಂದುವರಿಸಿದ್ದರು. 43 ವರ್ಷದ ಸ್ಯಾಮುಯೆಲ್ಸ್ ಅವರು 11,000 ಅಂತಾರಾಷ್ಟ್ರೀಯ ರನ್​ಗಳನ್ನು ಗಳಿಸಿದ್ದಾರೆ. ವಿಂಡೀಸ್​ ಪರ 207 ಏಕದಿನ ಪಂದ್ಯಗಳನ್ನು ಆಡಿದ ಅವರು 75.12 ಸ್ಟ್ರೈಕ್​ರೇಟ್​ನಲ್ಲಿ 5606 ರನ್​ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು 30 ಅಧರ್ಶತಕ ಒಳಗೊಂಡಿದೆ. 133 ರನ್​ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 89 ವಿಕೆಟ್​ ಕೂಡ ಪಡೆದಿದ್ದಾರೆ. ಇನ್ನು 71 ಟೆಸ್ಟ್​ ಪಂದ್ಯಗಳಿಂದ 3917, ರನ್​ 7 ಶತಕ, 1 ದ್ವಿಶತಕ ಮತ್ತು 24 ಅರ್ಧಶತಕ ಬಾರಿಸಿದ್ದಾರೆ. 41 ವಿಕೆಟ್​ ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ 67 ಪಂದ್ಯ ಆಡಿ 1611 ರನ್​ ಮತ್ತು 22 ವಿಕೆಟ್​ ಉರುಳಿಸಿದ್ದಾರೆ.

Exit mobile version