Site icon Vistara News

Ind vs NZ : ಧರ್ಮಶಾಲಾ ಕ್ರೀಡಾಂಗಣದ ದಾಖಲೆ, ಮತ್ತಿತರ ವಿವರ ಇಲ್ಲಿದೆ

Dharmashala Cricket stadium

ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ (ಎಚ್ಪಿಸಿಎ ಸ್ಟೇಡಿಯಂ) ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023 ರಲ್ಲಿ ಭಾರತವು ನ್ಯೂಜಿಲ್ಯಾಂಡ್​ ತಂಡವನ್ನು (Ind vs NZ) ಎದುರಿಸಲಿದೆ. ಈ ಕ್ರೀಡಾಂಗಣದ ಗಾತ್ರವು ಚಿಕ್ಕದಾಗಿದ್ದು ದೊಡ್ಡ ಮೊತ್ತದ ಪಂದ್ಯ ನಡೆಯುವುದು ಬಹುತೇಕ ಖಚಿತ. ಈ ಸ್ಟೇಡಿಯಮ್​ನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 2013 ರಲ್ಲಿ ಆಡಲಾಯಿತು. ಇದು ವಿಶ್ವ ಕಪ್​ನಲ್ಲಿ ನಾಲ್ಕನೇ ಪಂದ್ಯವಾಗಿದೆ. ಅಕ್ಟೋಬರ್ 22 ರಂದು ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೆ ಮುಂಚಿತವಾಗಿ ಧರ್ಮಶಾಲಾ ಕ್ರೀಡಾಂಗಣದ ಅಂಕಿಅಂಶಗಳು ಮತ್ತು ದಾಖಲೆಗಳನ್ನು ಗಮನಿಸೋಣ.

ಧರ್ಮಶಾಲಾ ಕ್ರೀಡಾಂಗಣದ ದಾಖಲೆ

10 ವರ್ಷಗಳಲ್ಲಿ (2013-2023) ಎಚ್​​ಪಿಸಿಎ ಕ್ರೀಡಾಂಗಣದಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಾಗಿದೆ. ಈ ಪಂದ್ಯಗಳಲ್ಲಿ, ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 203.

203 ರನ್​ಗಳನ್ನು ಕಡಿಮೆ ಮೊತ್ತವೆಂದು ಪರಿಗಣಿಸಲಾಗಿದ್ದರೂ, ಧರ್ಮಶಾಲಾದಲ್ಲಿ ಬೌಲಿಂಗ್ ಸ್ನೇಹಿ ಮೇಲ್ಮೈಯಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 3 ಪಂದ್ಯಗಳನ್ನು ಗೆದ್ದಿದೆ.

2023ರಲ್ಲಿ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿದ್ದು ಇಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ, 2017 ರಲ್ಲಿ ಶ್ರೀಲಂಕಾ ವಿರುದ್ಧ ಭಾರತ 112 ರನ್ ಗಳಿಸಿದ್ದು ಇಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿದೆ.

ಈ ಸುದ್ದಿಗಳನ್ನೂ ಓದಿ:
ICC World Cup 2023 : ದ. ಆಫ್ರಿಕಾ- ಇಂಗ್ಲೆಂಡ್ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಾದ ಬದಲಾವಣೆಯೇನು?
ICC World Cup 2023: ಪಾಕ್​ ಅಭಿಮಾನಿಗಳಿಗೂ ಪಾಕಿಸ್ತಾನ ಜಿಂದಾಬಾದ್​ ಹೇಳಲು ಬಿಡದ ಪೊಲೀಸರು​; ಆರೋಪ

2023ರಲ್ಲಿ ಡೇವಿಡ್ ಮಲಾನ್ 140 ರನ್ ಗಳಿಸಿದ್ದು ಅತ್ಯುತ್ತಮ ವೈಯಕ್ತಿಕ ಬ್ಯಾಟಿಂಗ್ ಸ್ಕೋರ್ ಆಗಿದೆ. ಅಂತೆಯೇ, ಇಲ್ಲಿ ದಾಖಲಾದ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು 2017ರಲ್ಲಿ ಸುರಂಗ ಲಕ್ಮಲ್ ಅವರ 10-4-13-4 ಆಗಿದೆ.

2017ರಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್ ಕಳೆದುಕೊಂಡು 16 ಎಸೆತಗಳು ಬಾಕಿ ಇರುವಾಗಲೇ 227 ರನ್​ಗಳ ಗುರಿ ಬೆನ್ನಟ್ಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲ್ಯಾಂಡ್ಸ್ 245 ರನ್​ಗಳನ್ನು ಕಾಪಾಡಿ ಗೆದ್ದಿತ್ತು.

ಧರ್ಮಶಾಲಾದಲ್ಲಿ ಭಾರತದ ಅಂಕಿ ಅಂಶ

ಭಾರತ ಇಲ್ಲಿ 4 ಪಂದ್ಯಗಳಲ್ಲಿ ಭಾಗಿಯಾಗಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ ಇಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಸೋತಿದ್ದ ಮೆನ್ ಇನ್ ಬ್ಲೂ ತಂಡ ಧರ್ಮಶಾಲಾದಲ್ಲಿ 2-2 ಅಂತರದ ಗೆಲುವು/ಸೋಲಿನ ದಾಖಲೆಯನ್ನು ಹೊಂದಿದೆ.

ನ್ಯೂಜಿಲೆಂಡ್ ಅಂಕಿ ಅಂಶ

ಎಚ್ಪಿಸಿಎ ಕ್ರೀಡಾಂಗಣದಲ್ಲಿ ಕಿವೀಸ್ ಕೇವಲ ಒಂದು ಪಂದ್ಯವನ್ನು ಆಡಿದೆ ಮತ್ತು 1-0 ಗೆಲುವು / ಸೋಲಿನ ದಾಖಲೆಯನ್ನು ಹೊಂದಿದೆ. 2016ರಲ್ಲಿ ಭಾರತ ವಿರುದ್ಧ ಭಾರತ 101 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್​ಗಳ ಜಯ ಸಾಧಿಸಿತ್ತು.

ನ್ಯೂಜಿಲ್ಯಾಂಡ್​ ಮೇಲುಗೈ

ಭಾರತ ವಿರುದ್ದ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲ್ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಿದೆ. ಹೀಗಾಗಿ ರೋಹಿತ್​ ಶರ್ಮಾ ನೇತೃತ್ವದ ತಂಡವು ಕಿವೀಸ್ ಒಡ್ಡುವ ಸವಾಲಿನ ಬಗ್ಗೆ ಜಾಗರೂಕವಾಗಿದೆ. ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳು ಆಡಿದ ಎಂಟು ಪಂದ್ಯಗಳಲ್ಲಿ ನ್ಯೂಜಿಲೆಂಡ್ ಐದು ಬಾರಿ ಗೆದ್ದಿದೆ.

ಭಾರತವು 2004ರಿಂದ ಐಸಿಸಿ ಪಂದ್ಯಾವಳಿಗಳಲ್ಲಿ ನ್ಯೂಜಿಲೆಂಡ್ ಅನ್ನು ಒಮ್ಮೆ ಮಾತ್ರ ಸೋಲಿಸಿದೆ ಮತ್ತು ಎಂಟು ಬಾರಿ ಸೋತಿದೆ. 2019ರ ಏಕದಿನ ವಿಶ್ವಕಪ್​​ನ ಸೆಮಿಫೈನಲ್​​ನಲ್ಲಿ ಕಿವೀಸ್ ವಿರುದ್ಧವೇ ಭಾರತ ಸೋಲುವ ಮೂಲಕ ಶತಕೋಟಿ ಭಾರತೀಯರ ಕನಸುಗಳನ್ನು ಭಗ್ನಗೊಳಿಸಿತ್ತು. ಆದ್ದರಿಂದ, ಕಳೆದ ಎರಡು ದಶಕಗಳಲ್ಲಿ ನ್ಯೂಜಿಲೆಂಡ್ ವಿರುದ್ಧದ ಹಲವಾರು ಸೋಲುಗಳಿಗೆ ಸೇಡು ತೀರಿಸಿಕೊಳ್ಳುವು ಬಗ್ಗೆ ಭಾರತ ಕಣ್ಣಿಟ್ಟಿದ್ದರೆ, ಟಾಮ್ ಲೇಥಮ್ ನೇತೃತ್ವದ ತಂಡವು ಆತಿಥೇಯರ ವಿರುದ್ಧ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ.

Exit mobile version