Site icon Vistara News

Dhayn Chand Khel Ratna | ಕ್ರೀಡಾ ಕ್ಷೇತ್ರದ ಅತ್ಯುನ್ನತ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿ ಸ್ವೀಕರಿಸಿದ ಶರತ್‌ ಕಮಾಲ್‌

achanta sharath kamal

ನವದೆಹಲಿ: ಭಾರತದ ಹಿರಿಯ ಟೇಬಲ್‌ ಟೆನಿಸ್‌ ಪಟು ಅಚಂತ ಶರತ್‌ ಕಮಾಲ್‌ ಅವರು ೨೦೨೨ನೇ ಸಾಲಿನ ಪ್ರತಿಷ್ಠಿತ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಗೆ (Dhayn Chand Khel Ratna) ಭಾಜನರಾದರು. ಬುಧವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ತಮಿಳುನಾಡು ಮೂಲದ ಶರತ್‌ ಕಮಾಲ್‌ ಅವರು ಬರ್ಮಿಂಗ್ಹಮ್‌ನಲ್ಲಿ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಮೂರು ಚಿನ್ನ ಸೇರಿದಂತೆ ಒಟ್ಟಾರೆ ನಾಲ್ಕು ಪದಕಗಳನ್ನು ಗೆದ್ದಿದ್ದರು. ಜತೆಗೆ ಟಿಟಿ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದರು. ಹೀಗಾಗಿ ಅವರನ್ನು ದೇಶದ ಅತ್ಯನ್ನತ ಕ್ರೀಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಳಿದಂತೆ ಲಾಂಗ್‌ಜಂಪ್‌ ಪಟು ಎಲ್ದೋಸ್‌ ಪೌಲ್‌, ಸ್ಟೀಪಲ್‌ಚೇಸ್‌ ಸ್ಪರ್ಧಿ ಅವಿನಾಶ್‌ ಸಬ್ಲೆ, ಬ್ಯಾಡ್ಮಿಂಟನ್‌ ಪಟು ಲಕ್ಷ್ಯ ಸೇನ್‌, ಬಾಕ್ಸರ್‌ ನಿಖತ್‌ ಜರೀನ್‌ ಸೇರಿದಂತೆ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಸಾಧನೆ ಮಾಡಿದ್ದ ಹಲವರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.

ಅತ್ಯುನ್ನತ ಕ್ರೀಡಾ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿವೆ.

ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ

ಅಚಂತ ಶರತ್​ ಕಮಾಲ್​ಟೆಬಲ್​ ಟೆನಿಸ್​

ಅರ್ಜುನ ಪ್ರಶಸ್ತಿ ಪಡೆದವರ ಪಟ್ಟಿ

ಸೀಮಾ ಪುನಿಯಾಅಥ್ಲೆಟಿಕ್ಸ್
ಎಲ್ದೋಸ್ ಪಾಲ್ಅಥ್ಲೆಟಿಕ್ಸ್
ಅವಿನಾಶ್ ಮುಕುಂದ್ ಸಬ್ಲೆಅಥ್ಲೆಟಿಕ್ಸ್
ಲಕ್ಷ್ಯ ಸೇನ್ಬ್ಯಾಡ್ಮಿಂಟನ್​
ಎಚ್​.ಎಸ್​ ಪ್ರಣಯ್ಬ್ಯಾಡ್ಮಿಂಟನ್
ಅಮಿತ್​ ಪಂಗಾಲ್​ಬಾಕ್ಸಿಂಗ್
ನಿಖತ್ ಜರೀನ್ಬಾಕ್ಸಿಂಗ್
ಪ್ರದೀಪ್ ಕುಲಕರ್ಣಿಚೆಸ್
ಆರ್. ಪ್ರಜ್ಞಾನಂದಚೆಸ್
ದೀಪ್​ ಗ್ರೇಸ್ ಎಕ್ಕಾಹಾಕಿ
ಸುಶೀಲಾ ದೇವಿಜೂಡೋ
ಸಾಕ್ಷಿ ಕುಮಾರಿಕಬಡ್ಡಿ
ನಯನ್ ಮೋನಿ ಸೈಕಿಯಾಲಾನ್ ಬೌಲ್ಸ್‌
ಸಾಗರ್ ಕೈಲಾಸ್ ಓವಲ್ಕರ್ಮಲ್ಲಕಂಬ
ಎಲವೆನಿಲ್ ವಲರಿವನ್ಶೂಟಿಂಗ್​
ಓಂಪ್ರಕಾಶ್ ಮಿಥರ್ವಾಲ್ಶೂಟಿಂಗ್​
ಶ್ರೀಜಾ ಅಕುಲ್​ಟೇಬಲ್​ ಟೆನಿಸ್​
ವಿಕಾಸ್ ಠಾಕೂರ್ವೇಟ್​ಲಿಫ್ಟಿಂಗ್​
ಅಂಶುಕುಸ್ತಿ
ಸರಿತಾಕುಸ್ತಿ
ಪರ್ವೀನ್ವುಶು
ಮಾನಸಿ ಜೋಶಿಪ್ಯಾರಾ ಬ್ಯಾಡ್ಮಿಂಟನ್
ತರುಣ್ ಧಿಲ್ಲೋನ್ಪ್ಯಾರಾ ಬ್ಯಾಡ್ಮಿಂಟನ್
ಸ್ವಪ್ನಿಲ್ ಸಂಜಯ್ ಪಾಟೀಲ್ಪ್ಯಾರಾ ಸ್ವಿಮ್ಮಿಂಗ್
ಜೆರ್ಲಿನ್ ಅನಿಕಾ ಜೆಡೆಫ್ ಬ್ಯಾಡ್ಮಿಂಟನ್

ದ್ರೋಣಾಚಾರ್ಯ ಪ್ರಶಸ್ತಿ ಪಟ್ಟಿ

ಜೀವನ್ಜೋತ್ ಸಿಂಗ್ ತೇಜಾಆರ್ಚರಿ
ಮೊಹಮ್ಮದ್ ಅಲಿ ಕಮರ್ಬಾಕ್ಸಿಂಗ್​
ಸುಮಾ ಸಿದ್ಧಾರ್ಥ್ ಶಿರೂರ್ಪ್ಯಾರಾ ಶೂಟಿಂಗ್
ಸುಜೀತ್ ಮಾನ್ಕುಸ್ತಿ

ಜೀವಮಾನ ಪ್ರಶಸ್ತಿ ಪಟ್ಟಿ

ದಿನೇಶ್ ಜವಾಹರ್ ಲಾಡ್ಕ್ರಿಕೆಟ್​
ಬಿಮಲ್ ಪ್ರಫುಲ್ಲ ಘೋಷ್ಫುಟ್ಬಾಲ್
ರಾಜ್ ಸಿಂಗ್ಕುಸ್ತಿ

ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ

ಅಶ್ವಿನಿ ಅಕ್ಕುಂಜೆಅಥ್ಲೆಟಿಕ್ಸ್
ಧರಂವೀರ್ ಸಿಂಗ್ಹಾಕಿ
ಬಿ ಸಿ ಸುರೇಶ್ಕಬಡ್ಡಿ
ನಿರ್ ಬಹದ್ದೂರ್ ಗುರುಂಗ್ಪ್ಯಾರಾ ಅಥ್ಲೆಟಿಕ್ಸ್

ಇದನ್ನೂ ಓದಿ | IND VS NZ | ಮಳೆಯಿಂದ ಅಂತಿಮ ಪಂದ್ಯ ರದ್ದು; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್​

Exit mobile version