Site icon Vistara News

Sri Lanka Test Captain: ಶ್ರೀಲಂಕಾ ಟೆಸ್ಟ್​ ತಂಡಕ್ಕೆ ಧನಂಜಯ ಡಿ ಸಿಲ್ವ ನೂತನ ನಾಯಕ

Dhananjaya de Silva

ಕೊಲಂಬೊ: ರಾಜಕೀಯ ಹಸ್ತಕ್ಷೇಪದಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸಿದ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಇದೀಗ ಟೆಸ್ಟ್​ ತಂಡಕ್ಕೆ ನೂತನ(Sri Lanka’s new Test captain) ನಾಯಕನನ್ನು ನೇಮಕ ಮಾಡಿದೆ. ಆಲ್ ರೌಂಡರ್ ಧನಂಜಯ ಡಿ ಸಿಲ್ವ(Dhananjaya de Silva) ಅವರನ್ನು ಟೆಸ್ಟ್​ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಟಿ20 ಮತ್ತು ಏಕದಿನ ತಂಡಕ್ಕೆ ಹೊಸ ನಾಯಕರನ್ನು ಲಂಕಾ ಕ್ರಿಕೆಟ್ ಮಂಡಳಿ ನೇಮಿಸಿತ್ತು.

ವಾನಿಂದು ಹಸರಂಗ ಟಿ20, ಏಕದಿನ ತಂಡಕ್ಕೆ ಕುಸಾಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿಸಿ ನೇಮಿಸಿತ್ತು. ಇದೀಗ ಟೆಸ್ಟ್​ಗೆ ಧನಂಜಯ ಡಿ ಸಿಲ್ವ ಆಯ್ಕೆಯಾಗಿದ್ದಾರೆ. ಮೂರು ಮಾದರಿಯ ಕ್ರಿಕೆಟ್​ಗೆ ಮೂರು ನಾಯಕರು ಕಾಣಿಸಿಕೊಳ್ಳಲ್ಲಿದ್ದಾರೆ.

32 ವರ್ಷದ ಧನಂಜಯ ಡಿ ಸಿಲ್ವ ಅವರು ಅಫಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯದ ಮೂಲಕ ತಮ್ಮ ನಾಯಕನ ಜವಾಬ್ದಾರಿಯನ್ನು ಆರಂಭಿಸಲಿದ್ದಾರೆ. ಡಿ ಸಿಲ್ವ ಲಂಕಾದ 12ನೇ ಟೆಸ್ಟ್​ ನಾಯಕ ಎನಿಸಿಕೊಂಡಿದ್ದಾರೆ. ಡಿ ಸಿಲ್ವ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಲಂಕಾ ಕ್ರಿಕೆಟ್​ ಮಂಡಳಿ ಹೇಳಿದೆ. 51 ಟೆಸ್ಟ್‌ ಗಳನ್ನಾಡಿರುವ ಧನಂಜಯ ಡಿ ಸಿಲ್ವ 40 ರ ಸರಾಸರಿ ಯಲ್ಲಿ 3301 ರನ್‌ಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ IND vs SA: ದಿಟ್ಟ ಹೋರಾಟ ನೀಡಿ ಸರಣಿ ಸಮಬಲ ಸಾಧಿಸಿದ ಭಾರತ

ಇದಕ್ಕೂ ಮುನ್ನ 2019 ಮತ್ತು 2023ರ ನಡುವೆ 30 ಟೆಸ್ಟ್‌ಗಳಲ್ಲಿ ದಿಮುತ್ ಕರುಣಾರತ್ನೆ ಅವರು ನಾಯಕತ್ವ ವಹಿಸಿದ್ದರು. ಇವರ ನಾಯಕತ್ವದಲ್ಲಿ 12 ಪಂದ್ಯಗಳಲ್ಲಿ ಗೆಲುವು, 12 ಸೋಲು, 6 ಡ್ರಾ ಸಾಧಿಸಿತ್ತು.

ಲಂಕಾ ಕ್ರಿಕೆಟ್ ಮಂಡಳಿಯನ್ನು ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ದ್ವೀಪ ರಾಷ್ಟ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅಮಾನತಿನ ದಂಡನೆಯನ್ನು ವಿಧಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ 9 ಪಂದ್ಯಗಳಲ್ಲಿ ಕೇವಲ 2 ಗೆಲುವುಗಳೊಂದಿಗೆ ಐಸಿಸಿ ಕ್ರಿಕೆಟ್ ವಿಶ್ವಕಪ್​ನಿಂದ ಹೊರಗುಳಿದಿತ್ತು. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವಲ್ಲಿಯೂ ವಿಫಲರಾಗಿದ್ದಾರೆ.

ಬ್ರಿಸ್ಬೇನ್​ ​: ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್ ವಾರ್ನರ್ ತಮ್ಮ ನಿವೃತ್ತಿಯ ನಂತರ ಆಸ್ಟ್ರೇಲಿಯಾದ ಸ್ಪೋರ್ಟ್ಸ್​ ಚಾನೆಲ್​ ಫಾಕ್ಸ್ ಸ್ಪೋರ್ಟ್ಸ್​​​ನಲ್ಲಿ ಕ್ರಿಕೆಟ್​​ ವೀಕ್ಷಕ ವಿವರಣೆಗಾರರಾಗಿ ಹೊಸ ಪ್ರಯಾಣವನ್ನು ಪ್ರಾರಂಭಿಸಲಿದ್ದಾರೆ. ಈ ಮೂಲಕ ಅವರು ದಿವಂಗತ ಶೇನ್ ವಾರ್ನ್ ಮತ್ತು ಆಂಡ್ರ್ಯೂ ಸೈಮಂಡ್ಸ್ ಅವರ ಸ್ಥಾನವನ್ನು ತುಂಬಲು ನಿರ್ಧರಿಸಿದ್ದಾರೆ.

ಚಾನೆಲ್ ಸೆವೆನ್ ಜೊತೆಗಿನ 1.5 ಬಿಲಿಯನ್ ಡಾಲರ್ ಟೆಲಿವಿಷನ್ ಹಕ್ಕುಗಳ ಒಪ್ಪಂದದ ಪ್ರಕಟಣೆಯ ಸಂದರ್ಭದಲ್ಲಿ ಎಸ್ಸಿಜಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಫಾಕ್ಸ್​ಟೆಲ್​ ಸಿಇಒ ಪ್ಯಾಟ್ರಿಕ್ ಡೆಲಾನಿ, ವಾರ್ನ್ ಮತ್ತು ಸೈಮಂಡ್ಸ್ ಅವರಿಗೆ ಪರ್ಯಾಯವಾಗಿ ಮುಂದುವರಿಯುವುದಾಗಿ ಹೇಳಿದರು.

ಸಾಕಷ್ಟು ಯೋಚಿಸಿದ ನಂತರ ವಾರ್ನರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಎತ್ತಿ ತೋರಿಸಿದರು. ಡೆಲಾನಿ ವಾರ್ನರ್ ಅವರನ್ನು ‘ಹೋರಾಟಗಾರ’ ಎಂದು ಬಣ್ಣಿಸಿದರು. ಕ್ರಿಕೆಟ್ ಕಾಮೆಂಟರಿ ದೃಶ್ಯಕ್ಕೆ ಉತ್ಸಾಹವನ್ನು ತರಬಲ್ಲ ಅವರ ಸಾಮರ್ಥ್ಯವನ್ನು ಉಲ್ಲೇಖಿಸಿದರು.

Exit mobile version