ಜೊಹಾನ್ಸ್‌ಬರ್ಗ್ : ಮರಿ ಎಬಿಡಿ ವಿಲಿಯರ್ಸ್ ಎಂದೇ ಕರೆಯಲಾಗುವ ದಕ್ಷಿಣ ಆಫ್ರಿಕಾದ ಯುವ ಬ್ಯಾಟರ್ ಡೀವಾಲ್ಡ್ ಬ್ರೆವಿಸ್ ದೇಶಿಯ ಟಿ೨೦ ಕ್ರಿಕೆಟ್‌ನಲ್ಲಿ (CSA T20 Challenge) ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ಆಟಗಾರನಾಗಿರುವ ಸಿಎಸ್‌ಎ ಕ್ರಿಕೆಟ್ ಚಾಲೆಂಜ್ ಟೂರ್ನಿಯ ಪಂದ್ಯವೊಂದರಲ್ಲಿ ೫೭ ಎಸೆತಗಳಲ್ಲಿ ೧೬೨ ರನ್ ಬಾರಿಸಿದ್ದು, ಟಿ೨೦ ಮಾದರಿಯಲ್ಲಿ ಗರಿಷ್ಠ ರನ್ ಬಾರಿಸಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಹಜರುತುಲ್ಲಾ ಜಜೈ ಹಾಗೂ ಹ್ಯಾಮಿಲ್ಟನ್ ಮಜಕಡ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟೈಟನ್ಸ್ ತಂಡದ ಪರ ಆಡಿರುವ ಡೀವಾಲ್ಡ್ ಬ್ರೆವಿಸ್, ನೈಟ್ಸ್ ತಂಡದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ೧೮ ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಬ್ರೆವಿಸ್, ಮುಂದಿನ ೫೦ ರನ್‌ಗಳನ್ನು ೧೭ ಎಸೆತಗಳಲ್ಲಿ ಬಾರಿಸಿದ್ದರು. ಹೀಗೆ ೩೫ ಎಸೆತಗಳಲ್ಲಿ ಶತಕ ಬಾರಿಸಿದ ಅವರು ಕನಿಷ್ಠ ಎಸೆತಗಳಲ್ಲಿ ದೇಶಿಯ ಟೂರ್ನಿಯಲ್ಲಿ ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲು ಬ್ಯಾಟರ್ ಎಂಬ ದಾಖಲೆ ಬರೆದರು.
೨೦ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ಡಿವಾಲ್ಡ್ ಬ್ರೆವಿಸ್, ಕ್ರಿಸ್ ಗೇಲ್ ಅವರ ೧೭೫ ರನ್‌ಗಳ ದಾಖಲೆಯನ್ನು ಮುರಿಯುವ ಅವಕಾಶ ಕಳೆದುಕೊಂಡರು. ಯುವ ಆಟಗಾರನ ದಾಖಲೆಯ ರನ್‌ನೊಂದಿಗೆ ಟೈಟನ್ಸ್ ತಂಡ ತನ್ನ ಪಾಲಿನ ೨೦ ಓವರ್‌ಗಳಲ್ಲಿ ೨೭೧ ರನ್ ಬಾರಿಸಿತು.
ಡಿವಾಲ್ಡ್ ಬ್ರೆವಿಸ್ ಅವರನ್ನು ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಎಸ್‌ಎ೨೦ ಟೂರ್ನಿಗೆ ಎಮ್‌ಐ ಕೇಪ್‌ಟೌನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ | T20 World Cup | ಟಿ20 ವಿಶ್ವ ಕಪ್ಗೆ ಮಳೆ ಕಾಟ; ಶುಕ್ರವಾರದ ಎರಡೂ ಪಂದ್ಯಗಳು ರದ್ದು