Site icon Vistara News

ಕೋಡ್​ ವರ್ಡ್​ ಮೂಲಕ ವಿಶ್ವಕಪ್​ ಗೆಲ್ಲಲು ಭಾರತ ತಂಡಕ್ಕೆ ಸಲಹೆ ನೀಡಿದ ಧೋನಿ

ms dhoni rohit sharma

ರಾಂಚಿ: ಎರಡು ವಿಶ್ವಕಪ್​ ವಿಜೇತ, ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್​ನಲ್ಲಿ(ICC World Cup 2023) ಭಾರತ ತಂಡ ತೋರುತ್ತಿರುವ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್​ ಕುರಿತ ಸಂದರ್ಶನದಲ್ಲಿ ಮಾತನಾಡಿದ ಧೋನಿ, “ಇದು ತುಂಬಾ ಒಳ್ಳೆಯ ತಂಡ. ತಂಡದ ಬ್ಯಾಲೆನ್ಸ್ ತುಂಬಾ ಚೆನ್ನಾಗಿದೆ. ಎಲ್ಲ ಆಟಗಾರರು ಉತ್ತಮವಾಗಿ ಆಡುತ್ತಿದ್ದಾರೆ. ಆದ್ದರಿಂದ ಎಲ್ಲವೂ ತುಂಬಾ ಚೆನ್ನಾಗಿ ಕಾಣುತ್ತದೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನೂ ಹೇಳುವುದಿಲ್ಲ. ಬುದ್ಧಿವಂತರಿಗೆ ಈ ಸಿಗ್ನಲ್ ಸಾಕು” ಎಂದು ಟೀಮ್​ ಇಂಡಿಯಾ ಪ್ರದರ್ಶನವನ್ನು ಹೊಗಳುವ ಜತೆಗೆ ಗೆಲುವಿನ ತಂತ್ರದ ಸಿಗ್ನಲ್ ಕೋಡ್​ ವರ್ಡ್​ ಮೂಲಕ ನೀಡಿದ್ದಾರೆ. ಧೋನಿ ಅವರ ಕೋಡ್​ ವರ್ಡ್​ ‘ಬುದ್ಧಿವಂತರಿಗೆ ಈ ಸಿಗ್ನಲ್ ಸಾಕು” ಎನ್ನುವುದಾಗಿದೆ. ಇದರ ಹಿಂದಿರುವ ರಹಸ್ಯ ಧೋನಿ ಮತ್ತು ತಂಡಕ್ಕೆ ಮಾತ್ರವೇ ತಿಳಿದಿದೆ.

Ben Stokes : ಬೆಂಗಳೂರಿನ ಆಟೋ ಡ್ರೈವರ್​ನ ವೇಗಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್​ ಆಟಗಾರ ಬೆನ್​ಸ್ಟೋಕ್ಸ್​​

ನಿವೃತ್ತಿಯ ರಹಸ್ಯ ಬಿಚಿಟ್ಟ ಧೋನಿ

ಇದೇ ವೇಳೆ ಧೋನಿ ಅವರು ತಮ್ಮ ನಿವೃತ್ತಿಯ ರಹಸ್ಯವನ್ನು ಮೂರು ವರ್ಷಗಳ ಬಳಿಕ ರಿವೀಲ್ ಮಾಡಿದರು. ವಾಸ್ತವವಾಗಿ ಧೋನಿ ಆಗಸ್ಟ್​ 15, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಧೋನಿ ಅವರು ತಮ್ಮ ಮನಸ್ಸಿನಲ್ಲಿ 2019 ವಿಶ್ವಕಪ್​ನಲ್ಲಿ ಕಿವೀಸ್​ ವಿರುದ್ಧ ಭಾರತ ಸೋಲುತ್ತಿದಂತೆ ತಮ್ಮ ನಿವೃತ್ತಿಯನ್ನು ನಿರ್ಧರಿಸಿದ್ದರು ಎಂದು ಈಗ ಹೇಳಿದ್ದಾರೆ.

“ಅಂದು ಪಂದ್ಯವನ್ನು ಸೋತಾಗ ಭಾವನೆಗಳನ್ನು ನಿಯಂತ್ರಣ ಮಾಡುವುದು ನನಗೆ ಕಷ್ಟವಾಗಿತ್ತು. ನನಗೆ ಅದುವೇ ಕೊನೆಯ ಪಂದ್ಯವಾಗಿತ್ತು. ಆದರೆ ಇದನ್ನು ಹೇಳಲಾಗದ ಸ್ಥಿತಿಯಲ್ಲಿದ್ದೆ. ನಾನು ವರ್ಷದ ಬಳಿಕ ನಿವೃತ್ತಿ ಘೋಷಣೆ ಮಾಡಿದರೂ ಕೂಡಾ ನನ್ನ ತಲೆಯಲ್ಲಿ ನಾನು ಅಂದೇ ನಿವೃತ್ತನಾಗಿದ್ದೆ” ಎಂದು ಧೋನಿ ಹೇಳಿದರು.

ಕಮರಿದ ಭಾರತದ ವಿಶ್ವಕಪ್ ಫೈನಲ್​​ ಕನಸು

2019ರ ವಿಶ್ವಕಪ್​ ಎಂದಾಗ ನೆನಪಾಗುವುದು ಧೋನಿಯ ರನೌಟ್.​(ms dhoni run out 2019) ನ್ಯೂಜಿಲ್ಯಾಂಡ್​ ವಿರುದ್ಧದ ಆ ಪಂದ್ಯದಲ್ಲಿ ಧೋನಿ ಕೊನೆಯ ಹಂತದಲ್ಲಿ ರನೌಟ್​ ಆಗುದರೊಂದಿಗೆ ಭಾರತದ ಫೈನಲ್‌ ಕನಸು ಕಮರಿ ಹೋಗಿತ್ತು.

ಗೆಲುವು ಕಸಿದ ಗಪ್ಟಿಲ್​

ಅದು, 2019ರ ವಿಶ್ವಕಪ್‌ ಸೆಮಿಫೈನಲ್‌. ಸ್ಥಳ ಮ್ಯಾಂಚೆಸ್ಟರ್‌. ಮೀಸಲು ದಿನದಲ್ಲಿ ಭಾರತ ಗೆಲುವಿವೆ 239 ರನ್‌ ಚೇಸಿಂಗ್‌ ಲಭಿಸಿತ್ತು. 5 ರನ್ನಿಗೆ 3 ವಿಕೆಟ್‌ ಕಳೆದುಕೊಂಡ ವಿರಾಟ್​ ಕೊಹ್ಲಿ ಬಳಗಕ್ಕೆ ಭಾರೀ ಗಂಡಾಂತರ ಎದುರಾಗಿತ್ತು. ಆದರೆ ಮಹೇಂದ್ರ ಸಿಂಗ್​ ಧೋನಿ ಮತ್ತು ರವೀಂದ್ರ ಜಡೇಜಾ ಸೇರಿಕೊಂಡು ಇನ್ನಿಂಗ್ಸ್‌ ಒಂದನ್ನು ಕಟ್ಟತೊಡಗಿದರು. ಶತಕದ ಜತೆಯಾಟ ದಾಖಲಾಯಿತು. ಭಾರತ ಗೆಲುವಿನ ಹಾದಿಗೆ ಮರಳುತ್ತಿತ್ತು. ಇದೇ ವೇಳೆ ಜಡೇಜಾ ನಿರ್ಗಮನ. ಆ ಬಳಿಕವೂ ಧೋನಿ ಹೋರಾಟವನ್ನು ಜಾರಿಯಲ್ಲಿರಿಸಿದ್ದರು.

ಇದನ್ನೂ ಓದಿ VVS Laxman : ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ವಿವಿಎಸ್​ ಲಕ್ಷ್ಮಣ್​ ಕೋಚ್​?

ಕಣ್ಣೀರು ಸುರಿಸಿದ್ದ ಧೋನಿ

49ನೇ ಓವರ್‌ನಲ್ಲಿ ಧೋನಿ ಅರ್ಧ ಶತಕ ಪೂರೈಸಿದರು. ಧೋನಿ ಸ್ಟ್ರೈಕ್​ನಲ್ಲಿರುವವರೆಗೆ ಭಾರತಕ್ಕೆ ಗೆಲುವ ಖಚಿತ ಎಂದು ಎಲ್ಲ ಭಾರತೀಯರು ನಂಬಿದ್ದರು. ಆದರೆ ಎರಡು ರನ್​ ಓಡುವಾಗ ಮಾರ್ಟಿನ್‌ ಗಪ್ಟಿಲ್‌ ಅವರ ಡೈರೆಕ್ಟ್‌ ಥ್ರೋ ಧೋನಿಯನ್ನು ರನೌಟ್‌ ಮಾಡಿತು. ಅಲ್ಲಿಗೆ ಭಾರತದ ಫೈನಲ್‌ ಕನಸು ಕಮರಿ ಹೋಯಿತು. ಧೋನಿ ಕಣ್ಣೀರು ಸುರಿಸುತ್ತಾ ಪೆವಿಲಿಯನ್‌ ಕಡೆಗೆ ನಡೆದರು. ಡಗ್​ಔಟ್​ನಲ್ಲಿದ್ದ ರೋಹಿತ್​ ಶರ್ಮ, ವಿರಾಟ್​ ಕೊಹ್ಲಿ ಸೇರಿ ಎಲ್ಲ ಆಟಗಾರರು ಕೂಡ ಕಣ್ಣೀರು ಕಾಹಿದರು. ಅತ್ತ ಸ್ಟೇಡಿಯಂನಲ್ಲಿ ನೀರವ ಮೌನ ಉಂಡಾಯಿತು. ಎಲ್ಲ ಭಾರತೀಯಕರು ಕೂಡ ಸೋಲಿನ ಬೇಸರದಲ್ಲಿ ಗಪ್ಟಿಲ್​ಗೆ ಹಿಡಿ ಶಾಪ ಹಾಕುತ್ತ ಸ್ಟೇಡಿಯಂನಿಂದ ಹೊರ ನಡೆದರು. ಭಾರತ 18 ರನ್​ಗಳ ಸೋಲು ಕಂಡಿತು.

Exit mobile version